ಕ್ರಿಕೆಟ್

ಏಕದಿನ, ಟಿ-20ಯಂತೆ ಟೆಸ್ಟ್‌‌ಗೂ ಮಾರ್ಕೆಟಿಂಗ್ ಅಗತ್ಯ: ವಿರಾಟ್ ಕೊಹ್ಲಿ

Nagaraja AB

ಕೋಲ್ಕತಾ: ಏಕದಿನ, ಟಿ-20ಯಂತೆ ಟೆಸ್ಟೂ ಪಂದ್ಯಗಳಿಗೂ ಮಾರ್ಕೆಟಿಂಗ್ ಅಗತ್ಯವಾಗಿದೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಚೊಚ್ಚಲ ಪಿಂಕ್ ಬಾಲ್ ಟೆಸ್ಟ್ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಕದಿನ ಮತ್ತು ಟಿ-20 ಯಂತೆ ಆಕರ್ಷಕ ಮಾರ್ಕೆಟಿಂಗ್ ನೊಂದಿಗೆ ಟೆಸ್ಟ್ ಕ್ರಿಕೆಟ್ ಸುತ್ತಲೂ ಸಂಚಲನ ಸೃಷ್ಟಿಸಬೇಕು ಹಾಗೂ ಸಾಂಪ್ರದಾಯಿಕ ಸ್ವರೂಪಕ್ಕಾಗಿ ಅಭಿಮಾನಿಗಳಲ್ಲಿ ಸ್ಥಾಪಿತ ಮನಸ್ಸು  ಬದಲಾಗಬೇಕು ಎಂದರು.

‘ಏಕದಿನ ಹಾಗೂ ಟಿ-20 ಪಂದ್ಯಗಳ ರೀತಿ ಟೆಸ್ಟ್‌ ಕ್ರಿಕೆಟ್ ಮಾರ್ಕೆಟಿಂಗ್ ಮಾಡುವುದು ನಿರ್ಣಾಯಕ. ಇದು ಕೇವಲ ಆಟಗಾರರಿಗೆ ಸಂಬಂಧಿಸಿದ ಕೆಲಸವಲ್ಲ. ಕ್ರಿಕೆಟ್ ಮಂಡಳಿಯ ಮ್ಯಾನೇಜ್‌ಮೆಂಟ್ ಹಾಗೂ ನಿರ್ದಿಷ್ಟ ಉತ್ಪನ್ನವನ್ನು ಹೇಗೆ ಜನರಿಗೆ ತಲುಪಿಸುತ್ತೀರಿ ಎಂಬುದು ತವರು ಪ್ರಸಾರಕರ ಮುಖ್ಯ ಜವಾಬ್ದಾರಿಯಾಗಿರುತ್ತದೆ.’’ ಎಂದು ಹೇಳಿದರು

ಚೊಚ್ಚಲ ಪಿಂಕ್ ಬಾಲ್ ಟೆಸ್ಟ್ ಪಂದ್ಯ ವೀಕ್ಷಿಸಲು 50 ಸಾವಿರ ಕ್ರಿಕೆಟ್ ಅಭಿಮಾನಿಗಳು ಮೈದಾನದಲ್ಲಿ ತುಂಬಿದ್ದರು. ಈ ಪಂದ್ಯದಲ್ಲಿ ಇನ್ನೂ ಎರಡು ದಿನ ಬಾಕಿ ಇರುವಂತೆಯೇ ಟೀಂ ಇಂಡಿಯಾ ಇನ್ನಿಂಗ್ಸ್ ಹಾಗೂ 46 ರನ್ ಗಳಿಂದ ಗೆಲುವು ಸಾಧಿಸಿತ್ತು. ಇದರೊಂದಿಗೆ ಭಾರತ ಎರಡು ಪಂದ್ಯಗಳ ಟೆಸ್ಟ್‌ ಸರಣಿಯನ್ನು 2-0 ಅಂತರದಲ್ಲಿ  ತನ್ನದಾಗಿಸಿಕೊಂಡಿತು.

SCROLL FOR NEXT