ಕ್ರಿಕೆಟ್

ಶ್ರೀಲಂಕಾದಲ್ಲಿ ಮ್ಯಾಚ್ ಫಿಕ್ಸಿಂಗ್ ಗೆ 10 ವರ್ಷ ಜೈಲು ಶಿಕ್ಷೆ!

Nagaraja AB

ಕೊಲಂಬೊ:  ಜಾಗತಿಕ ಕ್ರಿಕೆಟ್ ವಿಶೇಷವಾಗಿ ಏಷ್ಯಾ ರಾಷ್ಟ್ರಗಳಲ್ಲಿ ಅಂಟಿರುವ ಮ್ಯಾಚ್ ಫಿಕ್ಸಿಂಗ್ ನಂತಹ ಭ್ರಷ್ಟಚಾರ ಪ್ರಕರಣಗಳನ್ನು ಬುಡ ಸಮೀತ ಕಿತ್ತುಹಾಕಲು  ಶ್ರೀಲಂಕಾ ಸರ್ಕಾರ ಮುಂದಾಗಿದೆ.

ಕಳೆದ ಹಲವು ವರ್ಷಗಳಿಂದ ಶ್ರೀಲಂಕಾ ರಾಷ್ಟ್ರೀಯ ತಂಡದಲ್ಲಿ ಹಲವು ಮ್ಯಾಚ್ ಫಿಕ್ಸಿಂಗ್ ಪ್ರಕರಣಗಳು ಹೊರ ಬಂದಿವೆ. ಇತ್ತೀಚೆಗೆ ಬಾಂಗ್ಲಾದೇಶ ಸ್ಟಾರ್ ಆಲ್‍ ರೌಂಡರ್  ಶಕಿಬ್ ಅಲ್ ಹಸನ್ ಕೂಡ ಇದೇ ಪ್ರಕರಣ ಸಂಬಂಧ ಎರಡು ವರ್ಷ ಕ್ರಿಕೆಟ್‍ನಿಂದ ನಿಷೇಧ ಶೀಕ್ಷೆಗೆ  ಗುರಿಯಾಗಿ ಅನುಭವಿಸುತ್ತಿದ್ದಾರೆ.

ಇದರಿಂದ ಎಚ್ಚೆತ್ತುಕೊಂಡಿರುವ ಶ್ರೀಲಂಕಾ, ಕ್ರೀಡೆಗಳಿಗೆ ಸಂಬಂಧಿಸಿದ ಭ್ರಷ್ಟಾಚಾರ ತಡೆಗಟ್ಟುವ ನಿಟ್ಟಿನಲ್ಲಿ ಅನಾಮದೇಯ ಮಸೂದೆಯ ಮೂರು ಬಿಲ್‍ಗಳನ್ನು ಸಂಸತ್ತಿನಲ್ಲಿ ಪಾಸ್ ಮಾಡಿದೆ. ಕ್ರೀಡೆಯಲ್ಲಿ ಮ್ಯಾಚ್ ಫಿಕ್ಸಿಂಗ್ ಅಥವಾ ಭ್ರಷ್ಟಾಚಾರ ಪ್ರಕರಣಗಳಲ್ಲಿ ಭಾಗಿಯಾದರೆ ಅಂತವರಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ ವಿವಿಧ ಬಗೆಯೆ ದಂಡ ತೆತ್ತಬೇಕಾಗುತ್ತದೆ

SCROLL FOR NEXT