ಕ್ರಿಕೆಟ್

ಕೆಎಲ್ ರಾಹುಲ್ ವೈಫಲ್ಯ, ಟೆಸ್ಟ್ ನಲ್ಲಿ ರೋಹಿತ್ ಆರಂಭಿಕರಾಗಿ ಆಡಬಹುದು: ಎಂಎಸ್‌ಕೆ ಪ್ರಸಾದ್

Vishwanath S

ನವದೆಹಲಿ: ಕೆಎಲ್ ರಾಹುಲ್ ಅವರು ಟೆಸ್ಟ್ ನಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾದ ಹಿನ್ನೆಲೆ, ರೋಹಿತ್ ಶರ್ಮಾ ಅವರನ್ನು ಆರಂಭಿಕರಾಗಿ ಕಣಕ್ಕಿಳಿಸಲು ಚಿಂತನೆ ನಡೆದಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿ(ಬಿಸಿಸಿಐ)ಯ ಮುಖ್ಯ ಆಯ್ಕೆದಾರ ಎಂಎಸ್ಎಕೆ ಪ್ರಸಾದ್ ಹೇಳಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧ ರಾಹುಲ್ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ವಿಂಡೀಸ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ನಾಲ್ಕು ಇನ್ನಿಂಗ್ಸ್‌ಗಳಲ್ಲಿ 44, 38, 13 ಮತ್ತು ಆರು ರನ್ ಗಳಿಸಿ ನಿರಾಸೆ ಅನುಭವಿಸಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸದ ನಂತರ ಆಯ್ಕೆ ಸಮಿತಿ ಸಭೆ ನಡೆದಿಲ್ಲ. ನಾವು ಸಭೆ ಸೇರಿದಾಗೆಲ್ಲಾ ರೋಹಿತ್ ಅವರನ್ನು ಟೆಸ್ಟ್ ನಲ್ಲಿ ಆರಂಭಿಕರಾಗಿ ಕಣಕ್ಕೆ ಇಳಿಸುವ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದಿದ್ದಾರೆ. 

ರಾಹುಲ್ ಉತ್ತಮ ಆಟಗಾರ ಎಂಬುದರಲ್ಲಿ ಸಂದೇಹವಿಲ್ಲ ಎಂದು ಅವರು ಹೇಳಿದ್ದಾರೆ. ಪ್ರಸ್ತುತ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಲಯ ಕಂಡು ಕೊಳ್ಳಲು ಹೆಣಗಾಟ ನಡೆಸಿದ್ದಾರೆ. ಅವರು ಕ್ರೀಸ್‌ನಲ್ಲಿ ಹೆಚ್ಚು ಹೆಚ್ಚು ಸಮಯ ಕಳೆದು ಲಯಕ್ಕೆ ಮರಳಬಹುದು ಎಂದು ಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.      

ಇದಕ್ಕೂ ಮುನ್ನ ಮಾಜಿ ನಾಯಕ ಸೌರಭ್ ಗಂಗೂಲಿ ಅವರು ರೋಹಿತ್‌ಗೆ ಟೆಸ್ಟ್‌ನಲ್ಲಿ ಆರಂಭಿಕರಾಗಿ ಕಣಕ್ಕೆ ಇಳಿಸುವಂತೆ ಒತ್ತಾಯಿಸಿದ್ದರು. ರೋಹಿತ್ ಶರ್ಮಾ ಇದೇ ವರ್ಷ ಜುಲೈನಲ್ಲಿ ನಡೆದ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ. ಅಲ್ಲದೆ ಅವರು ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದರು.

SCROLL FOR NEXT