ಕ್ರಿಕೆಟ್

ಸ್ಟಾರ್ಕ್ ಮಾರಣಾಂತಿಕ ಬೌಲಿಂಗ್‌ಗೆ ಒಡೆದ ರೂಟ್ 'ಅಬ್ಡೊಮಿನಲ್ ಗಾರ್ಡ್', ಕುಸಿದು ಬಿದ್ದ ಜೋ, ವಿಡಿಯೋ!

Vishwanath S

ಮ್ಯಾಂಚೆಸ್ಟರ್: ಆ್ಯಶಸ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಮಾರಣಾಂತಿಕ ಬೌಲಿಂಗ್‌ಗೆ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಅವರ ಅಬ್ಡೊಮಿನಲ್ ಗಾರ್ಡ್ ಒಡೆದು ಹೋಗಿದೆ.

ಮಿಚೆಲ್ ಸ್ಟಾರ್ಕ್ ಗಂಟೆಗೆ 140 ಕಿ.ಮೀ ವೇಗದಲ್ಲಿ ಚೆಂಡನ್ನು ಎಸೆದಿದ್ದರು. ಈ ವೇಳೆ ರಕ್ಷಣಾತ್ಮಕ ಬ್ಯಾಟಿಂಗ್ ಮುಂದಾದಾಗ ಚೆಂಡು ನೇರವಾಗಿ ಅಬ್ಡೊಮಿನಲ್ ಗಾರ್ಡ್ ಗೆ ಬಿದ್ದಿದೆ. ಕೂಡಲೇ ನೋವಿನಿಂದ ರೂಟ್ ಕುಸಿದು ಬಿದ್ದರು. 

ನಂತರ ಅಬ್ಡೊಮಿನಲ್ ಗಾರ್ಡ್ ತೆಗೆದು ನೋಡಿದಾಗ ಎರಡು ಚೂರಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಸರಣಿಯ ನಾಲ್ಕನೇ ಪಂದ್ಯದಲ್ಲಿ ಆಸ್ಟ್ರೆಲಿಯಾ ಗೆಲುವು ಸಾಧಿಸಿದೆ. ಈ ಮೂಲಕ 2-1 ಅಂತರದಿಂದ ಮುನ್ನಡೆ ಸಾಧಿಸಿದೆ. ಮುಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆದ್ದರೆ ಸರಣಿ ಕೈವಶ ಮಾಡಿಕೊಳ್ಳಲಿದೆ. ಇನ್ನು ಇಂಗ್ಲೆಂಡ್ ಗೆದ್ದರೆ ಸರಣಿ ಸಮಬಲವಾಗಲಿದೆ.

SCROLL FOR NEXT