ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2019ನೇ ಆವೃತ್ತಿಯ ಮಂಗಳವಾರದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 6 ವಿಕೆಟ್ ಅಂತರದ ಜಯ ಸಾಧಿಸಿದೆ.
ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಡೆಲ್ಲಿ ಮೊದಲು ಬ್ಯಾಟಿಂಗ್ ನಡೆಸಿತ್ತು. ನಿಗದಿತ ಇಪ್ಪತ್ತು ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿದ್ದ ಡೆಲ್ಲಿ ಚೆನ್ನೈಗೆ ಸುಲಭದ ಟಾರ್ಗೆಟ್ ನೀಡಿತು.
ಡೆಲ್ಲಿ ನೀಡಿದ ಗುರಿ ಬೆನ್ನತ್ತಿದ ಚೆನ್ನೈ 19.4 ಓವರ್ ಗಳಲ್ಲೇ 4 ವಿಕೆಟ್ ಅನ್ಷ್ಟಕ್ಕೆ 150 ರನ್ ಗಳಿಸಿ ವಿಜೇತ ತಂಡವಾಗಿ ಹೊರಹೊಮ್ಮಿದೆ. ಇದರೊಡನೆ ಐಪಿಎಲ್ ಸರಣಿಯ ಎರಡನೇ ಪಂದ್ಯದಲ್ಲಿಯೂ ಜಯ ಸಾಧ್ಸಿರುವ ಚೆನ್ನೈ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಶ್ರೇಯಸ್ ಅಯ್ಯರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಶಿಖರ್ ಧವನ್ (51), ಪ್ರಥ್ವಿ ಶಾ (24), ರಿಷಬ್ ಪಂತ್ ೯24), ಶ್ರೇಯಸ್ ಅಯ್ಯರ್ ೯18) ರನ್ ಗಳಿಸಿ ಉತ್ತಮ ಪ್ರದರ್ಶನ ನೀಡಿದ್ದರು.
ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಶೇನ್ ವಾಟ್ಸನ್ ೯18), ಎಂಎಸ್ ಧೋನಿ ೯32), ಸುರೇಶ್ ರೈನಾ (30), ಕೇದಾರ್ ಜಾಧವ್ (27), ರನ್ ಗಳಿಸಿ ತಂಡವನ್ನು ಗೆಲುವಿನ ಹಾದಿಗೆ ತಂದಿದ್ದರು.
ಬೌಲಿಂಗ್ ವಿಭಾಗದಲ್ಲಿ ಚೆನ್ನೈನ ಹರ್ಭಜನ್ ಸಿಂಗ್ ಹಾಗೂ ಬ್ರಾವೋ 2 ವಿಕೆಟ್ ಪಡೆದಿದ್ದರೆ ದೀಪಕ್ ಚಹಾರ್ ಒಂದು ವಿಕೆಟ್ ಗಳಿಸಿದ್ದರು. ಇನ್ನು ಡೆಲ್ಲಿ ಪರವಾಗಿ ಅಮಿತ್ ಮಿಶ್ರಾ 2, ರಬಡಾ ಹಾಗೂ ಇಶಾಂತ್ ಶರ್ಮಾ ತಲಾ ಒಂದೊಂದು ವಿಕೆಟ್ ಗಳಿಸಿದ್ದರು