ಅಜಿಂಕ್ಯ ರಹಾನೆ-ರಾಧಿಕಾ 
ಕ್ರಿಕೆಟ್

ಅಜಿಂಕ್ಯಾ ರಹಾನೆ ಮನೆಗೆ ಹೊಸ ಅತಿಥಿ ಆಗಮನ: ಈ ಖುಷಿಯಲ್ಲೇ ಕ್ರಿಕೆಟ್ ಆಡುತ್ತಿರುವ ಉಪ ನಾಯಕ!

ಭಾರತ ತಂಡದ ಬ್ಯಾಟ್ಸ್‌‌ಮನ್ ಅಜಿಂಕ್ಯಾ ರಹಾನೆ ಅವರ ಪತ್ನಿ ರಾಧಿಕಾ ಅವರು ಶನಿವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇದರೊಂದಿಗೆ ಭಾರತ ಟೆಸ್ಟ್‌ ಕ್ರಿಕೆಟ್ ತಂಡದ ಉಪ ನಾಯಕ ಹೆಣ್ಣು ಮಗುವಿನ ತಂದೆಯಾಗಿದ್ದಾರೆ.

ನವದೆಹಲಿ: ಭಾರತ ತಂಡದ ಬ್ಯಾಟ್ಸ್‌‌ಮನ್ ಅಜಿಂಕ್ಯಾ ರಹಾನೆ ಅವರ ಪತ್ನಿ ರಾಧಿಕಾ ಅವರು ಶನಿವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇದರೊಂದಿಗೆ ಭಾರತ ಟೆಸ್ಟ್‌ ಕ್ರಿಕೆಟ್ ತಂಡದ ಉಪ ನಾಯಕ ಹೆಣ್ಣು ಮಗುವಿನ ತಂದೆಯಾಗಿದ್ದಾರೆ.

31ರ ಪ್ರಾಯದ ಅಜಿಂಕ್ಯಾ ರಹಾನೆ ಅವರು ಸದ್ಯ ವಿಶಾಖಪಟ್ಟಣಂನ ಡಾ.ವೈ.ಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲನೇ ಟೆಸ್ಟ್‌ ಪಂದ್ಯದಲ್ಲಿದ್ದಾರೆ. 

ರಹಾನೆ ಹಾಗೂ ಅವರ ಕುಟುಂಬಕ್ಕೆ ಹೊಸ ಅತಿಥಿ ಆಗಮಿಸಿರುವ ಹಿನ್ನೆೆಲೆಯಲ್ಲಿ ಮಾಜಿ ಸಹ ಆಟಗಾರ ಹರಭಜನ್ ಸಿಂಗ್ ಅವರು ಟ್ವಿಟರ್‌ನಲ್ಲಿ ಮುಂಬೈ ಬ್ಯಾಟ್ಸ್‌‌ಮನ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ.

ಅಜಿಂಕ್ಯಾ ರಹಾನೆ ಅವರು 2014ರಲ್ಲಿ ಬಾಲ್ಯದ ಗೆಳತಿ ರಾಧಿಕಾ ಅವರನ್ನು ವರಿಸಿದ್ದರು. ಕಳೆದ ಜುಲೈನಲ್ಲಿ ಹಲವು ಫೋಟೊಗಳ ಮೂಲಕ ರಹಾನೆ ದಂಪತಿಗಳು ಗರ್ಭಧಾರಣೆ ಬಗ್ಗೆೆ ಸುದ್ದಿ ನೀಡಿದ್ದರು. 

ಅಜಿಂಕ್ಯಾ ರಹಾನೆ ಭಾರತದ ಪರ 58 ಟೆಸ್ಟ್‌, 90 ಏಕದಿನ ಹಾಗೂ 20 ಟಿ-20 ಪಂದ್ಯಗಳಲ್ಲಿ ಆಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ