ಕ್ರಿಕೆಟ್

ಅಂತಿಮ ಟಿ20: ಡಿ'ಕಾಕ್‌ ಅಬ್ಬರಕ್ಕೆ ಬೆದರಿದ ಹುಲಿಗಳು, ಟೀಂ ಇಂಡಿಯಾಗೆ ಹೀನಾಯ ಸೋಲು 

Raghavendra Adiga

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಹಾ ಗೂ ಅಂತಿಮ ಟಿ-ಟ್ವೆಂಟಿ ಪಂದ್ಯದಲ್ಲಿ ಹರಿಣ ಪಡೆ ಟೀಂ ಇಂಡಿಯಾ ವಿರುದ್ಧ ಒಂಬತ್ತು ವಿಕೆಟ್ ದಾಖಲೆ ಗೆಲುವು ಸಾಧಿಸಿದೆ.

ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಆಫ್ರಿಕಾ ಪರ  ಕ್ಯಾಪ್ಟನ್‌ ಕ್ವಿಂಟನ್‌ ಡಿ'ಕಾಕ್‌ ಅದ್ಭುತ ಆಟ ಪ್ರದರ್ಶಿಸಿದ್ದು ತಂಡದ ಗೆಲುವಿಗೆ ಕಾರಣಿಕರ್ತರಾದರು.ಕಾಕ್‌ 62  ಬಾಲ್ ಗಳಲ್ಲಿ 6 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ ಅಜೇಯ 79 ರನ್ ಗಳಿಸಿದರು.

ಕಾಕ್ ಗೆ ಸಾಥ್ ನೀಡಿದ್ದ ತೆಂಬಾ ಬವೂಮಾ 27 ರನ್ ಗಳಿಸಿ ಹರಿಣ ಪಡೆಗೆ ಸುಲಭ ಗೆಲುವು ದೊರಕಿಸಿಕೊಟ್ಟಿದ್ದಾರೆ. 

ದಕ್ಷಿಣ ಆಫ್ರಿಕಾ ಪರ ಇನ್ನೋರ್ವ ಆಟಗಾರ ರೀಜಾ ಹೆಂಡ್ರಿಕ್ಸ್‌ (28) ಗಳಿಸಿದರೆ ಹರಿಣ ಪಡೆ ಭಾರತ ನೀಡಿದ್ದ 135 ರನ್ ಗುರಿಯನ್ನು ಸುಲಭವಾಗಿ ತಲುಪಿದೆ. ಆಫ್ರಿಕಾ ಪಡೆ 16.5 ಓವರ್‌ಗಳಲ್ಲಿ 140 ರನ್‌ಗಳಿಸಿ ಭರ್ಜರಿ ಗೆಲುವು ದಾಖಲಿಸಿದೆ.

ಇದರೊಡನೆ ಭಾರತ ಪ್ರವಾಸಿ ತಂಡದ ವಿರುದ್ಧ ಹೀನಾಯ ಸೋಲು ಅನುಭವಿಸಿದೆ. ಇನ್ನೊಂದೆಡೆ ಆಫ್ರಿಕಾ ಪಡೆ ಈ ಜಯದೊಂದಿಗೆ ಸರಣಿಯನ್ನು ಸಮಬಲವಾಗಿಸಿಕೊಂಡಿದೆ.

SCROLL FOR NEXT