ಕ್ರಿಕೆಟ್

ಭಾರತ - ಪಾಕ್ ಕ್ರಿಕೆಟ್ ಸಂಬಂಧ: ನೀವು ಮೋದಿಜೀನ ಕೇಳಿ ಎಂದ ಸೌರವ್ ಗಂಗೂಲಿ

Lingaraj Badiger

ಮುಂಬೈ: ಭಾರತ - ಪಾಕಿಸ್ತಾನ ನಡುವಿನ ಕ್ರಿಕೆಟ್ ಸಂಬಂಧದ ಬಗ್ಗೆ ಪ್ರತಿಕ್ರಿಯಿಸಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲು ಸಿದ್ದರಾಗಿರುವ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅವರು, ಈ ಕುರಿತು ಉಭಯ ದೇಶಗಳ ಪ್ರಧಾನಿಗಳು ನಿರ್ಧಾರ ತೆಗೆದುಕೊಳ್ಳಬೇಕು ಎಂದಿದ್ದಾರೆ. 

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಗಂಗೂಲಿ, ಭಾರತ – ಪಾಕಿಸ್ಥಾನ ನಡುವೆ ಕ್ರಿಕೆಟ್ ಸರಣಿ ನಡೆಯಬೇಕೋ ಅಥವಾ ಬೇಡ ಎನ್ನುವುದನ್ನು ನಾವು ನಿರ್ಧಾರ ಮಾಡುವುದಲ್ಲ. ಅದನ್ನು ದೇಶಗಳ ಪ್ರಧಾನ ಮಂತ್ರಿಯವರೇ ನಿರ್ಧರಿಸಬೇಕು. ನೀವು ಈ ಪ್ರಶ್ನೆಯನ್ನು ಮೋದಿ ಮತ್ತು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಬಳಿಯೇ ಕೇಳಬೇಕು ಎಂದರು.

ಉಭಯ ದೇಶಗಳ ನಡುವೆ ಕೊನೆಯದಾಗಿ ದ್ಚಿಪಕ್ಷೀಯ ಸರಣಿ ನಡೆದಿದ್ದು 2012ರಲ್ಲಿ. ನಂತರ ವಿಶ್ವಕಪ್, ಏಷ್ಯಾಕಪ್ ಮತ್ತು ಚಾಂಪಿಯನ್ ಟ್ರೋಫಿಗಳಲ್ಲಿ ಮಾತ್ರ ಉಭಯ ತಂಡಗಳು ಮುಖಾಮುಖಿಯಾಗಿವೆ.

SCROLL FOR NEXT