ಶಾಹೀದ್ ಆಫ್ರಿದಿ 
ಕ್ರಿಕೆಟ್

ಯಾವುದೇ ಕಾರಣಕ್ಕೂ ನನ್ನ ನಾಲ್ಕು ಹೆಣ್ಮಕ್ಕಳನ್ನು ಕ್ರಿಕೆಟ್ ಆಡಲು ಬಿಡುವುದಿಲ್ಲ: ಶಾಹೀದ್ ಆಫ್ರಿದಿ

ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಮಿಂಚು ಹರಿಸಿದ್ದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹೀದ್ ಆಫ್ರಿದಿ ತನ್ನ 4 ಹೆಣ್ಮಕ್ಕಳನ್ನು ಕ್ರಿಕೆಟ್ ಆಡಲು...

ಲಾಹೋರ್: ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಮಿಂಚು ಹರಿಸಿದ್ದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹೀದ್ ಆಫ್ರಿದಿ ತನ್ನ 4 ಹೆಣ್ಮಕ್ಕಳನ್ನು ಕ್ರಿಕೆಟ್ ಆಡಲು ಬಿಡುವುದಿಲ್ಲ ಎಂದು ಹೇಳುವ ಮೂಲಕ ಸ್ತ್ರೀವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ನನ್ನ ಧರ್ಮಕ್ಕೆ ನಾನು ಹೆಚ್ಚಿನ ಮನ್ನಣೆ ನೀಡುತ್ತೇನೆ. ಹೀಗಾಗಿ ನನ್ನ ನಾಲ್ಕು ಹೆಣ್ಣು ಮಕ್ಕಳಾದ ಅನ್ಷಾ, ಅಜ್ವಾ, ಅಸ್ಮಾರಾ ಹಾಗೂ ಅಕ್ಸಾರನ್ನು ಹೊರಾಂಗಣ ಕ್ರೀಡೆಗಳಿಗೆ ನಾನು ಅನುಮತಿ ನೀಡುವುದಿಲ್ಲ ಎಂದು ತಮ್ಮ ಆತ್ಮಕಥೆ ಗೇಮ್ ಚೇಂಜರ್ ನಲ್ಲಿ ಬರೆದುಕೊಂಡಿದ್ದಾರೆ.
ಅಜ್ವಾ ಹಾಗೂ ಅಸ್ಮಾರಾ ಇಬ್ಬರಿಗೂ ಕ್ರೀಡಾ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಅವರಿಗೆ ಒಳಾಂಗಣದ ಕ್ರೀಡೆಗಳಲ್ಲಿ ಭಾಗವಹಿಸಲು ನನ್ನ ಅನುಮತಿ ಇದೆ. ಆದರೆ ಕ್ರಿಕೆಟ್ ನಂತಹ ಆಟಗಳಿಗೆ ಮಾತ್ರ ನನ್ನ ಅನುಮತಿ ಇಲ್ಲ. ಇದುವರೆಗೂ ಸಾರ್ವಜನಿಕವಾಗಿ ನಡೆದಿರುವ ಯಾವ ಕ್ರೀಡೆಗಳಿಗೂ ನನ್ನ ಮಕ್ಕಳು ಭಾಗವಹಿಸಿಲ್ಲ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ