ಕ್ರಿಕೆಟ್

ಬೀದಿಗಿಳಿದು ಸಂಭ್ರಮಿಸಿದವರ ವಿರುದ್ಧ ರೋಹಿತ್‌ ಶರ್ಮಾ ಕಿಡಿ

Vishwanath S

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕರೆಯಂತೆ ಕೊರೊನಾ ವೈರಸ್‌ ವಿರುದ್ಧದ ಹೋರಾಟದ ಅಂಗವಾಗಿ ದೇಶದ ಸಮಸ್ತ ಜನತೆ ನಿನ್ನೆ(ಭಾನುವಾರ) ರಾತ್ರಿ 9 ಗಂಟೆ 9 ನಿಮಿಷಕ್ಕೆ ತಮ್ಮ-ತಮ್ಮ ಮನೆಗಳ ಬಾಲ್ಕನಿಗಳಲ್ಲಿ ದೀಪ ಬೆಳಗಿಸಿ ಏಕತೆಯನ್ನು ಪ್ರದರ್ಶಿಸಿದ್ದರು.

ಇದಕ್ಕೆ ಅಭೂತ ಪ್ರತಿಕ್ರಿಯೆ ವ್ಯಕ್ತವಾಗಿತ್ತು. 9 ಗಂಟೆ 9 ನಿಮಿಷಗಳಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿ  ದೀಪ ಬೆಳಗಿಸಿದ ಫೋಟೊಗಳನ್ನು ಅಥವಾ ವೀಡಿಯೋಗಳನ್ನು ಪೋಸ್ಟ್‌ ಮಾಡಿದ್ದರು. ಅದರಂತೆ ಟೀಮ್‌ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ ಅವರು ತಮ್ಮ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ತಮ್ಮದೂ ಫೋಟೊವನ್ನು ಶೇರ್‌ ಮಾಡಿದ್ದರು. ಆದರೆ, ಬೀದಿಗಳಲ್ಲಿ ದೀಪ ಬೆಳಗಿಸಿ ಸಂಭ್ರಮಿಸಿದ್ದವರ ವಿರುದ್ಧ ರೋಹಿತ್‌ ಕಿಡಿಕಾಡಿದ್ದರು. 

ವಿಶ್ವಕಪ್‌ ಟೂರ್ನಿಗೆ ಇನ್ನೂ ಬಹಳಷ್ಟು ಸಮಯವಿದೆ. ದೇಶದ ಜನತೆ ಮನೆಯಿಂದಲೇ ದೀಪ ಬೆಳಗಿಸಿ, ಅದು ಬಿಟ್ಟು ಬೀದಿಗಳಲ್ಲಿ ಸಂಭ್ರಮಿಸುವುದನ್ನು ಮಾಡಬೇಡಿ ಎಂದು ಹಿಟ್‌ಮ್ಯಾನ್‌ ಖ್ಯಾತಿಯ ರೋಹಿತ್‌ ಶರ್ಮಾ ಮನವಿ ಮಾಡಿಕೊಂಡಿದ್ದಾರೆ. "ಮನೆಯ ಒಳಾಂಗಣದಲ್ಲಿಯೇ ಇರಿ, ಬೀದಿಗಳಿಗೆ ತೆರಳಿ ಸಂಭ್ರಮಿಸುವುದನ್ನು ನಿಲ್ಲಿಸಿ. ವಿಶ್ವಕಪ್‌ ಆರಂಭವಾಗಲು ಇನ್ನು ಸಮಯವಿದೆ," ಎಂದು ಟ್ವೀಟ್‌ ಮಾಡಿದ್ದಾರೆ.

SCROLL FOR NEXT