ಕ್ರಿಕೆಟ್

ಟೆಸ್ಟ್ ಕ್ರಿಕೆಟ್ ನಲ್ಲಿ ರವೀಂದ್ರ ಜಡೇಜಾ ವಿಶ್ವದಾಖಲೆ! ವೇಗವಾಗಿ 200 ವಿಕೆಟ್ ಪಡೆದ ಎಡಗೈ ಬೌಲರ್

Raghavendra Adiga

ದಿನದಂತ್ಯಕ್ಕೆ ದ. ಆಫ್ರಿಕಾ 385/8

ವಿಶಾಖಪಟ್ಟಣಂ: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಮೂರನೇ ದಿನದಾಟದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 200 ವಿಕೆಟ್‌ಗಳನ್ನು ಕಬಳಿಸಿದ ಎರಡನೇ ಅತಿ ವೇಗದ ಭಾರತೀಯ ಎಂಬ ಹೆಗ್ಗಳಿಕೆಗೆ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ಪಾತ್ರರಾಗಿದ್ದಾರೆ.

ಮೂರನೇ ದಿನದಂದು ದಕ್ಷಿಣ ಆಫ್ರಿಕಾದ ಮೊದಲ ಇನ್ನಿಂಗ್ಸ್‌ನಲ್ಲಿ ಡೀನ್ ಎಲ್ಗರ್ (160) ಅವರನ್ನು ಔಟ್ ಮಾಡಿದಾಗ ಜಡೇಜಾ ಈ ಸಾಧನೆ ಮಾಡಿದ್ದಾರೆ. ಒಟ್ಟು 44 ಟೆಸ್ಟ್ ಪಂದ್ಯಗಳಲ್ಲಿ ಜಡೇಜಾ ಈ ಸಾಧನೆ ಮಾಡಿದ್ದು ಇನ್ನೊಬ್ಬ ಟೀಂ ಇಂಡಿಯಾ ಆಟಗಾರ ಆಫ್-ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 37 ಪಂದ್ಯಗಳಲ್ಲಿ ಈ ಗುರಿ ತಲುಪಿದ್ದರು.

ಇನ್ನು ಮಾಜಿ ಸ್ಪಿನ್ನರ್‌ಗಳಾದ ಹರ್ಭಜನ್ ಸಿಂಗ್ ಮತ್ತು ಅನಿಲ್ ಕುಂಬ್ಳೆ ಅವರುಗಳು ಕ್ರಮವಾಗಿ  46 ಮತ್ತು 47 ಪಂದ್ಯಗಳಲ್ಲಿ ತಾವು 200 ಟೆಸ್ಟ್ ವಿಕೆಟ್ ಕಿತ್ತು ಸಾಧನೆ ಮಾಡಿದ್ದಾರೆ.

ಶ್ರೀಲಂಕಾದ ರಂಗನಾ ಹೆರಾತ್ (47 ಪಂದ್ಯಗಳು) ಮತ್ತು ಆಸ್ಟ್ರೇಲಿಯಾದ ಮಿಚೆಲ್ ಜಾನ್ಸನ್ (49) ಅವರಿಗಿಂತ ಜಡೇಜಾ ಈ ಸಾಧನೆ ಮಾಡಿದ ಅತ್ಯಂತ ವೇಗದ ಎಡಗೈ ಬೌಲರ್ ಆಗಿದ್ದಾರೆ.

ದಿನದಂತ್ಯಕ್ಕೆ ದ. ಆಫ್ರಿಕಾ 385/8

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಮೂರನೇ ದಿನ ಡೀನ್ ಎಲ್ಗರ್ (160) ಹಾಗೂ ಕ್ವಿಂಟನ್ ಡಿ ಕಾಕ್ (111 ಶತಕದ ನೆರವಿನೊಡನೆ ಹರಿಣ ಪಡೆ  118 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 385 ರನ್ ಕಲೆ ಹಾಕಿದೆ.

ನಾಯಕ ಫಾಫ್ ಡು ಪ್ಲೆಸಿಸ್ (55) ಆಕರ್ಷಕ ಅರ್ಧಶತಕ ಗಳಿಸಿ ಗಮನ ಸೆಳೆದಿದ್ದರು.ಪ್ರವಾಸಿ ತಂಡಕ್ಕೆ ಎದುರಾಗುವ ಭಾರೀ ಅಂತರದ ಸೋಲಿನ ಭೀತಿಯನ್ನು ತುಸು ಕಡಿಮೆ ಮಾಡಿದ್ದಾರೆ. ಆದರೆ ಟೀಂ ಇಂಡಿಯಾ ಒಡ್ಡಿದ್ದ 502 ಗುರಿಗೆ ಹೋಲಿಸಿದರೆ ಹರಿಣಪಡೆಗೆ ಇನ್ನೂ 117 ರನ್ ಹಿನ್ನೆಡೆ ಇದೆ.

ಟೀಂ ಇಡಿಯಾದ ರವಿಚಂದ್ರನ್ ಅಶ್ವಿನ್ ಐದು, ರವೀಂದ್ರ ಜಡೇಜಾ ಎರಡು ಹಾಗೂ ಇಶಾಂತ್ ಶರ್ಮಾ ಒಂದು ವಿಕೆಟ್ ಕಿತ್ತು ಗಮನ ಸೆಳೆದಿದ್ದಾರೆ.

SCROLL FOR NEXT