ಕ್ರಿಕೆಟ್

ಜೀವಂತವಾಗಿರಿಸಲು ಖಾಲಿ ಮೈದಾನದಲ್ಲಿ ಐಪಿಎಲ್ ನಡೆಸಬೇಕು: ಹರ್ಭಜನ್ ಸಿಂಗ್

Vishwanath S

ನವದೆಹಲಿ: ಕೊರೊನಾ ವೈರಸ್ ಭೀತಿಯಿಂದ ಒಲಂಪಿಕ್ಸ್  ನಂತಹ ದೊಡ್ಡ ಕ್ರೀಡೆ ಮುಂದೂಡಲ್ಪಟ್ಟಿವೆ.   
 
ಇನ್ನು ವಿಶ್ವದ ದೊಡ್ಡ ಕ್ರಿಕೆಟ್ ಲೀಗ್ ಎಂದೇ ಪ್ರಸಿದ್ಧವಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮೇಲೂ ಅಪಾಯದ ತೂಗುಗತ್ತಿ ನೇತಾಡುತ್ತಿದೆ. ಮಾರ್ಚ್ 29 ರಿಂದ ಆರಂಭವಾಗಬೇಕಿದ್ದ ಐಪಿಎಲ್ ಏಪ್ರಿಲ್ 15ರ ವರೆಗೆ ಮುಂದೂಡಲಾಗಿದೆ. 

ಈ ಬಗ್ಗೆ ಟರ್ಬನೇಟರ್ ಹರ್ಭಜನ್ ಸಿಂಗ್ ಅವರು ಈ ಬಗ್ಗೆ ತುಟಿ ಬಿಚ್ಚಿದ್ದಾರೆ. ಪರಿಸ್ಥಿತಿಗಳು ತಿಳಿಯಾದ ಬಳಿಕ ಐಪಿಎಲ್ ಟೂರ್ನಿ ಆಯೋಜಿಸಬೇಕು. ಇನ್ನು ಕೋವಿಡ್-19 ಹತೋಟಿಗೆ ಬಂದಾಗಲೂ ಖಾಲಿ ಮೈದಾನದಲ್ಲಿ ನಡೆಸಬೇಕು ಖಾಲಿ ಮೈದಾನದಲ್ಲಿ ನಡೆಸಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.

"ವೀಕ್ಷಕರು ಮುಖ್ಯ, ಆದರೆ ಇಂತಹ ಪರಿಸ್ಥಿತಿ ಎದುರಾದರೆ, ಅವರಿಲ್ಲದೆ ಆಟವಾಡಲು ನನಗೆ ಮನಸ್ಸಿಲ್ಲ ಎಂದು ಸ್ಟಾರ್ ಸ್ಪೋರ್ಟ್ಸ್‌ನ ಸಂದರ್ಶನದ ವೇಳೆ ತಿಳಿಸಿದ್ದಾರೆ.

"ನಾವು ಎಲ್ಲದರ ಬಗ್ಗೆ ಜಾಗರೂಕರಾಗಿರಬೇಕು ಮತ್ತು ಪಂದ್ಯದ ಸ್ಥಳಗಳು, ತಂಡದ ಹೋಟೆಲ್‌ಗಳು, ವಿಮಾನಗಳು ಸರಿಯಾಗಿ ಸ್ವಚ್ವಗೊಳಿಸಲ್ಡುವಂತೆ ನೋಡಿಕೊಳ್ಳುವ ಮೂಲಕ ಆಟಗಾರರ ಸುರಕ್ಷತೆಗೆ ಆದ್ಯತೆ ನೀಡಬೇಕು. ಆದ್ದರಿಂದ ಎಲ್ಲವೂ ಉತ್ತಮವಾಗಿದ್ದಾಗ ನಾವು ಐಪಿಎಲ್ ಅನ್ನು ಆಯೋಜಿಸಬೇಕು ಎಂದು ಹೇಳಿದರು.

"ಐಪಿಎಲ್ ಶೀಘ್ರದಲ್ಲೇ ನಡೆಯಬಹುದೇನೋ ಎಂದು ನಾನು ಭಾವಿಸುತ್ತೇನೆ ಅಲ್ಲಿಯವರೆಗೆ ನಾನು ಫಿಟ್ ಆಗಿರುತ್ತೇನೆ ಎಂದು ಹರ್ಭಜನ್ ಹೇಳಿದ್ದಾರೆ.

SCROLL FOR NEXT