ಕ್ರಿಕೆಟ್

ಅಬ್ಬಾ, ಯಾರೇ ಆಗಲಿ, ಬುಮ್ರಾ ತಂಟೆಗೆ ಮಾತ್ರ ಹೋಗ್ಬಾರ್ದು: ಕೆಎಲ್ ರಾಹುಲ್

Lingaraj Badiger

ಲಂಡನ್: ಟೀಂ ಇಂಡಿಯಾ ಆಟಗಾರ, ಕನ್ನಡಿಗ ಕೆಎಲ್ ರಾಹುಲ್ ಅವರು ಸಹ ಆಟಗಾರ ಜಸ್ಪ್ರೀತ್ ಬುಮ್ರಾ ಅವರನ್ನು ಹಾಡಿ ಹೊಗಳಿದ್ದು, ಯಾರೇ ಆಗಲಿ, ಬುಮ್ರಾ ತಂಟೆಗೆ ಮಾತ್ರ ಹೋಗಬಾರದು. ಅವರು ಒಂದು ಸಲ ಫೀಲ್ಡಿಗಿಳಿದರೆ ಸಾಕು ತುಂಬಾ ಸ್ಪರ್ಧಾತ್ಮಕವಾಗಿ ಆಡುತ್ತಾರೆ ಎಂದು ಹೇಳಿದ್ದಾರೆ.

"ಅವರು ಅದ್ಭುತ ಪ್ರತಿಭೆ ಮತ್ತು ಅವರು ತಮ್ಮ ದೇಶಕ್ಕಾಗಿ ಆಡುವ ಅವಕಾಶ ಸಿಗುವ ಮೊದಲೇ ಅವರೊಂದಿಗೆ ಆಟವಾಡಲು ನನಗೆ ಅವಕಾಶ ಮತ್ತು ಭಾಗ್ಯ ಸಿಕ್ಕಿತು. ನಾವು ಇಬ್ಬರು ಕಿರಿಯರ ತಂಡದಲ್ಲಿ ಆಡಿದ್ದೇವೆ. ಬುಮ್ರಾ ಯಾವಾಗಲೂ ದೃಢ ನಿರ್ಧಾರ ಮತ್ತು ಸಮರ್ಪಕವಾಗಿ ಆಡುತ್ತಿದ್ದರು. ಅಲ್ಲದೆ ಅವರಿಗೆ ಕ್ರಿಕೆಟ್ ತುಂಬಾ ಉತ್ಸಾಹ ಇದೆ'' ಎಂದು ರಾಹುಲ್ ಇಎಸ್ ಪಿಎನ್ ಕ್ರಿಕ್ ಇನ್ಫೋಗೆ ತಿಳಿಸಿದ್ದಾರೆ.

ಬುಮ್ರಾಗೆ ಯಾರ ಬಗ್ಗೆಯೂ ಕರುಣೆ ಇಲ್ಲ. ನಮ್ಮ ದೇಶದೊಂದಿಗೆ ಆಡುತ್ತಿದ್ದರೂ ಸಹ ಬಹಳ ಗಂಭೀರವಾಗಿ, ಅತೀ ವೇಗವಾಗಿ ಬೌಲಿಂಗ್ ಮಾಡುತ್ತಾರೆ. ಮೈದಾನದ ಹೊರಗೂ ಅವರೂ ಸ್ಪರ್ಧಾತ್ಮಕವಾಗಿರುತ್ತಾರೆ. ಈಗ ಅವರು ದೇಶಕ್ಕಾಗಿ ತುಂಬಾ ಅದ್ಭುತವಾಗಿ ಆಡುತ್ತಿದ್ದಾರೆ ಎಂದು ರಾಹುಲ್ ಸಹ ಆಟಗಾರನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇತ್ತೀಚಿಗೆ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಕಳಪೆ ಪ್ರದರ್ಶನ ತೊರಿದ್ದಕ್ಕಾಗಿ ಕೆಎಲ್ ರಾಹುಲ್ ಅವರನ್ನು ಟೆಸ್ಟ್ ಪಂದ್ಯದಿಂದ ಕೈಬಿಡಲಾಗಿತ್ತು. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರಾಹುಲ್ ಬದಲಿಗೆ ರೋಹಿತ್ ಶರ್ಮಾ ಅವರನ್ನು ಆರಂಭಿಕ ಆಟಗಾರನನ್ನಾಗಿ ಆಯ್ಕೆ ಮಾಡಲಾಗಿದೆ.

SCROLL FOR NEXT