ನವದೆಹಲಿ: 2000ರ ದಶಕದಲ್ಲಿ ಬೌಲರ್‌ಗಳಿಗೆ ಸಿಂಹ ಸ್ವಪ್ನರಾಗಿದ್ದ ಪಾಕಿಸ್ತಾನ ತಂಡದ ಮಾಜಿ ಆಲ್‌ರೌಂಡರ್ ಶಾಹೀದ್ ಅಫ್ರಿದಿ ಅವರು ತಮ್ಮ ಜನುಮ ದಿನದ ಕುರಿತಂತೆ ಸ್ಪಷ್ಟತೆ ನೀಡಿದ್ದಾರೆ.
ಅಧಿಕೃತವಾಗಿ ಶಾಹೀದ್ ಅಫ್ರಿದಿ ಜನಿಸಿರುವುದು 1980 ಎಂದು ತೋರಿಸಲಾಗುತ್ತಿದೆ. ಆದರೆ, ತಾವು ಜನಿಸಿರುವುದು 1975ರಲ್ಲಿ ಎಂದು ಮಾಜಿ ಪಾಕಿಸ್ತಾನ ತಂಡದ ನಾಯಕ ತಮ್ಮ ಆತ್ಮ ಚರಿತ್ರೆ ಬರೆದುಕೊಂಡಿದ್ದಾರೆ. ಆದರೆ, ತಿಂಗಳು ಹಾಗೂ ದಿನಾಂಕವನ್ನು ಉಲ್ಲೇಖಿಸಿಲ್ಲ.
1996ರಲ್ಲಿ ನೈರೋಬಿದಲ್ಲಿ ನಡೆದಿದ್ದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 37 ಎಸೆತಗಳಲ್ಲಿ ಶತಕ ಸಿಡಿಸಿದಾಗ ಅಫ್ರಿದಿಗೆ 16 ವರ್ಷ ವಯಸ್ಸಾಗಿತ್ತು. ಆದರೆ, 'ನನಗೆ ಆಗ 19 ವರ್ಷ ವಯಸ್ಸಾಗಿತ್ತು. 16 ಎಂದು ಎಲ್ಲೆಡೆ ಬರೆಯಲಾಗಿತ್ತು.1975ರಲ್ಲಿ ನಾನು ಜನಿಸಿದ್ದು, ಮಂಡಳಿಯಿಂದ ಆದ ತಪ್ಪಿನಿಂದ ವಯಸ್ಸು ಕಡಿಮೆಯಾಯಿತು ಎಂದು ತಮ್ಮ ಜೀವನ ಚರಿತ್ರೆ ಪುಸ್ತಕ 'ಗೇಮ್ ಚೇಂಜರ್' ನಲ್ಲಿ ಅಫ್ರಿದಿ ಬರೆದುಕೊಂಡಿದ್ದಾರೆ.
ಮಾಜಿ ಪಾಕಿಸ್ತಾನ ನಾಯಕ 27 ಟೆಸ್ಟ್, 398 ಏಕದಿನ ಪಂದ್ಯಗಳು ಹಾಗೂ 99 ಟಿ-20 ಪಂದ್ಯಗಳನ್ನು ಆಡಿದ್ದಾರೆ. 2017ರ ಫ್ರಬ್ರವರಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು.
ಕಾಶ್ಮೀರ ಕಣಿವೆ ರಾಜ್ಯದಲ್ಲಿ ವಾಸಿಸುವವರಿಗೆ ಸೇರಿದ್ದು, ಇದು ಭಾರತ ಅಥವಾ ಪಾಕಿಸ್ತಾನಕ್ಕೆ ಸೇರಿದಲ್ಲ ಎಂದು ಹೇಳುವ ಮೂಲಕ ಅಫ್ರಿದಿ ಕಳೆದ ಕೆಲವು ದಿನಗಳ ಹಿಂದೆ ಸುದ್ದಿ ಆಗಿದ್ದರು. ಇದೀಗ ತಮ್ಮ ಜನ್ಮ ದಿನಾಂಕದ ವಿಚಾರದಲ್ಲಿ ಸುದ್ದಿಯಾಗಿದ್ದಾರೆ.
ಕಾಶ್ಮೀರ ಹಾಗೂ ಅಲ್ಲಿನ ಜನತೆಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಕಡ್ಡಾಯವಾಗಿ ಶ್ರಮ ವಹಿಸಬೇಕು ಎದು ಆತ್ಮ ಚರಿತ್ರೆಯಲ್ಲಿ ಅಫ್ರಿದಿ ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos