ಲಂಡನ್: ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್ ಗಳ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ 2019ರ ಐಸಿಸಿ ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ 104 ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ.
ಇಂದು ಓವಲ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯ ಇಂಗ್ಲೆಂಡ್, ಜೇಸನ್ ರಾಯ್ (54 ರನ್, 53 ಎಸೆತಗಳು), ಜೋ ರೂಟ್ (51 ರನ್, 59 ಎಸೆತಗಳು), ಇಯಾನ್ ಮಾರ್ಗನ್ (57 ರನ್, 60 ಎಸೆತಗಳು) ಹಾಗೂ ಬೆನ್ ಸ್ಟೋಕ್ಸ್ (89 ರನ್, 79 ಎಸೆತಗಳು) ಅವರ ತಲಾ ಅರ್ಧ ಶತಕಗಳ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 311 ರನ್ ದಾಖಲಿಸಿತು.
ಗೆಲುವಿಗೆ 312 ರನ್ ಗಳ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ, ಕ್ವಿಂಟನ್ ಡಿ ಕಾಕ್ (68) ಹಾಗೂ ರಾಸೀ ವ್ಯಾನ್ ಡೆರ್ ದುಸಾನ್ (50) ಅರ್ಧಶತಕಗಳ ಹೊರತಾಗಿಯೂ 207 ರನ್‌ಗಳಿಗೆ ಸರ್ವಪತನವನ್ನು ಕಂಡಿತು. ಈ ಮೂಲಕ ಅಂಡರ್ ಡಾಗ್ಸ್ ಹಣೆಪಟ್ಟಿಯೊಂದಿಗೆ ಫಾಪ್ ಡು ಪ್ಲೆಸಿಸ್ ಪಡೆ ಸೋಲಿನ ಕಹಿ ಅನುಭವಿಸಿದೆ.
ಅತ್ತ ಕೊನೆಯ ಹಂತದಲ್ಲಿ ವಿಶ್ವಕಪ್ ಟಿಕೆಟ್ ಪಡೆದಿರುವ ಜೋಫ್ರಾ ಆರ್ಚರ್ ಮೂರು ವಿಕೆಟುಗಳನ್ನು ಕಬಳಿಸಿ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿದರು. ಅಂತೆಯೇ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ಮಿಂಚಿದ ಬೆನ್ ಸ್ಟೋಕ್ಸ್ ಪಂದ್ಯದ ಹೀರೊ ಎನಿಸಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics