ಕ್ರಿಕೆಟ್

ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಲು ಬ್ಲ್ಯೂ ಬಾಯ್ಸ್ ಕಾತುರಾಗಿದ್ದಾರೆ: ಕಪಿಲ್ ದೇವ್

Raghavendra Adiga
ನವದೆಹಲಿ: ವಿರಾಟ್ ಕೊಹ್ಲಿ ಮುಂದಾಳತ್ವದ ಭಾರತ ತಂಡ ಆಂಗ್ಲರ ನಾಡಿನಲ್ಲಿ ಇತಿಹಾಸ ರಚಿಸಲಿದೆ ಎಂದು, 1983 ರಲ್ಲಿ ಮೊದಲ ಬಾರಿಗೆ ಭಾರತಕ್ಕೆ ವಿಶ್ವಕಪ್ ಮುಕುಟ ತೊಡಿಸಿದ ನಾಯಕ ಕಪಿಲ್ ದೇವ್ ಅಭಿಪ್ರಾಯಪಟ್ಟಿದ್ದಾರೆ. 
‘ಬ್ರಿಟಾನಿಯಾ ತಿನ್ನಿ ವಿಶ್ವಕಪ್ ಗೆ ಹೋಗಿ’ ಎಂಬ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ವಿಶ್ವಕಪ್ ಟಿಕೆಟ್ ನೀಡಿದ ಬಳಿಕ ಮಾತನಾಡಿದ ಅವರು, ಪ್ರಸಕ್ತ ಭಾರತ ತಂಡ ವಿಶ್ವಕಪ್ ಗೆಲ್ಲಲಿದೆ ಎಂಬ ವಿಶ್ವಾಸ ವಿದ್ದು, ಇತಿಹಾಸ ನಿರ್ಮಿಸಲು ಬ್ಲ್ಯೂ ಬಾಯ್ಸ್ ಕಾತುರಾಗಿದ್ದಾರೆ ಎಂದಿದ್ದಾರೆ. 
ಈ ಬಾರಿ ವಿಶ್ವಕಪ್ ನ ಸೆಮಿಫೈನಲ್ಸ್ ನಲ್ಲಿ ಭಾರತ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ಸ್ಥಾನ ಪಡೆಯುವ ಸಾಧ್ಯತೆ ಇದ್ದು, ನಾಲ್ಕನೇ ಸ್ಥಾನದಲ್ಲಿ ನ್ಯೂಜಿಲೆಂಡ್, ವಿಂಡೀಸ್, ದಕ್ಷಿಣ ಆಫ್ರಿಕಾ, ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. 
ಭಾರತ ತಂಡದಲ್ಲಿ ಅನುಭವಿ ಹಾಗೂ ಯುವಕರ ದಂಡೇ ಇದೆ. ಇನ್ನು ಆಟಗಾರರನ್ನು ನೋಡಿದರೆ ಸಮತೋಲನದಂತೆ ಕಾಣುತ್ತದೆ. ನಾಲ್ಕು ವೇಗಿಗಳು, ಮೂವರು ಸ್ಪಿನ್ ಬೌಲರ್ಸ್ ಹಾಗೂ ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿ ಅವರಂತಹ ಖ್ಯಾತ ನಾಮ ಆಟಗಾರರು ತಂಡದಲ್ಲಿದ್ದಾರೆ ಎಂದು ತಿಳಿಸಿದರು
SCROLL FOR NEXT