ಕ್ರಿಕೆಟ್

ಭಾರತ-ಪಾಕ್ ಫೈನಲ್ ತಲುಪಿದರೂ ಪಂದ್ಯ ಆಡಬಾರದು, ನಮಗೆ ದೇಶವೇ ಮೊದಲು: ಗಂಭೀರ್

Srinivas Rao BV
ನವದೆಹಲಿ: ಇಂಗ್ಲೆಂಡ್ ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ನಲ್ಲಿ ಭಾರತ, ಪಾಕಿಸ್ತಾನ ವಿರುದ್ಧ ಜ.16 ರಂದು ಕಣಕ್ಕೆ ಇಳಿಯಬಾರದು. ಒಂದು ವೇಳೆ ಎರಡೂ ತಂಡಗಳು ಫೈನಲ್ ಗೆ ಅರ್ಹತೆ ಪಡೆದಲ್ಲಿಯೂ ಭಾರತ ಅಖಾಡದಿಂದ ಹಿಂದೆ ಸರಿಯಬೇಕೆಂದು ಭಾರತ ತಂಡದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ. 
ಮೇ 30 ರಿಂದ ಆರಂಭವಾಗಲಿರುವ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ, ಸಾಂಪ್ರದಾಯಿಕ ಎದುರಾಳಿ ವಿರುದ್ಧ ಕಣಕ್ಕೆ ಇಳಿಯಬಾರದು. ಈ ಮೂಲಕ ವಿಶ್ವಕ್ಕೆ ಸಂದೇಶ ರವಾನಿಸಬೇಕಿದೆ. ದೇಶ ಮೊದಲು ದೇಶಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗಿರಬೇಕು ಎಂದಿದ್ದಾರೆ. 
ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಸಿಆರ್ ಪಿಎಫ್ ಯೋಧರ ಬಸ್ ಮೇಲೆ ಉಗ್ರ ಸಂಘಟನೆ ನಡೆಸಿದ ದಾಳಿಯನ್ನು ಗೌತಮ್ ಗಂಭೀರ್ ತೀವ್ರವಾಗಿ ಖಂಡಿಸಿದ್ದರು. ಅಲ್ಲದೆ ಪಾಕ್ ವಿರುದ್ಧ ಯಾವುದೇ ಆಟ ಬೇಡ ಎಂದು ತಿಳಿಸಿದ್ದರು.
SCROLL FOR NEXT