ಕ್ರಿಕೆಟ್

ಇಂಗ್ಲೆಂಡ್ ನಲ್ಲಿ ವಿಶ್ವಕಪ್: ನಾಳೆ ಭಾರತ-ನ್ಯೂಜಿಲೆಂಡ್ ಅಭ್ಯಾಸ ಪಂದ್ಯ

Lingaraj Badiger
ಲಂಡನ್: ವಿರಾಟ್ ಕೊಹ್ಲಿ ಮುಂದಾಳತ್ವದ ಟೀಮ್ ಇಂಡಿಯಾ ತನ್ನ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಶನಿವಾರ ಓವಲ್ ಅಂಗಳದಲ್ಲಿ ನ್ಯೂಜಿಲೆಂಡ್ ವಿರುದ್ಧ ಐಸಿಸಿ ಪುರುಷರ ವಿಶ್ವಕಪ್ ಕ್ರಿಕೆಟ್ ಗೂ ಮುನ್ನ ಅಭ್ಯಾಸ ಪಂದ್ಯದಲ್ಲಿ ಕಾದಾಟ ನಡೆಸಲಿದೆ. 
ಏಷ್ಯಾ ಕಪ್ ಸೇರಿದಂತೆ ಭಾರತ ಸತತ ನಾಲ್ಕು ಏಕದಿನ ಸರಣಿಯನ್ನು ಗೆದ್ದು ಬೀಗಿದ ಟೀಮ್ ಇಂಡಿಯಾ ಸ್ಟಾರ್ ಆಟಗಾರರು ಐಪಿಎಲ್ ಬಳಿಕ ಈಗ ವಿಶ್ವಕಪ್ ನಲ್ಲೂ ಭರ್ಜರಿ ಪ್ರದರ್ಶನ ನೀಡುವ ಉತ್ಸಾಹದಲ್ಲಿದ್ದಾರೆ. 
ಶಿಖರ್ ಧವನ್, ಧೋನಿ ಹಾಗೂ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಪ್ರಸಕ್ತ ಪ್ರದರ್ಶನ ಚೇತೋಹಾರಿ ಆಗಿದೆ. ಉಪನಾಯಕ ರೋಹಿತ್ ಶರ್ಮಾ ಹಾಗೂ ಚೈನಾ ಮೆನ್ ಬೌಲರ್ ಕುಲ್ ದೀಪ್ ಯಾದವ್ ಅವರೂ ಸಹ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಬಲ್ಲರು. 
ಟೀಮ್ ಇಂಡಿಯಾ ಈ ಪಂದ್ಯದಲ್ಲಿ ತನ್ನಲ್ಲಿನ ಹಲವು ನ್ಯೂನತೆಗಳನ್ನು ಹುಡುಕಿ ಸರಿಪಡಿಸಿಕೊಳ್ಳುವ ಅನಿವಾರ್ಯತೆ ಇದೆ. ಇನ್ನು ಟೀಮ್ ಇಂಡಿಯಾದ ಬೌಲಿಂಗ್ ಬಲಾಢ್ಯವಾಗಿದ್ದು, ಎದುರಾಳಿ ಆಟಗಾರರಿಗೆ ಕಂಗೆಡಿಸಬಲ್ಲದು. ವಿಶ್ವದ ನಂಬರ್ ಸ್ಟಾರ್ ಬೌಲರ್ ಜಸ್ಪ್ರಿತ್ ಬೂಮ್ರಾ, ಸ್ಪಿನ್ ಸ್ಪೆಷಲಿಸ್ಟ್ ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ ತಮ್ಮ ಜಾದು ಪ್ರದರ್ಶಿಸಬೇಕಿದೆ. 
ತವರಿನಲ್ಲಿ ನಡೆದಿದ್ದ ಏಕದಿನ ಸರಣಿಯಲ್ಲಿ ಪ್ರವಾಸಿ ಭಾರತದ ವಿರುದ್ಧ ಮುಖಭಂಗ ಅನುಭವಿಸಿದ್ದ ನ್ಯೂಜಿಲೆಂಡ್, ಬಳಿಕ ಬಾಂಗ್ಲಾ ವಿರುದ್ಧ ಚೇತೊಹಾರಿ ಪ್ರದರ್ಶನ ನೀಡಿತ್ತು. ಕಿವೀಸ್ ತಂಡದ ಬ್ಯಾಟ್ಸ್ ಮನ್ ಮಾರ್ಟಿನ್ ಗುಪ್ಟಿಲ್, ಕೇನ್ ವಿಲಿಯಮ್ಸನ್ ಹಾಗೂ ರಾಸ್ ಟೇಲರ್ ಅವರು ಬಿಗ್ ಇನ್ನಿಂಗ್ಸ್ ಕಟ್ಟುವ ಕ್ಷಮತೆ ಹೊಂದಿದ್ದಾರೆ.  
ನ್ಯೂಜಿಲೆಂಡ್ ತಂಡದಲ್ಲಿ ಉತ್ತಮ ಬೌಲರ್ ಗಳ ಮಿಶ್ರಣವಿದ್ಧು, ಭರ್ಜರಿ ಪ್ರದರ್ಶನ ನೀಡುವ ವಿಶ್ವಾಸ ಹೊಂದಿದ್ದಾರೆ.
SCROLL FOR NEXT