ಕ್ರಿಕೆಟ್

2ನೇ ಟಿ20: 8 ವಿಕೆಟ್ ಗಳ ಭರ್ಜರಿ ಗೆಲುವಿನ ಮೂಲಕ ಬಾಂಗ್ಲಾಗೆ ತಿರುಗೇಟು ನೀಡಿದ ಟೀಂ ಇಂಡಿಯಾ

Vishwanath S

ರಾಜ್ ಕೋಟ್: ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಸೋತ್ತಿದ್ದ ಭಾರತ ಇದೀಗ ಎರಡನೇ ಟಿ20 ಪಂದ್ಯದಲ್ಲಿ 8 ವಿಕೆಟ್ ಗಳಿಂದ ಭರ್ಜರಿ ಜಯ ಗಳಿಸಿದೆ.

ರಾಜ್ ಕೋಟ್ ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶ 153 ರನ್ ಪೇರಿಸಿತ್ತು. 154 ರನ್ ಗುರಿ ಬೆನ್ನಟ್ಟಿದ ಭಾರತ 15.4 ಓವರ್ ನಲ್ಲಿ 2 ವಿಕೆಟ್ ನಷ್ಟಕ್ಕೆ 154 ರನ್ ಪೇರಿಸಿ ಗೆಲುವಿನ ನಗೆ ಬೀರಿತು. 

ರೋಹಿತ್ ಶರ್ಮಾ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು 43 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 6 ಬೌಂಡರಿ ಸೇರಿದಂತೆ 85 ರನ್ ಪೇರಿಸಿ ತಂಡಕ್ಕೆ ಗೆಲುವಿನ ಹತ್ತಿರಕ್ಕೆ ತಂದರು. ನಂತರ ಬಂದ ಶ್ರೇಯಸ್ ಅಯ್ಯರ್ ಅಜೇಯ 24 ರನ್ ಪೇರಿಸಿ ಗೆಲುವು ತಂದುಕೊಟ್ಟರು.

ಬಾಂಗ್ಲಾದೇಶದ ಆರಂಭಿಕರಾದ ಲಿಟನ್ ದಾಸ್ ಹಾಗೂ ಮೊಹಮ್ಮದ್ ನೈಮ್ ತಂಡಕ್ಕೆ ಭರ್ಜರಿ ಆರಂಭ ನೀಡಿದರು. ಈ ಜೋಡಿ ರನ್ ಕಲೆ ಹಾಕಿ ಆರ್ಭಟಿಸಿತು. ಈ ಜೋಡಿಯನ್ನು ಬೇರ್ಪಡಿಸಲು ರೋಹಿತ್ ಶರ್ಮಾ ಮಾಡಿಕೊಂಡ ಯೋಜನೆಯಲ್ಲ ಉಲ್ಟಾ ಆಯಿತು. ವೇಗದ ಬೌಲರ್ ಹಾಗೂ ಸ್ಪಿನ್ ಬೌಲರ್ ವಿರುದ್ಧ ಅಬ್ಬರಿಸಿದ ಜೋಡಿ ತಂಡದ ಪರ ಅರ್ಧಶತಕದ ಜೊತೆಯಾಟದ ಕಾಣಿಕೆ ನೀಡಿತು. 

ಲಿಟನ್ ದಾಸ್ 29 ರನ್ ಬಾರಿಸಿದರೆ, ಮೊಹಮ್ಮದ್ 36 ರನ್ ಬಾರಿಸಿದರು. ಮಧ್ಯಮ ಕ್ರಮಾಂಕದಲ್ಲಿ ಸೌಮ್ಯ ಸರ್ಕಾರ್ ಹಾಗೂ ಮಹಮುದುಲ್ಲಾ ಅವರನ್ನು ಬಿಟ್ಟರೆ, ಉಳಿದ ಬ್ಯಾಟ್ಸ್ ಮನ್ ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಸೌಮ್ಯ ಹಾಗೂ ಮಹಮುದುಲ್ಲಾ ತಲಾ 30 ರನ್ ಬಾರಿಸಿದರು. ಅಂತಿಮವಾಗಿ ವಿಂಡೀಸ್ 20 ಓವರ್ ಗಳಲ್ಲಿ ಆರು ವಿಕೆಟ್ ಗೆ 153 ರನ್ ಕಲೆ ಹಾಕಿತು.

ಭಾರತದ ಪರ ಯಜುವೇಂದ್ರ ಚಹಾಲ್ ಎರಡು ಹಾಗೂ ದೀಪಕ್ ಚಹಾರ್, ಖಲೀಲ್ ಅಹ್ಮದ್, ವಾಶಿಂಗ್ಟನ್ ಸುಂದರ್ ತಲಾ ಒಂದು ವಿಕೆಟ್ ಕಬಳಿಸಿದರು.

SCROLL FOR NEXT