ಐಪಿಎಲ್ 2019: ಕೆಕೆಆರ್ ವಿರುದ್ಧ ಮುಂಬೈಗೆ 9 ವಿಕೆಟ್ ಜಯ
ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಪ್ರಸಕ್ತ ಆವೃತ್ತಿಯ ಭಾನುವಾರದ ಎರಡನೇ ಪಂದ್ಯದಲ್ಲಿ ಮುಂಬಯಿ ಇಂಡಿಯನ್ಸ್ ಕೋಲ್ಕತಾ ನೈಟ್ ರೈಡರ್ಸ್ ವಿರುದ್ದ 9 ವಿಕೆಟ್ ಭರ್ಜರಿ ಜಯ ಸಾಧಿಸಿದೆ.
ಮುಂಬೈ ನಾಯಕ ರೋಹಿತ್ ಶರ್ಮ 48 ಎಸೆತಗಳಲ್ಲಿ ಔಟಾಗದೆ 55 ರನ್ ಗಳಿಸಿದ್ದರೆ7 ಎಸೆತಗಳಲ್ಲಿ ಅಜೇಯ 46 ರನ್ ಗಳಿಸಿದ ಸೂರ್ಯಕುಮಾರ್ ಯಾದವ್ ಶರ್ಮಾಗೆ ಉತ್ತಮ ಸಾಥ್ ನೀಡಿದ್ದರು.
ಇದಕ್ಕೆ ಮುನ್ನ ಕೋಲ್ಕತ್ತಾ ಒಡ್ಡಿದ್ದ 134 ರನ್ ಸುಲಭ ಗುರಿ ಬೆನ್ನತ್ತಿದ ಮುಂಬೈ ತಂಡದ ಕ್ವಿಂಟನ್ ಡಿ ಕಾಕ್ 23 ಎಸೆತಕ್ಕೆ 30 ರನ್ ಗಳಿಸಿ ದಿನೇಶ್ ಕಾರ್ತಿಕ್ ಗೆ ವಿಕೆಟ್ ಒಪ್ಪಿಸಿದ್ದರು.
ಹೀಗೆ ಯಾದವ್ ಹಾಗೂ ನಾಯಕ ರೋಹಿತ್ ಶರ್ಮಾ ಅಬ್ಬರದ ಬ್ಯಾಟಿಂಗ್ ನಡೆಸಿ 16.1 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 134 ರನ್ ಗಳಿಸಿ ಗೆಲುವಿನ ನಗು ಬೀರಿತು.
ಇನ್ನು ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿದಿದ್ದ ಕೆಕೆಆರ್ ಕ್ರಿಸ್ ಲಿನ್ 41, ರಾಬಿನ್ ಉತ್ತಪ್ಪ 40 ರನ್ ಗಳ ನೆರವಿನಿಂಡ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 133 ರನ್ ಕಲೆ ಹಾಕಿತ್ತು.
ಮುಂಬೈ ತಾನಾಡಿರುವ 14 ಪಂದ್ಯಗಳ ಪೈಕಿ 9ರಲ್ಲಿ ಗೆಲುವು ದಾಖಲಿಸಿ ಒಟ್ತಾರೆ 18 ಅಂಕ ಪಡೆದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿದೆ. ಇತ್ತ ಚೆನ್ನೈ ಸಹ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು ಮೊದಲ ಕ್ವಾಲಿಫೈಯರ್ ಕದನ ಈ ಎರಡೂ ತಂಡದ ನಡುವೆ ಚೆನ್ನೈನಲ್ಲಿ ಮೇ 7ರಂದು ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics