ಕ್ರಿಕೆಟ್

ಕೊಹ್ಲಿ ದಾಖಲೆ ಮುರಿಯಲು ಹಿಟ್ ಮ್ಯಾನ್ ರೋಹಿತ್ ಗೆ 8 ರನ್ ಬೇಕು!

Srinivasamurthy VN

ನವದೆಹಲಿ: ಭರ್ಜರಿ ಫಾರ್ಮ್ ನಲ್ಲಿರುವ ಹಿಟ್ ರೋಹಿತ್ ಶರ್ಮಾ ಮತ್ತೊಂದು ದಾಖಲೆಯ ಸನಿಹದಲ್ಲಿದ್ದು, ಈ ಹಿಂದೆ ಟೀಂ ಇಂಡಿಯಾ ನಾಯಕ ಕೊಹ್ಲಿ ನಿರ್ಮಿಸಿದ್ದ ಅದೇ ದಾಖಲೆಯನ್ನು ಮುರಿಯಲು ರೋಹಿತ್ ಗೆ ಕೇವಲ 8 ರನ್ ಗಳ ಅವಶ್ಯಕತೆ ಇದೆ.

ಹೌದು..  ನಾಳೆ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಟೀಂ ಇಂಡಿಯಾ ಹಾಗೂ ಬಾಂಗ್ಲಾದೇಶ ನಡುವಿನ ಮೊದಲ ಟಿ-20 ಪಂದ್ಯ ನಡೆಯಲಿದೆ. ಈ ಪಂದ್ಯ ನಾಯಕ ರೋಹಿತ್ ಶರ್ಮಾ ಪಾಲಿಗೆ ಸಾಕಷ್ಟು ಪ್ರಮುಖದ್ದಾಗಿದೆ. ಕಾರಣ ಇನ್ನು ಕೇವಲ 8 ರನ್​ ಗಳಿಸಿದರೆ, ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್ ಇತಿಹಾಸದಲ್ಲಿ ಅತಿಹೆಚ್ಚು ರನ್ ಬಾರಿಸಿದ ಆಟಗಾರ ಅನ್ನೋ ಹಿರಿಮೆಗೆ ರೋಹಿತ್ ಶರ್ಮಾ ಪಾತ್ರವಾಗಲಿದ್ದಾರೆ. 

ಸದ್ಯ 67 ಟಿ-20 ಇನ್ನಿಂಗ್ಸ್​ ಆಡಿರುವ ವಿರಾಟ್​ ಕೊಹ್ಲಿ 2,450 ರನ್ ​ಗಳನ್ನು ಸಿಡಿಸಿ ಅತಿಹೆಚ್ಚು ರನ್ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ರೋಹಿತ್ 2 ನೇ ಸ್ಥಾನದಲ್ಲಿದ್ದು, 90 ಟಿ-20 ಇನ್ನಿಂಗ್ಸ್​ ಗಳ ರೋಹಿತ್ ಮೂಲಕ 2,443 ರನ್​ ಕಲೆಹಾಕಿದ್ದಾರೆ. ನಾಳಿನ ಪಂದ್ಯದಲ್ಲಿ ರೋಹಿತ್ ಶರ್ಮಾ 8 ರನ್​ ಗಳನ್ನು ಸಿಡಿಸಿದರೆ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಲಿದ್ದಾರೆ. 

ಪ್ರಸ್ತುತ ಟಿ20 ಮಾದರಿ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿರುವ ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ,  2,450 ರನ್ ಗಳಿಸಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಗ್ರ ಸ್ಥಾನದಲ್ಲಿದ್ದು, 2,443 ರನ್ ಗಳಿಸಿರುವ ರೋಹಿತ್ ಶರ್ಮಾ ದ್ವಿತೀಯ ಸ್ಥಾನದಲ್ಲಿದ್ದಾರೆ. 2,285 ರನ್ ಗಳಿಸಿರುವ ನ್ಯೂಜಿಲೆಂಡ್ ನ ಮಾರ್ಟಿನ್ ಗಪ್ಟಿಲ್ 3 ಮತ್ತು 2,263 ರನ್ ಗಳಿಸಿರುವ ಪಾಕಿಸ್ತಾನದ ಶೊಯೆಬ್ ಮಲ್ಲಿಕ್ 4ನೇ ಸ್ಥಾನದಲ್ಲಿದ್ದಾರೆ.

SCROLL FOR NEXT