ಕ್ರಿಕೆಟ್

ನನ್ನಿಂದಲೇ ಗಂಭೀರ ಕ್ರಿಕೆಟ್ ವೃತ್ತಿ ಜೀವನ ಅಂತ್ಯವಾಯಿತು: ಪಾಕ್ ಕ್ರಿಕೆಟಿಗ ಮಹಮದ್ ಇರ್ಫಾನ್

Srinivasamurthy VN

ಕರಾಚಿ: ಇತ್ತೀಚೆಗಷ್ಟೇ ಕ್ರಿಕೆಟ್ ನಿಂದ ನಿವೃತ್ತಿ ಪಡೆದು ರಾಜಕೀಯದತ್ತ ಹೊರಳಿರುವ ಭಾರತದ ಕ್ರಿಕೆಟಿಗ ಗೌತಮ್ ಗಂಭೀರ್ ಕ್ರಿಕೆಟ್ ವೃತ್ತಿ ಜೀವನ ಅಂತ್ಯವಾಗಲು ನಾನೇ ಕಾರಣ ಎಂದು ಪಾಕಿಸ್ತಾನದ ವೇಗಿ ಮಹಮದ್ ಇರ್ಫಾನ್ ಹೇಳಿದ್ದಾರೆ.

ಈ ಹಿಂದಿನ ಭಾರತದ ವಿರುದ್ಧದ ಪಂದ್ಯದಲ್ಲಿ ಗಂಭೀರ್ ರನ್ನು ನಾನು ನಾಲ್ಕು ಬಾರಿ ಔಟ್ ಮಾಡಿದ್ದೆ. ಆ ಬಳಿಕದ ಟೂರ್ನಿಯಲ್ಲಿ ಗಂಭೀರ್ ಅವಕಾಶ ವಂಚಿತರಾಗಿ ಅವರ ಕ್ರಿಕೆಟ್ ಜೀವನವೇ ಅಂತ್ಯವಾಯಿತು ಎಂದು ಮಹಮದ್ ಇರ್ಫಾನ್ ಸುದ್ದಿಸಂಸ್ಥೆಯ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

'2012ರ ಸರಣಿ ಬಳಿಕ ಗೌತಮ್ ಗಂಭೀರ್ ತಮ್ಮ ಕಳಪೆ ಪ್ರದರ್ಶನದಿಂದಾಗಿ ತಂಡದಿಂದ ಹೊರ ಬಂದರು. ಅಂದು ನಡೆದ ಪಂದ್ಯಗಳಲ್ಲಿ (ಟಿ20 ಮತ್ತು ಏಕದಿನ) ನಾನು ಗಂಭೀರ್ ಅವರನ್ನು ನಾಲ್ಕು ಬಾರಿ ಔಟ್ ಮಾಡಿದ್ದೆ. ಇದಾದ ಬಳಿಕ ಗಂಭೀರ್ ಕೇವಲ ಒಂದು ಸರಣಿಯಲ್ಲಿ ಆಡುವ ಅವಕಾಶ ಪಡೆದುಕೊಂಡಿದ್ದರು ಎಂದು ಮೊಹಮ್ಮದ್ ಇರ್ಫಾನ್ ಹೇಳಿದ್ದಾರೆ.

ಇದೇ ವೇಳೆ ಗೌತಮ್ ಗಂಭೀರ್ ತಮ್ಮ ಎಸೆತಗಳನ್ನು ಎದುರಿಸಲೂ ಕೂಡ ಕಷ್ಟ ಪಡುತ್ತಿದ್ದರು ಎಂದು ಹೇಳಿರುವ ಇರ್ಫಾನ್, ಗಂಭೀರ್ ಪಂದ್ಯದ ವೇಳೆ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಲೂ ಕೂಡ ಹೆದರುತ್ತಿದ್ದರು. ನಾನು ಎಸೆಯುತ್ತಿದ್ದ ಎಸೆತಗಳನ್ನು ಅರ್ಥ ಮಾಡಿಕೊಳ್ಳಲು ಗಂಭೀರ್ ಪರದಾಡುತ್ತಿದ್ದರು. ಪ್ರತಿಬಾರಿ ನನ್ನ ಎಸೆತಗಳಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದರು.  ಗಂಭೀರ್ ಮಾಡುತ್ತಿದ್ದರು ಎಂದು ಇರ್ಫಾನ್ ಹೇಳಿದ್ದಾರೆ.

ಮಹಮದ್ ಇರ್ಫಾನ್ ಹೇಳಿಕೆ ಕ್ರಿಕೆಟ್ ವಲ.ದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಇರ್ಫಾನ್ ಹೇಳಿಕೆಗೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

SCROLL FOR NEXT