ಸಂಗ್ರಹ ಚಿತ್ರ 
ಕ್ರಿಕೆಟ್

ಭಾರತದ ವಿರುದ್ಧ ಬೊಟ್ಟು ಮಾಡುವ ಮೊದಲು ನಿಮ್ಮ ಸಮಸ್ಯೆ ಬಗೆಹರಿಸಿಕೊಳ್ಳಿ: ಪಾಕಿಸ್ತಾನಕ್ಕೆ ಧವನ್ ತಿರುಗೇಟು

ಜಮ್ಮು ಮತ್ತು ಕಾಶ್ಮೀರ ವಿಚಾರವಾಗಿ ಭಾರತದ ವಿರುದ್ಧ ಕಿಡಿಕಾರುತ್ತಿರುವ ಪಾಕಿಸ್ತಾನಕ್ಕೆ ಕ್ರಿಕೆಟಿಗ ಶಿಖರ್ ಧವನ್ ಖಡಕ್ ತಿರುಗೇಟು ನೀಡಿದ್ದು, ಭಾರತದ ವಿರುಗ್ಧ ಬೊಟ್ಟು ಮಾಡಿ ತೋರಿಸುವ ಮುನ್ನ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ ಎಂದು ತಿರುಗೇಟು ನೀಡಿದ್ದಾರೆ.

ಕಾಶ್ಮೀರ ನಮ್ಮ ಆಂತರಿಕ ವಿಚಾರ, ಈ ಕುರಿತಂತೆ ಬೇರೆಯವ ಉಪದೇಶ ನಮಗೆ ಬೇಕಿಲ್ಲ

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ವಿಚಾರವಾಗಿ ಭಾರತದ ವಿರುದ್ಧ ಕಿಡಿಕಾರುತ್ತಿರುವ ಪಾಕಿಸ್ತಾನಕ್ಕೆ ಕ್ರಿಕೆಟಿಗ ಶಿಖರ್ ಧವನ್ ಖಡಕ್ ತಿರುಗೇಟು ನೀಡಿದ್ದು, ಭಾರತದ ವಿರುಗ್ಧ ಬೊಟ್ಟು ಮಾಡಿ ತೋರಿಸುವ ಮುನ್ನ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ ಎಂದು ತಿರುಗೇಟು ನೀಡಿದ್ದಾರೆ.

ಖಾಸಗಿ ವಾಹಿನಿಯ ಆಪ್ ಕಿ ಅದಾಲತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕ್ರಿಕೆಟಿಗ ಶಿಖರ್ ಧವನ್ ಈ ವೇಳೆ ಕಾಶ್ಮೀರ ವಿಚಾರ ಬಂದಾಗ ಗಂಭೀರವಾಗಿ ಉತ್ತರ ನೀಡಿದರು. ಮುಖ್ಯವಾಗಿ ಭಾರತದ ಆಂತರಿಕ ವ್ಯವಹಾರಗಳ ಬಗ್ಗೆ ಪಾಕಿಸ್ತಾನ ಸಲಹೆ ನೀಡಿರುವ ಕುರಿತಾಗಿ ಮಾತನಾಡಿರುವ ಧವನ್‌, 'ಬೇರೆಯವರ ಬಗ್ಗೆ ಮಾತನಾಡುವ ಮೊದಲು ನಿಮ್ಮ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಖಡಕ್‌ ಉತ್ತರ ನೀಡಿದ್ದಾರೆ.

ಇದೇ ವೇಳೆ ಕಾಶ್ಮೀರ ನಮ್ಮ ಆಂತರಿಕ ವಿಚಾರ ಎಂದು ಹೇಳಿರುವ ಧವನ್, ಈ ಕುರಿತಂತೆ ಬೇರೆಯವ ಉಪದೇಶ ನಮಗೆ ಬೇಕಿಲ್ಲ. ತಾಯ್ನಾಡಿನ ಕುರಿತಾಗಿ ವಿದೇಶಿಗರು ಮಾತನಾಡಿದರೆ ಖಂಡಿತವಾಗಿಯೂ ತಾವು ಅದನ್ನು ವಿರೋಧಿಸುತ್ತೇವೆ ಎಂದು ಹೇಳಿದರು.

'ಯಾರೋ ಒಬ್ಬರು ನಮ್ಮ ದೇಶದ ಕುರಿತಾಗಿ ಇಲ್ಲಸಲ್ಲದನ್ನು ಮಾತನಾಡಿದರೆ ಖಂಡಿತವಾಗಿಯೂ ಅವರ ವಿರುದ್ಧವಾಗಿ ನಿಲ್ಲುತ್ತೇವೆ. ಬೇರೊಬ್ಬರು ನಮಗೆ ಸಲಹೆ ನೀಡುವ ಅಗತ್ಯ ಖಂಡಿತವಾಗಿಯೂ ಇಲ್ಲ. ಮೊದಲು ನಿಮ್ಮ ದೇಶದಲ್ಲಿರುವ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಿ ಬಳಿಕ ಬೇರೆಯವರ ಬಗ್ಗೆ ಮಾತನಾಡಿ. ಒಂದು ಗಾದೆ ಮಾತಿದೆ, ಯಾರ ಮನೆ ಗಾಜಿನಿಂದ ಮಾಡಿರುವುದ್ದಾಗಿರುತ್ತೋ ಅವರು ಬೇರೆಯವರ ಮನೆಯ ಮೇಲೆ ಕಲ್ಲೆಸೆಯುವುದಿಲ್ಲ ಎಂದು ಗಬ್ಬರ್ ಖ್ಯಾತಿ ಧವನ್ ತಮ್ಮದೇ ಶೈಲಿಯಲ್ಲಿ ಪಾಕಿಸ್ತಾನವನ್ನು ಟೀಕಿಸಿದ್ದಾರೆ. 

ಇನ್ನು ಈ ಹಿಂದೆ ಕಾಶ್ಮೀರ ಕುರಿತಾಗಿ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್‌ ಅಫ್ರಿದಿ ನೀಡಿದ್ದ ಹೇಳಿಕೆಯನ್ನು ಖಂಡಿಸಿದ್ದ ಧವನ್‌, ಭಾರತದ ವಿಚಾರದಲ್ಲಿ ಬೇರೆಯವರು ಸಲಹೆ ನೀಡುವ ಅಗತ್ಯವಿಲ್ಲ ಎಂದು ಗುಡುಗಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು

ಮತ ಕಳ್ಳತನದಿಂದಲೇ ಮೋದಿ ಪ್ರಧಾನಿಯಾಗಿದ್ದು, ಗೆಲ್ಲಲಾಗದ ರಾಜ್ಯಗಳಲ್ಲೂ BJP ಗೆಲುವು: ಅಭಿಜೀತ್ ದೀಪ್ಕೆ

ರಾಜ್ಯದ ಬಾಕಿ ಹಣದ ಬಗ್ಗೆ ನಿರ್ಮಲಾ ಸೀತಾರಾಮನ್ ಜೊತೆ ಚರ್ಚೆ: GST ಮಂಡಳಿ ಸಭೆ ಬಳಿಕ CM ಡಿಕೆ.ಶಿವಕುಮಾರ್ ಹರ್ಷ

ಉತ್ತರ ಭಾರತ ವ್ಯಕ್ತಿಯಿಂದ ಡಿಕೆಶಿ ಸಿಲುಕಿಸಲು ಯತ್ನ: ಸಚಿವ ಸತೀಶ್ ಜಾರಕಿಹೊಳಿ