ಮುಂಬೈ: ಟೀಂ ಇಂಡಿಯಾದ ಮಾಜಿ ಸ್ಪಿನ್ ಮಾಂತ್ರಿಕ ಕನ್ನಡಿಗ ಅನಿಲ್ ಕುಂಬ್ಳೆ ಅವರು ತಾವೂ ಹಿಂದೊಮ್ಮೆ ತಮ್ಮ ಪರವಾಗಿ ತೀರ್ಪು ಬರಲು ಅಂಪೈರ್‌ಗೆ ಆಮಿಷ ಒಡ್ಡಿದ್ದರಂತೆ ಎಂಬ ವಿಷಯವನ್ನು ಅವರೇ ಬಿಚ್ಚಿಟ್ಟಿದ್ದಾರೆ.
ಈ ಹಿಂದೆ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿ ವೇಳೆ ಈ ಘಟನೆ ನಡೆದಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಎಲ್ಲಾ ತೀರ್ಪುಗಳು ನಮ್ಮ ವಿರುದ್ಧವಾಗಿ ಬರುತ್ತಿತ್ತು. ಯಾಕೆಂದರೆ ಅವರಿಗೆ ಸ್ಪಿನ್ನರ್ ಗಳಿಗೆ ಅಂಪೈರ್ ಮಾಡಿ ಗೊತ್ತಿರಲಿಲ್ಲ. ಹೀಗಾಗಿ ಎರಡನೇ ಟೆಸ್ಟ್ ಪಂದ್ಯಕ್ಕೆ ಮೊದಲು ನಾನು ಅಂಪೈರ್ ನನ್ನು ಖುದ್ದಾಗಿ ಭೇಟಿ ಮಾಡಿ ಮಾತನಾಡಿಸಿದೆ.
ಎರಡನೇ ಟೆಸ್ಟ್ ಸರಣಿಗೂ ಮುನ್ನ ಅಭ್ಯಾಸದಲ್ಲಿ ತೊಡಗಿದ್ದಾಗ ಅಂಪೈರ್ ಅವರನ್ನು ಕರೆದವು. ಅಲ್ಲಿ ಸ್ಪಿನ್ ಬೌಲಿಂಗ್ ಮಾಡಿ ಹೇಗೆ ಪ್ಯಾಡ್ ಗೆ ತಗುಲಿದರೆ ಎಲ್ ಬಿಡಬ್ಲ್ಯೂ ನೀಡಬೇಕು ಎಂದು ಹೇಳಿದೆ. ಹೀಗೆ ಅವರನ್ನು ಕನ್ವಿನ್ಸ್ ಮಾಡಿದ್ದೇವು.
ಇದು ನಂತರ ವರ್ಕೌಟ್ ಆಗಿತ್ತು. ಎರಡನೇ ಟೆಸ್ಟ್ ಪಂದ್ಯದಲ್ಲಿ ಎಲ್ಲವೂ ನಾವು ಅಂದುಕೊಂಡಂತೆ ನಡೆಯಿತು ಎಂದು ಕುಂಬ್ಳೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics