ರಾಹುಲ್ ದ್ರಾವಿಡ್ 
ಕ್ರಿಕೆಟ್

ಜನರನ್ನು ಟೆಸ್ಟ್ ನತ್ತ ಆಕರ್ಷಿಸಲು 'ಪಿಂಕ್ ಬಾಲ್ ಟೆಸ್ಟ್'  ಪಂದ್ಯ ಸ್ವಾಗತಾರ್ಹ- ರಾಹುಲ್ ದ್ರಾವಿಡ್ 

ಭಾರತ ಹಾಗೂ ಬಾಂಗ್ಲಾದೇಶ ನಡುವಣ ನವಂಬರ್ 22 ರಂದು ಕೋಲ್ಕತ್ತಾದಲ್ಲಿ ನಡೆಯಲಿರುವ ಹಗಲು ರಾತ್ರಿ ಟೆಸ್ಟ್ ಎಲ್ಲರ ಚಿತ್ತ ಕದ್ದಿದೆ. ಈ ಪಂದ್ಯ ಮತ್ತೆ ಜನರು ಟೆಸ್ಟ್ ಪಂದ್ಯವನ್ನು ನೋಡುವಂತೆ ಮಾಡಲು ಹೊಸ ಪ್ರಯತ್ನವಾಗಿದೆ ಎಂದು ಮಾಜಿ ಕ್ರಿಕೆಟ್ ಆಟಗಾರ ಹಾಗೂ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿ ಮುಖ್ಯಸ್ಥ ರಾಹುಲ್ ದ್ರಾವಿಡ್ ಹೇಳಿದ್ದಾರೆ. 

ನವದೆಹಲಿ: ಭಾರತ ಹಾಗೂ ಬಾಂಗ್ಲಾದೇಶ ನಡುವಣ ನವಂಬರ್ 22 ರಂದು ಕೋಲ್ಕತ್ತಾದಲ್ಲಿ ನಡೆಯಲಿರುವ ಹಗಲು ರಾತ್ರಿ ಟೆಸ್ಟ್ ಎಲ್ಲರ ಚಿತ್ತ ಕದ್ದಿದೆ. ಈ ಪಂದ್ಯ ಮತ್ತೆ ಜನರು ಟೆಸ್ಟ್ ಪಂದ್ಯವನ್ನು ನೋಡುವಂತೆ ಮಾಡಲು ಹೊಸ ಪ್ರಯತ್ನವಾಗಿದೆ ಎಂದು ಮಾಜಿ ಕ್ರಿಕೆಟ್ ಆಟಗಾರ ಹಾಗೂ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿ ಮುಖ್ಯಸ್ಥ ರಾಹುಲ್ ದ್ರಾವಿಡ್ ಹೇಳಿದ್ದಾರೆ. 

ಸಿಂಗಾಪೂರ್ ನ ನ್ಯಾಷನಲ್ ಯುನಿವರ್ಸಿಟಿಯಲ್ಲಿ ಮಾತನಾಡಿದ ಅವರು, ಟೆಸ್ಟ್ ಕ್ರಿಕೆಟ್  ಪುನಶ್ಚೇತನಗೊಳಿಸಲು ಇದು ಒಂದು ಮಾರ್ಗ. ಆದರೆ, ಇದೊಂದೇ ಮಾರ್ಗದಿಂದ ಜನರನ್ನು ಆಕರ್ಷಿಸಲು ಸಾಧ್ಯವಿಲ್ಲ ಎಂದಿದ್ದಾರೆ. 

ಆಟಗಾರರು ಎನ್ ಸಿಎ ನಲ್ಲಿ ಅಭ್ಯಾಸ ನಡೆಸಿದ್ದಾರೆ. ನಾವು ಸಂಜೆ 6ಗಂಟೆಗೆ ಅಭ್ಯಾಸ ಪ್ರಾರಂಭಿಸುತ್ತಿದ್ದೇವು. ಸುಮಾರು 7.30ಕ್ಕೆ ಮಂಜು ಬೀಳಲು ಆರಂಭವಾಗುತ್ತಿತ್ತು. ಜನರನ್ನು ಮೈದಾನಗಳತ್ತ ಕರೆಯಲು, ಈ ಪ್ರಯೋಗ ಸ್ವಾಗತಾರ್ಹವಾಗಿದೆ. ಚೆಂಡು ಒದ್ದೆಯಾದಾಗ ಬೌಲರ್ ಗಳಿಗೆ ಕಠಿಣವಾಗುತ್ತದೆ ಎಂದು ತಿಳಿಸಿದ್ದಾರೆ. 

2001 ರಲ್ಲಿ ಈಡನ್ ಗಾರ್ಡನ್ ನಲ್ಲಿ 1,00,000 ಜನರಿದ್ದರು. ಆದರೆ, ಈಗ ಜನರು ಮೈದಾನದತ್ತ ಬರುವುದು ಕೊಂಚ ಕಡಿಮೆಯಾಗಿದೆ. ಮನೆಯಲ್ಲಿ ಎಚ್.ಡಿ ಟಿವಿಗಳಲ್ಲಿ ಹಾಗೂ ಮೊಬೈಲ್ ಗಳಲ್ಲಿ ಜನ ಪಂದ್ಯದ ಮಜವನ್ನು ಸವಿಯುತ್ತಾರೆ. ಆದರೆ, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಮಧ್ಯ ನಡೆಯುವ ಆ್ಯಷಸ್ ಟೆಸ್ಟ್ ಪಂದ್ಯ ವೀಕ್ಷಿಸಲು ಜನ ಬರುತ್ತಾರೆ. ಏಕೆಂದರೆ, ಎರಡೂ ದೇಶಗಳು ಸರಣಿಗೆ ಉತ್ತಮವಾಗಿ ಯೋಜನೆ ರೂಪಿಸಿಕೊಳ್ಳುತ್ತವೆ ಎಂದು ಹೇಳಿದ್ದಾರೆ. 

ನಮ್ಮ ತಂಡ ವಿಶ್ವದ ನಂಬರ್ 1 ಟೆಸ್ಟ್. ಅಂದರೆ ಐಸಿಸಿ ಟೂರ್ನಿಯ ಚಾಂಪಿಯನ್ ಇದ್ದಂತೆ. ಇನ್ನಷ್ಟು ಉತ್ತಮವಾಗಿ ಕೆಲಸಮಾಡಿ, ಒಳ್ಳೆಯ ತರಬೇತಿ ನೀಡಬೇಕಿದೆ. ಅಂದಾಗ ಉತ್ತಮ ಫಲಿತಾಂಶ ಬರಲು ಸಾಧ್ಯ ಎಂದು ದ್ರಾವಿಡ್ ಅಭಿಪ್ರಾಯ ಪಟ್ಟಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 56 ಸಾವಿರ ಹುದ್ದೆ ನೇಮಕಕ್ಕೆ ಸಚಿವ ಸಂಪುಟ ಅಸ್ತು

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

T20 World Cup 2026: ಅಭಿಷೇಕ್, ಹಾರ್ದಿಕ್ ಅಬ್ಬರ; ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

SCROLL FOR NEXT