ಕ್ರಿಕೆಟ್ 
ಕ್ರಿಕೆಟ್

ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ರನ್: 39 ಓವರ್ನಲ್ಲಿ 761 ರನ್ ಪೇರಿಸಿದ ತಂಡ, ಐತಿಹಾಸಿಕ ಜಯ!

ಕ್ರಿಕೆಟ್ ಇತಿಹಾಸದಲ್ಲೇ ತಂಡವೊಂದು ಅತೀ ಹೆಚ್ಚು ರನ್ ಪೇರಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೇವಲ 39 ಓವರ್ ನಲ್ಲಿ 761 ರನ್ ಪೇರಿಸಿದ್ದು ಅಲ್ಲದೆ ಎದುರಾಳಿ ತಂದ ವಿರುದ್ಧ 754 ರನ್ ಗಳಿಂದ ಭರ್ಜರಿ ಜಯ ಗಳಿಸಿದೆ.

ಮುಂಬೈ: ಕ್ರಿಕೆಟ್ ಇತಿಹಾಸದಲ್ಲೇ ತಂಡವೊಂದು ಅತೀ ಹೆಚ್ಚು ರನ್ ಪೇರಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೇವಲ 39 ಓವರ್ ನಲ್ಲಿ 761 ರನ್ ಪೇರಿಸಿದ್ದು ಅಲ್ಲದೆ ಎದುರಾಳಿ ತಂದ ವಿರುದ್ಧ 754 ರನ್ ಗಳಿಂದ ಭರ್ಜರಿ ಜಯ ಗಳಿಸಿದೆ. 

ಅಂತರ್ ಶಾಲಾ ಕ್ರಿಕೆಟ್ ಟೂರ್ನಿಯಲ್ಲಿ ಅಂಧೇರಿ ಮೂಲದ ಚಿಲ್ಡ್ರನ್ಸ್ ವೆಲ್ಫೆರ್ ಸ್ಕೂಲ್ ಮತ್ತು ಬೊರಿವಲಿಯಲ್ಲಿ ಸ್ವಾಮಿ ವಿವೇಕಾನಂದ ಇಂಟರ್ ನ್ಯಾಷನಲ್ ಸ್ಕೂಲ್ ನಡುವೆ ನಡೆದ ಪಂದ್ಯದಲ್ಲಿ ಈ ದಾಖಲೆ ಸೃಷ್ಠಿಯಾಗಿದೆ. 

ಸ್ವಾಮಿ ವಿವೇಕಾನಂದ ಶಾಲೆ 39 ಓವರ್ ನಲ್ಲಿ 761 ರನ್ ಪೇರಿಸಿತ್ತು. ಅಲ್ಲದೆ ಎದುರಾಳಿ ತಂಡ ಚಿಲ್ಡ್ರನ್ಸ್ ವೆಲ್ಫೆರ್ ಶಾಲೆಯನ್ನು ಕೇವಲ 7 ರನ್ ಗಳಿಗೆ ಆಲೌಟ್ ಮಾಡಿ ಭರ್ಜರಿ ಜಯ ಗಳಿಸಿತು. 

ಈ ಪಂದ್ಯದಲ್ಲಿ ಸ್ವಾಮಿ ವಿವೇಕಾನಂದ ಶಾಲೆಯ ಮೀತ್ ಮಯೇಕರ್ ಅಜೇಯ ತ್ರಿಶತಕ 338 ರನ್ ಬಾರಿಸಿದ್ದಾರೆ. ಈ ಮೂಲಕ ತಂಡ 761 ಪೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 

762 ರನ್ ಗಳ ಬೃಹತ್ ಮೊತ್ತ ಬೆನ್ನಟ್ಟಿದ ಚಿಲ್ಡ್ರನ್ ವೆಲ್ಫರ್ ತಂಡದ ಎಲ್ಲಾ ಆಟಗಾರರು ಡಕೌಟ್ ಆಗಿದ್ದು ವೈಡ್ ಮತ್ತು ನೋಬಾಲ್ ನಿಂದ ತಂಡಕ್ಕೆ 7 ರನ್ ಬಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

CM ಡಿ.ಕೆ. ಶಿವಕುಮಾರ್‌ಗಾಗಿ IndiGo flight ಲೇಟ್? VVIP ಸಂಸ್ಕೃತಿ ವಿರುದ್ಧ ಪ್ರಯಾಣಿಕರ ಆಕ್ರೋಶ..!

ಬರಗಾಲದ ಬೆನ್ನಲ್ಲೇ ಬೆಲೆ ಏರಿಕೆ ಬರೆ: ಮಧ್ಯಮ ವರ್ಗದವರಿಗೆ ಆರ್ಥಿಕ ಹೊಡೆತ, ಅಕ್ಕಿ ದರ ಗಗನಕ್ಕೆ..!

ಬರ ಎಫೆಕ್ಟ್: ರೈತರ ನೆರವಿಗೆ ಧಾವಿಸಿದ ಸರ್ಕಾರ; 1,250 ಕೋಟಿ ರೂ. ಮೊದಲ ಕಂತು ಬಿಡುಗಡೆ..!