ಕ್ರಿಕೆಟ್

ಕೈಲಾಗದವನಂತೆ ಅಳೋದನ್ನು ನಿಲ್ಲಿಸಿ: ಆ್ಯಡಮ್ ಗಿಲ್‌ಕ್ರಿಸ್ಟ್‌ಗೆ ತಿರುಗೇಟು ನೀಡಿದ ಭಜ್ಜಿ, ವಿಡಿಯೋ!

Vishwanath S

ನವದೆಹಲಿ: ವಿಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಯುವ ವೇಗಿ ಜಸ್ ಪ್ರೀತ್ ಬುಮ್ರಾ ಇತ್ತೀಚೆಗಷ್ಟೇ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಇದರ ಬೆನ್ನಲ್ಲೇ ಹರ್ಭಜನ್ ಸಿಂಗ್ ಅವರ ಹ್ಯಾಟ್ರಿಕ್ ವಿಕೆಟ್ ಸಾಧನೆ ಬಗ್ಗೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆ್ಯಡಮ್ ಗಿಲ್‌ಕ್ರಿಸ್ಟ್‌ ಕೀಟಲೆ ಮಾಡಿದ್ದರು. ಇದಕ್ಕೆ ಹರ್ಭಜನ್ ಸಿಂಗ್ ತಕ್ಕ ಪ್ರತ್ಯುತ್ತರ ನೀಡಿದ್ದಾರೆ. 

ಹರ್ಭಜನ್ ಸಿಂಗ್ 2001ರಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾ ಪರ ಮೊದಲ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಜ್ಜಿ ರಿಕಿ ಪಾಂಟಿಂಗ್, ಆ್ಯಡಮ್ ಗಿಲ್‌ಕ್ರಿಸ್ಟ್‌ ಮತ್ತು ಶೇನ್ ವಾರ್ನ್ ರನ್ನು ಔಟ್ ಮಾಡಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು. 

ಇನ್ನು ತಾವು ಎದುರಿಸಿದ ಮೊದಲ ಎಸೆತದಲ್ಲೇ ಔಟಾಗಿದ್ದ ಗಿಲ್‌ಕ್ರಿಸ್ಟ್‌ ಮಾತ್ರ 18 ವರ್ಷಗಳ ಬಳಿಕ ಕಳೆದ ಸೆಪ್ಟೆಂಬರ್ 1ರಂದು ಟ್ವೀಟ್ ವೊಂದನ್ನು ಮಾಡಿದ್ದರು. ಆ ಟ್ವೀಟ್ ನಲ್ಲಿ 2001ರಲ್ಲಿ ಡಿಆರ್ ಎಸ್ ಇರಲಿಲ್ಲ ಎಂದು ಅಳುವ ಇನೋಜಿ ಹಾಕಿದ್ದರು. 

ಗಿಲ್‌ಕ್ರಿಸ್ಟ್‌ ಅವರ ಈ ಟ್ವೀಟ್ ಇದೀಗ ವಿವಾದಕ್ಕೆ ಕಾರಣವಾಗಿದೆ. ಅಲ್ಲದೇ ಈ ಬಗ್ಗೆ ಕೋಪಗೊಂಡಿರುವ ಹರ್ಭಜನ್ ಸಿಂಗ್, ಮೊದಲ ಎಸೆತ ಅಲ್ಲದಿದ್ದರೂ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ಉಳಿಯುತ್ತಿದ್ದರು ಎಂದನಿಸುತ್ತಿದೆಯೇ? ಇಂತಹ ವಿಚಾರಗಳಲ್ಲಿ ಅಳುವುದನ್ನು ನಿಲ್ಲಿಸಿ. ನಿವೃತ್ತಿಯ ಬಳಿಕವಾದರೂ ವಿವೇಕದಿಂದ ಮಾತನಾಡುವೀರಿ ಅಂದುಕೊಂಡಿದ್ದೆ. ಆದರೆ ಕೆಲವು ವಿಚಾರಗಳು ಎಂದಿಗೂ ಬದಲಾಗುವುದಿಲ್ಲ. ನೀವಿದ್ದಕ್ಕೆ ಉತ್ತಮ ಉದಾಹರಣೆ ಎಂದು ಟಾಂಗ್ ನೀಡಿದ್ದಾರೆ.

ಕೋಲ್ಕತ್ತಾದ ಈಡೆನ್ ಗಾರ್ಡನ್ ನಲ್ಲಿ ನಡೆದ ಪಂದ್ಯದಲ್ಲಿ ಹರ್ಭಜನ್ ಸಿಂಗ್ 7 ವಿಕೆಟ್ ಪಡೆದಿದ್ದರು. ಈ ಪಂದ್ಯದಲ್ಲಿ ಭಾರತ 171 ರನ್ ಗಳಿಂದ ಐತಿಹಾಸಿಕ ಗೆಲುವು ದಾಖಲಿಸಿತ್ತು. 

SCROLL FOR NEXT