ಕ್ರಿಕೆಟ್

ಐಪಿಎಲ್ 2019: ಕ್ಯಾಪ್ಟನ್ ಕೊಹ್ಲಿ ಎಡವಟ್ಟು, ಕೈ ತಪ್ಪಿದ ಅಪರೂಪದ ದಾಖಲೆ!

Srinivasamurthy VN
ಚೆನ್ನೈ: ಭಾರಿ ಕುತೂಹಲ ಕೆರಳಿಸಿದ್ದ ಐಪಿಎಲ್ ಟೂರ್ನಿ ನಿರೀಕ್ಷೆಯಂತೆಯೇ ಭರ್ಜರಿ ಆರಂಭ ಪಡೆದಿದ್ದು, ಮೊದಲ ಪಂದ್ಯದಲ್ಲೇ ಕ್ಯಾಪ್ಟನ್ ಕೊಹ್ಲಿ ತಮ್ಮದೇ ಎಡವಟ್ಟಿನಿಂದ ತಮ್ಮ ಹೆಸರಲ್ಲಿ ದಾಖಲಾಗಬೇಕಿದ್ದ ಅಪರೂಪದ ದಾಖಲೆಯನ್ನು ಮಿಸ್ ಮಾಡಿಕೊಂಡಿದ್ದಾರೆ.
ಹೌದು.. ಭಾರಿ ಕುತೂಹಲ ಕೆರಳಿಸಿದ್ದ ಬಿಸಿಸಿಐನ ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ ಟೂರ್ನಿಗೆ ಶನಿವಾರ ಚಾಲನೆ ನೀಡಲಾಗಿದ್ದು, ಮೊದಲ ಪಂದ್ಯವೇ ಭಾರಿ ರೋಚಕತೆ ಮೂಡಿಸಿತ್ತು. ಮೊದಲ ಪಂದ್ಯದಲ್ಲಿ ಆರ್ ಸಿಬಿಯನ್ನು ಎಲ್ಲ ಕಡೆಗಳಿಂದಲೂ ಕಟ್ಟಿಹಾಕಿದ ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಆರ್ ಸಿಬಿ ವಿರುದ್ಧ 7 ವಿಕೆಟ್ ಭರ್ಜರಿ ಗೆಲುವು ಸಾಧಿಸಿ, ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಅಂತೆಯೇ ಟೂರ್ನಿಯ ಮೊದಲ ಪಂದ್ಯದಲ್ಲೇ ದಾಖಲೆಗಳ ನಿರ್ಮಾಣ ಕೂಡ ಆರಂಭವಾಗಿದೆ. ಸಿಎಸ್ ಕೆ ತಂಡದ ಸುರೇಶ್ ರೈನಾ ಇದೇ ಪಂದ್ಯದಲ್ಲಿ ತಮ್ಮ ಐಪಿಎಲ್ ರನ್ ಗಳಿಕೆಯನ್ನು 5 ಸಾವಿರಕ್ಕೆ ಏರಿಕೆ ಮಾಡಿಕೊಂಡರು. ಆ ಮೂಲಕ ಐಪಿಎಲ್ ನಲ್ಲಿ 5 ಸಾವಿರ ರನ್ ಪೂರೈಸಿದ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾದರು. ಆದರೆ ಇದೇ ಪಂದ್ಯದಲ್ಲಿ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮದೇ ಸ್ವಯಂಕೃತ ಅಪರಾಧದಿಂದ ತಮ್ಮ ಹೆಸರಿಗೆ ದಾಖಲಾಗಬೇಕಿದ್ದ ದಾಖಲೆಯನ್ನು ಮಿಸ್ ಮಾಡಿಕೊಂಡರು.
ಹೌದು.. ಸುರೇಶ್ ರೈನಾ ಹೆಸರಿಗೆ ದಾಖಲಾದ 5 ಸಾವಿರ ರನ್ ದಾಖಲಿಸಿದ ಮೊದಲ ಆಟಗಾರ ಎಂಬ ದಾಖಲೆಯನ್ನು ಕೊಹ್ಲಿ ಸಾಧಿಸುವ ಅವಕಾಶವಿತ್ತು. ಆದರೆ ಕೊಹ್ಲಿ ನಿರೀಕ್ಷೆಗಿಂತ ಬೇಗ ಔಟಾಗಿ ಈ ದಾಖಲೆ ಮಿಸ್ ಮಾಡಿಕೊಂಡರು. ನಿನ್ನೆ 12 ಎಸೆತಗಳಲ್ಲಿ  ರನ್ ಗಳಿಸಿ ಹರ್ಭಜನ್ ಸಿಂಗ್ ಬೌಲಿಂಗ್ ನಲ್ಲಿ ಜಡೇಜಾಗೆ ಕ್ಯಾಚ್ ನೀಡಿ ಔಟಾದರು. ಆದರೆ ಕೊಹ್ಲಿ ಇನ್ನು ಕೇವಲ 2 ರನ್ ಗಳಿಸಿದ್ದರೆ ರೈನಾಗಿಂತ ಮೊದಲೇ 5 ಸಾವಿರ ಐಪಿಎಲ್ ರನ್ ಪೂರೈಸಿದ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾಗುತ್ತಿದ್ದರು.
ವಿರಾಟ್ ಕೊಹ್ಲಿ ಒಟ್ಟು 155 ಐಪಿಎಲ್ ಇನ್ನಿಂಗ್ಸ್‌ ಗಳಲ್ಲಿ 4,948 ರನ್‌ ಗಳಿಸಿದ್ದಾರೆ. 
SCROLL FOR NEXT