ಕ್ರಿಕೆಟ್

ಕೇವಲ 11 ಪಂದ್ಯಗಳಲ್ಲಿ ಎಂಎಸ್ ಧೋನಿ ದಾಖಲೆ ಮುರಿದ ರಿಷಬ್ ಪಂತ್‌

Vishwanath S

ಜಮೈಕಾ: ಭಾರತ ತಂಡದ ಯುವ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಅವರು ವೆಸ್ಟ್ ಇಂಡೀಸ್‌ ವಿರುದ್ಧದ ಎರಡನೇ ಪಂದ್ಯದಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರ ದಾಖಲೆಯೊಂದನ್ನು ಮುರಿದಿದ್ದಾರೆ.

ಭಾನುವಾರ ಸಬೀನಾ ಪಾರ್ಕ್‌ನಲ್ಲಿ ಇಶಾಂತ್‌ ಶರ್ಮಾ ಅವರ ಬೌಲಿಂಗ್‌ನಲ್ಲಿ ಕ್ರೈಗ್‌ಬ್ರಾಥ್‌ ವೇಟ್‌ ಅವರ ಸುಲಭ ಕ್ಯಾಚ್‌ ಹಿಡಿಯುವ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ ವಿಕೆಟ್‌ ಹಿಂದೆ 50 ಬಲಿ ತೆಗೆದುಕೊಂಡ ಭಾರತದ ಮೊದಲ ವಿಕೆಟ್‌ ಕೀಪರ್ ಎಂಬ ನೂತನ ಮೈಲಿಗಲ್ಲು ಸೃಷ್ಟಿಸಿದರು. ಆ ಮೂಲಕ ಎಂ.ಎಸ್‌ ಧೋನಿ ಅವರ ದಾಖಲೆ ಹಿಂದಿಕ್ಕಿದರು.

ಈ ಸಾಧನೆ ಮಾಡಲು ಪಂತ್‌ ಕೇವಲ 11 ಟೆಸ್ಟ್ ಪಂದ್ಯಗಳನ್ನು ತೆಗದುಕೊಂಡಿದ್ದಾರೆ. ಈ ಹಿಂದೆ ಧೋನಿ 15 ಪಂದ್ಯಗಳಿಂದ 50 ವಿಕೆಟ್‌ ಕೀಪಿಂಗ್‌ನಿಂದ 50 ವಿಕೆಟ್‌ಗಳನ್ನು ಪಡೆದಿದ್ದರು.

SCROLL FOR NEXT