ಕ್ರಿಕೆಟ್

ಕೊಹ್ಲಿ ಅತ್ಯಂತ ಪ್ರಮುಖ ವ್ಯಕ್ತಿ, ಅವರಿಗೆ ಎಲ್ಲಾ ಬಗೆಯ ಬೆಂಬಲ ನೀಡುತ್ತೇನೆ: ಬಿಸಿಸಿಐ ನೂತನ ಅಧ್ಯಕ್ಷ ಗಂಗೂಲಿ

Raghavendra Adiga

ಮುಂಬೈ: ನೂತನ ಬಿಸಿಸಿಐ ಅಧ್ಯಕ್ಷ  ಸೌರವ್ ಗಂಗೂಲಿ ತಾವು ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವುದಾಗಿ ಭರವಸೆ ನೀಡಿದ್ದು ತಾವು ಟೀಂ ಇಂಡಿಯಾವನ್ನು ಮುನ್ನಡೆಸಿದ ಮಾದರಿಯಲ್ಲಿಯೇ ಕ್ರಿಕೆಟ್ ಮಂಡಳಿಯನ್ನೂ ಮುನ್ನಡೆಸಿಕೊಂಡು ಹೋಗುವೆನು ಎಂದಿದ್ದಾರೆ. 

"ನಾನು ಭಾರತ ತಂಡವನ್ನು  ಮುನ್ನಡೆಸಿದಂತೆಯೇ ಬಿಸಿಸಿಐನಲ್ಲಿ ಸಹ ವಿಶ್ವಾಸಾರ್ಹತೆ, ಭ್ರಷ್ಟಾಚಾರ ಮುಕ್ತ ಮತ್ತು ಯಾವುದೇ ರಾಜಿ ಇಲ್ಲದ ಆಡಳಿತ ನೀಡುತ್ತೇನೆ" ಗಂಗೂಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದರು.

ಗಂಗೂಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯ 39ನೇ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಟೀಂ ಇಂಡಿಯಾ ಹಾಲಿ ನಾಯಕರಾಗಿರುವ ವಿರಾಟ್ ಕೊಹ್ಲಿ ಅವರೊಡನೆ ಗುರುವಾರ ಮಾತನಾಡುವುದಾಗಿ ಹೇಳಿದ ಗಂಗೂಲಿ "ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟ್‌ನಲ್ಲಿ ಅತ್ಯಂತ ಪ್ರಮುಖ ವ್ಯಕ್ತಿ, ನಾವು ಅವರ ಮಾತನ್ನು ಕೇಳುತ್ತೇವೆ. ನಮ್ಮಲ್ಲಿ ಪರಸ್ಪರ ಗೌರವವಿದೆ., ಅಭಿಪ್ರಾಯ ವಿನಿಮಯವಿರಲಿದೆ" ಎಂದರು.

"ನಾನು ನಾಳೆ ವಿರಾಟ್ ಕೊಹ್ಲಿಯೊಂದಿಗೆ ಮಾತನಾಡುತ್ತೇನೆ, ನಾನು ಅವರಿಗೆ ಎಲ್ಲಾ ರೀತಿಯ ಬೆಂಬಲ ನೀಡುತ್ತೇನೆ"

ಈ ವರ್ಷಾಂರಂಭದಲ್ಲಿ ನಡೆದ ಏಕದಿನ ವಿಶ್ವಕಪ್‌ ನಲ್ಲಿ ಟೀಂ ಇಂಡಿಯಾ ಸೆಮಿಫೈನಲ್ ಹಂತದಿಂದ ನಿರ್ಗಮಿಸಿದ ಬಳಿಕ ವಿಶ್ರಾಂತಿ ಪಡೆಯುತ್ತಿರುವ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಭವಿಷ್ಯದ ಕುರಿತು ಕೇಳಿದಾಗ "ಚಾಂಪಿಯನ್ ಆಟ ಬೇಗನೇ ಮುಗಿಯುವುದಿಲ್ಲ, ನಾನಿಲ್ಲಿ ಇರುವವರೆಗೆ ಪ್ರತಿಯೊಬ್ಬರೂ ಗೌರವಿಸಲ್ಪಡುತ್ತಾರೆ." ಎಂದರು ಗಂಗೂಲಿ ಹೇಳಿದ್ದಾರೆ.

"ಆಟದಲ್ಲಿ ಪ್ರದರ್ಶನ ಅತ್ಯಂತ ಪ್ರಮುಖವಾಗಿದೆ.  ಭಾರತೀಯ ಕ್ರಿಕೆಟ್‌ನ ಭವಿಷ್ಯವನ್ನು ಅದು ನಿರ್ಧರಿಸಲಿದೆ. ಎಲ್ಲಾ ಸಮಯದಲ್ಲಿ ವಿರಾಟ್ ಅತ್ಯಂತ ಪ್ರಮುಖ ವ್ಯಕ್ತಿ. ನಾವು ಅವರನ್ನು ಬೆಂಬಲಿಸುತ್ತೇವೆ, ನಾವು ಅವರ ಮಾತನ್ನು ಕೇಳುತ್ತೇವೆ. ನಾನು ನಾಯಕನಾಗಿದ್ದ ಕಾರಣ ನಾನು ಅವರ ಮಾತನ್ನು ಅರ್ಥೈಸಿಕೊಳ್ಳುತ್ತೇನೆ. "

2013 ರ ಚಾಂಪಿಯನ್ಸ್ ಟ್ರೋಫಿಯಿಂದ ಐಸಿಸಿ ಸ್ಪರ್ಧೆಗಳನ್ನು ಗೆಲ್ಲಲು ಭಾರತಕ್ಕೆ ಸಾಧ್ಯವಾಗಿಲ್ಲದರ ಬಗೆಗೆ ಗಂಗೂಲಿ ಪ್ರತಿಕ್ರಿಯೆ ನೀಡಿದ್ದಾರೆ. "ಹೌದು,ಟೀಂ ಇಂಡಿಯಾ ವಿಶ್ವಕಪ್ ಗೆದ್ದಿಲ್ಲ ಎಂದು ನೀವು ಹೇಳಬಹುದು ಆದರೆ ನೀವು ಪ್ರತಿ ಬಾರಿಯೂ ವಿಶ್ವಕಪ್ ಗೆಲ್ಲುವುದಿಲ್ಲ.  ಆದರೆ ಗೆಲ್ಲುವರೆಂಬ ಆಶಾಭಾವನೆಯಿಂದ ನಾವವರನ್ನು ಬೆಂಬಲಿಸುತ್ತೇವೆ. ನಾವು ಭಾರತೀಯ ಕ್ರಿಕೆಟ್ ಸುಗಮವಾಗಿ ಮುಂದುವರಿಯುವಂತೆ ನೋಡಿಕೊಳ್ಳುತ್ತೇವೆ."

ರೋಹಿತ್ ಶರ್ಮಾ ಅವರನ್ನು ವೈಟ್-ಬಾಲ್ ನಾಯಕನನ್ನಾಗಿ ಮಾಡಲಾಗುವುದು ಎಂಬ ವದಂತಿಗಳ ಬಗೆಗೆ ಕೇಳಿದಾಗ ಗಂಗೂಲಿ ನಾಯಕತ್ವದ ವಿಭಜನೆ ಬಗೆಗಿನ ಯಾವ ಸಾಧ್ಯತೆಗಳನ್ನು ತಳ್ಳಿ ಹಾಕಿದ್ದಾರೆ."ಈ ಪ್ರಶ್ನೆ ಉದ್ಭವಿಸುತ್ತದೆ ಎಂದು ನಾನು ಭಾವಿಸುವುದಿಲ್ಲ.ಈಗಾಗಲೇ ಟೀಂ ಇಂಡಿಯಾ ವಿಶ್ವದ ಅತ್ಯುತ್ತಮ ತಂಡವಾಗಿದೆ" ಅವರು ಹೇಳಿದರು.

ಮಂಗಳವಾರ ರಾಂಚಿಯಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ನಲ್ಲಿ  ಭಾರತದ 3-0 ವೈಟ್‌ವಾಶ್‌ನ ಕೊಹ್ಲಿ ಟೆಸ್ಟ್ ಗಳಿಗೆ ಪಿಚ್ ಸೀಮಿತಗೊಳಿಸಲು ತುರ್ತು ಅಗತ್ಯವಿದೆ ಎಂದು ಹೇಳಿದ್ದರು. ಆ ವಿಚಾರವಾಗಿ ಕೇಳಲಾಗಿ "ಟೆಸ್ಟ್ ಸ್ಥಳಗಳ ವಿಷಯದಲ್ಲಿ, ನಾವು ಸಾಕಷ್ಟು ರಾಜ್ಯಗಳನ್ನು ಹೊಂದಿದ್ದೇವೆ, ಸಾಕಷ್ಟು ಸ್ಥಳಗಳನ್ನು ಹೊಂದಿದ್ದೇವೆ, ಆದ್ದರಿಂದ ನಾನು ಕೊಹ್ಲಿ ಜತೆ ಮಾತನಾಡಿದ ಬಳಿಕ ಇದರ ಬಗೆಗೆ ತೀರ್ಮಾನಿಸುವೆ" ಎಂದರು.

SCROLL FOR NEXT