ಕ್ರಿಕೆಟ್

ಭಾರತೀಯ ಕ್ರಿಕೆಟ್ ನಲ್ಲಿ ಧೋನಿ ಯುಗ ಮುಕ್ತಾಯ!?

Srinivas Rao BV

ಮುಂಬೈ: ಆಯ್ಕೆ ಸಮಿತಿ ಅಧ್ಯಕ್ಷ ಎಂ.ಎಸ್.ಕೆ ಪ್ರಸಾದ್ ಅವರು ಯುವ ವಿಕೆಟ್ ಕೀಪರ್ ಗಳಿಗೆ ಮಣೆ ಹಾಕಿದ್ದು, ಅವರ ಯೋಜನೆಯಲ್ಲಿ ಮಹೇಂದ್ರ ಸಿಂಗ್ ಧೋನಿಗೆ ಯಾವುದೇ ಸ್ಥಾನವಿಲ್ಲ. 

ಬಾಂಗ್ಲಾದೇಶದ ವಿರುದ್ಧದ ಸರಣಿಗೆ ಗುರುವಾರ ಭಾರತ ತಂಡವನ್ನು ಆಯ್ಕೆ ಮಾಡಲಾಯಿತು. ಈ ಮೂಲಕ ಭಾರತೀಯ ಕ್ರಿಕೆಟ್ ನಲ್ಲಿ ಧೋನಿ ಕಾಲ ಮುಗಿದಂತೆ ಆಗಿದೆ. ಆಯ್ಕೆ ಸಮಿತಿಯ ಪ್ರಸಾದ್ ಅವರಿಗೆ ನಾಲ್ಕು ಬಾರಿ ಧೋನಿ ಅವರ ಬಗ್ಗೆ ಪ್ರಶ್ನೆಗಳನ್ನು ಕೇಳಿದಾಗ, ನೇರವಾಗಿ ಈ ಪ್ರಶ್ನೆಗೆ ಉತ್ತರ ನೀಡದೆ, ಧೋನಿ ನಿವೃತ್ತಿಯ ಬಗ್ಗೆ ಸುತ್ತಿ ಬಳಿಸಿ ಮಾತನಾಡಿದರು. 

ಧೋನಿ ಅವರು ಟೆಸ್ಟ್ ನಲ್ಲಿ ಮೊದಲೇ ನಿವೃತ್ತಿ ಘೋಷಿಸಿದ್ದಾರೆ. ಇಂಗ್ಲೆಂಡ್ ನಲ್ಲಿ ನಡೆದ ವಿಶ್ವಕಪ್ ಬಳಿಕ ಧೋನಿ ಮೈದಾನಕ್ಕೆ ಎಂಟ್ರಿ ನೀಡಿಲ್ಲ. ಪ್ರಸಾದ್ ಅವರು ಧೋನಿ ಅವರನ್ನು ಕೈ ಬಿಡಲಾಗಿದೆ ಎಂದು ಹೇಳದೆ ವಿಶ್ವಕಪ್ ಬಳಿಕ ರಿಷಭ್ ಪಂತ್ ಅವರತ್ತ ಹೆಚ್ಚಿನ ದೃಷ್ಟಿ ಇಟ್ಟಿದ್ದೇವೆ ಎಂದು ತಿಳಿಸಿದ್ಧಾರೆ. 

ವಿಶ್ವಕಪ್ ಬಳಿಕ ನಾನು ಹೇಳಿದಂತೆ ಯುವಕರಿಗೆ ಆದ್ಯತೆ ನೀಡಲಾಗುವುದು. ಅಲ್ಲದೆ ಯುವಕರಿಗೆ ಅವಕಾಶ ನೀಡುವತ್ತ ಚಿತ್ತ ನೆಟ್ಟಿದ್ದೇವೆ. ಪಂತ್ ಉತ್ತಮವಾಗಿ ಆಡುತ್ತಿದ್ದು, ಸಂಜು ಸ್ಯಾಮ್ಸನ್ ಅವರಿಗೂ ಸ್ಥಾನ ಲಭಿಸಿದೆ. ನೀವಿಗ ನಮ್ಮ ಯೋಜನೆಯನ್ನು ಅರಿತಿರಬೇಕು ಎಂದು ತಿಳಿದಿದ್ದೇವೆ. ಅಲ್ಲದೆ ಧೋನಿ ಅವರೇ ಯುವಕರ ಬಗ್ಗೆ ಧ್ವನಿ ಎತ್ತಿದ್ದಾರೆ; ಎಂದು ಹೇಳಿದ್ದಾರೆ. 

SCROLL FOR NEXT