ಕ್ರಿಕೆಟ್

ಧೋನಿ ಗೌರವಾನ್ವಿತ ವಿದಾಯಕ್ಕೆ ಅರ್ಹರು: ಅನಿಲ್ ಕುಂಬ್ಳೆ

Lingaraj Badiger

ನವದೆಹಲಿ: ವಿಕೆಟ್ ಕೀಪರ್, ಬ್ಯಾಟ್ಸ್‌ಮನ್ ಮಹೇಂದ್ರ ಸಿಂಗ್ ಧೋನಿ ಗೌರವಾನ್ವಿತ ವಿದಾಯಕ್ಕೆ ಅರ್ಹರು ಎಂದು ಭಾರತದ ಮಾಜಿ ನಾಯಕ ಮತ್ತು ಮಾಜಿ ಕೋಚ್ ಅನಿಲ್ ಕುಂಬ್ಳೆ ಹೇಳಿದ್ದಾರೆ.

ಜುಲೈನಲ್ಲಿ ಐಸಿಸಿ ವಿಶ್ವಕಪ್ ಮುಗಿದ ನಂತರ, ಧೋನಿ ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದರು. ಮುಂದಿನ ವರ್ಷ ನಡೆಯುವ ಟಿ-20 ವಿಶ್ವಕಪ್‌ನಲ್ಲಿ ಧೋನಿ ಆಯ್ಕೆಯ ಬಗ್ಗೆ ಕುಂಬ್ಳೆ ಅನುಮಾನ ವ್ಯಕ್ತಪಡಿಸಿದ್ದಾರೆ. ಧೋನಿ ವೆಸ್ಟ್ ಇಂಡೀಸ್ ವಿರುದ್ಧದ ಟಿ-20 ಸರಣಿ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟಿ -20 ತಂಡದಲ್ಲಿ ಸ್ಥಾನ ಪಡೆದಿಲ್ಲ.

"ಧೋನಿ ಅವರು ಕ್ರಿಕೆಟ್ ನಲ್ಲಿ ಮುಂದುವರೆಯಲು ಅರ್ಹರೋ ಅಥವಾ ಇಲ್ಲವೋ ಗೊತ್ತಿಲ್ಲ. ಆದರೆ ನಿವೃತ್ತಿ ಹೊಂದಲು ನಿರ್ಧರಿಸಿದಾಗ ಅವರಿಗೆ ಗೌರವಯುತ ವಿದಾಯ ಹೇಳಬೇಕು" ಎಂದು ಕುಂಬ್ಳೆ ಹೇಳಿದ್ದಾರೆ. ಇದಕ್ಕೆ ಅವರು ಅರ್ಹರು.

ಧೋನಿ ಅವರನ್ನು ತಂಡಕ್ಕೆ ಆಯ್ಕೆ ಮಾಡುವ ಬಗ್ಗೆ ಆಯ್ಕೆದಾರರು ಮಾತನಾಡಬೇಕು. ಇನ್ನು ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್ ಗೆ ತಂಡ ಯಾವ ರೀತಿಯಿಂದ ಕೂಡಿರಬೇಕು ಎಂಬುದನ್ನು ಆಯ್ಕೆದಾರರು ನಿರ್ಧರಿಸಬೇಕು ಎಂದು ಅನಿಲ್ ಕುಂಬ್ಳೆ ತಿಳಿಸಿದ್ದಾರೆ.

SCROLL FOR NEXT