ಕ್ರಿಕೆಟ್

ವಿಶ್ವಕಪ್ ಕ್ರಿಕೆಟ್ : ಕ್ರಿಸ್ ಗೇಲ್ ವೆಸ್ಟ್ ಇಂಡೀಸ್ ಉಪನಾಯಕ

Nagaraja AB

ಅಂಟಿಗುವಾ: ಮುಂಬರುವ ಐಸಿಸಿ ವಿಶ್ವಕಪ್ ಕ್ರಿಕೆಟ್ ನ ವೆಸ್ಟ್ ಇಂಡೀಸ್ ತಂಡದ ಉಪನಾಯಕನಾಗಿ ಎಡಗೈ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಅವರನ್ನು ನೇಮಕಮಾಡಲಾಗಿದೆ.

ವೆಸ್ಟ್ ಇಂಡೀಸ್ ಪರ ಯಾವುದೇ ಮಾದರಿಯಲ್ಲಿ ಪ್ರತಿನಿಧಿಸುವುದು ತಮ್ಮಗೆ ಯಾವಾಗಲೂ ಗೌರವನ್ನುಂಟು ಮಾಡುತ್ತದೆ. ಈ ವಿಶ್ವಕಪ್ ನನ್ನಗೆ ವಿಶೇಷವಾಗಿದೆ. ಹಿರಿಯ ಆಟಗಾರನಾಗಿ ಕ್ಯಾಪ್ಟನ್ ಹಾಗೂ ತಂಡದ ಎಲ್ಲರನ್ನೂ ಬೆಂಬಲಿಸುವುದು ನನ್ನ ಜವಾಬ್ದಾರಿಯಾಗಿದೆ ಎಂದು ಗೇಲ್ ಹೇಳಿದ್ದಾರೆ.

"ಇದು ಬಹುಶಃ ಅತಿದೊಡ್ಡ ವಿಶ್ವ ಕಪ್ ಆಗಿರುತ್ತದೆ, ಆದ್ದರಿಂದ ಹೆಚ್ಚಿನ ನಿರೀಕ್ಷೆ ಇಡಲಾಗಿದೆ. ವೆಸ್ಟ್ ಇಂಡೀಸ್ ಜನರಿಗಾಗಿ ಚೆನ್ನಾಗಿ ಆಟ ಆಡುವುದಾಗಿ ಗೇಲ್ ಹೇಳಿದ್ದಾರೆ.

ಈ ಮಧ್ಯೆ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಶಾಯ್ ಹೋಪ್ ಅವರನ್ನು  ಐರ್ಲೆಂಡ್, ಬಾಂಗ್ಲಾದೇಶ ವಿರುದ್ಧದ  ತ್ರಿ- ರಾಷ್ಟ್ರಗಳ ಸರಣಿಗೆ ಉಪನಾಯಕನಾಗಿ ಆಯ್ಕೆ ಮಾಡಲಾಗಿದೆ.  ಈ ಸರಣಿಗೆ ಉಪನಾಯಕನಾಗಿ ಆಯ್ಕೆ ಮಾಡಿರುವುದು ತಮ್ಮಗೆ ಸಂದ ಗೌರವವಾಗಿದ್ದು, ಸಂತೋಷದಿಂದಲೇ ಇದನ್ನು ಒಪ್ಪಿಕೊಂಡಿರುವುದಾಗಿ ಹೋಪ್ ಹೇಳಿದ್ದಾರೆ.

ಭಾನುವಾರ ನಡೆದ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ 196 ರನ್ ಗಳಿಂದ ವೆಸ್ಟ್ ಇಂಡೀಸ್ ಗೆದಿದ್ದೆ.ಬಾಂಗ್ಲಾದೇಶ ವಿರುದ್ಧ ಇಂದು ಪಂದ್ಯ ನಡೆಯಲಿದೆ.ಮುಂಬರುವ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ಉತ್ತಮ ಪ್ರದರ್ಶನ ತೋರುವ ವಿಶ್ವಾಸದಲ್ಲಿದೆ.

SCROLL FOR NEXT