ಕ್ರಿಕೆಟ್

ಸೆಹ್ವಾಗ್‌, ಗವಾಸ್ಕರ್‌ ಎಲೈಟ್‌ ಸಾಲಿಗೆ ರೋಹಿತ್‌!

Nagaraja AB

ರಾಂಚಿ : ದಕ್ಷಿಣ ಆಫ್ರಿಕಾ ವಿರುದ್ದದ ಮೂರನೇ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ದ್ವಿಶತಕ ಸಿಡಿಸುವ ಮೂಲಕ ರೋಹಿತ್ ಶರ್ಮಾ ಅವರು  ಸೆಹ್ವಾಗ್‌ ಅವರ ದಾಖಲೆಯನ್ನೂ ಸರಿಗಟ್ಟಿ, ಸುನಿಲ್‌ ಗವಾಸ್ಕರ್‌, ವಿನೂ ಮಂಕಡ್‌, ಬುಧಿ ಕುಂದೇರನ್‌ ಅವರ ಎಲೈಟ್‌ ಪಟ್ಟಿಗೆ ರೋಹಿತ್‌ ಸೇರ್ಪಡೆಯಾಗಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ನ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಭಾರತ ತಂಡದ ಪರ ಸರಣಿಯೊಂದರಲ್ಲಿ 500ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದ ಎಲೈಟ್‌ ಆಟಗಾರರ ಪಟ್ಟಿಗೆ ರೋಹಿತ್‌ ಸೇರ್ಪಡೆಯಾಗಿದ್ದಾರೆ. 

ವೀರೇಂದ್ರ ಸೆಹ್ವಾಗ್‌ ಈ ಸಾಧನೆ ಮಾಡಿದ ಭಾರತದ ಕೊನೆಯ ಓಪನರ್‌. ಸುನಿಲ್‌ ಗವಾಸ್ಕರ್‌ ಟೀಮ್‌ ಇಂಡಿಯಾದ ಆರಂಭಕಾರರಾಗಿ ದಾಖಲೆಯ 5 ಬಾರಿ ಸರಣಿಯೊಂದರಲ್ಲಿ 500+ ರನ್‌ಗಳನ್ನು ಗಳಿಸಿದ್ದಾರೆ. ಇವರ ಸಾಲಿನಲ್ಲಿ ವಿನೂ ಮಂಕಡ್‌ ಮತ್ತು ಬುಧಿ ಕುಂದೇರನ್‌ ತಲಾ ಒಮ್ಮೆ ಈ ಸಾಧನೆ ಮೆರೆದು ಎಲೈಟ್‌ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಪ್ರಸಕ್ತ ಟೆಸ್ಟ್‌ ಸರಣಿಯಲ್ಲಿ ರೋಹಿತ್ ಆಡಿರುವ 3 ಟೆಸ್ಟ್‌ ಪಂದ್ಯಗಳಲ್ಲಿನ 4 ಇನಿಂಗ್ಸ್‌ಗಳಿಂದ 529 ರನ್‌ಗಳನ್ನು ಗಳಿಸಿದ್ದಾರೆ. ಈ ಮೂಲಕ 172ರ ಅಮೋಘ ಬ್ಯಾಟಿಂಗ್‌ ಸರಾಸರಿ ಹೊಂದಿದ್ದಾರೆ. ರೋಹಿತ್‌ ಸರಣಿಯಲ್ಲಿ ಒಟ್ಟು ಮೂರು ಶತಕ ಬಾರಿಸಿದ್ದಾರೆ

SCROLL FOR NEXT