ಕ್ರಿಕೆಟ್

2011 ವಿಶ್ವಕಪ್ ಗೆದ್ದ ಬಳಿಕ ಸಚಿನ್ ಡ್ಯಾನ್ಸ್ ಹೇಗಿತ್ತು ಗೊತ್ತಾ!ಹರ್ಭಜನ್ ಸಿಂಗ್ ನೆನಪು

Nagaraja AB

ನವದೆಹಲಿ: 2011ರಲ್ಲಿ ಟೀಂ ಇಂಡಿಯಾ ವಿಶ್ವಕಪ್ ಗೆದ್ದ ಬಳಿಕ ಲೆಜೆಂಡರಿ ಬ್ಯಾಟ್ಸ್ ಮನ್ ಸಚಿನ್ ತೆಂಡೊಲ್ಕರ್ ಡ್ಯಾನ್ಸ್ ಹೇಗಿತ್ತು ಎಂಬುದರ ಬಗ್ಗೆ ಟೀಂ ಇಂಡಿಯಾ ಆಫ್ ಸ್ಪೀನ್ನರ್ ಹರ್ಭಜನ್ ಸಿಂಗ್ ನೆನಪು ಮಾಡಿಕೊಂಡಿದ್ದಾರೆ. 

2011ರಲ್ಲಿ ಟೀಂ ಇಂಡಿಯಾ ವಿಶ್ವಕಪ್ ಗೆದ್ದ ಬಳಿಕ ಲೆಜೆಂಡರಿ ಬ್ಯಾಟ್ಸ್ ಮನ್ ಸಚಿನ್ ತೆಂಡೊಲ್ಕರ್ ಸಂತಸಕ್ಕೆ ಪಾರವೇ ಇಲ್ಲದಂತಾಗಿತ್ತು. ತಮ್ಮ ಸುತ್ತ ನೆರೆದಿದ್ದ ಜನರನ್ನು ಲೆಕ್ಕಿಸದೆ ಪ್ರತಿಯೊಬ್ಬರ ಜೊತೆಗೆ ಹೆಜ್ಜೆ ಹಾಕಿದ್ದರು. ಭಾರತೀಯ ಕ್ರಿಕೆಟ್ ನಲ್ಲಿ ಅವಿಸ್ಮರಣೀಯ ಗಳಿಗೆಯಲ್ಲಿ ಜೀವನದಲ್ಲಿ ಮೊದಲ ಬಾರಿಗೆ ಅಂದು ಸಚಿನ್ ಡ್ಯಾನ್ಸ್ ಮಾಡಿದ್ದರು ಎಂದು   ಹರ್ಭಜನ್ ಸಿಂಗ್ ಹೇಳಿದ್ದಾರೆ.

ಏಪ್ರಿಲ್ 2, 2011ರಲ್ಲಿ ಧೋನಿ ನಾಯಕತ್ವದ  ಟೀಂ ಇಂಡಿಯಾ ಮುಂಬೈಯ ವಾಖೆಂಡೆ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಶ್ರೀಲಂಕಾವನ್ನು ಮಣಿಸಿ 28 ವರ್ಷಗಳ ಬಳಿಕ ವಿಶ್ವಕಪ್ ಮುಡಿಗೇರಿಸಿಕೊಂಡಿದಿತ್ತು. 22 ವರ್ಷಗಳಿಂದ ಟ್ರೋಫಿ ಎತ್ತಿಹಿಡಿಯುವ ಕನಸು ಕಾಣುತ್ತಿದ್ದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೊಲ್ಕರ್ ಅವರ ಕನಸು ಅಂದು ನೆರವೇರಿತ್ತು.

ಸಚಿನ್ ತೆಂಡೊಲ್ಕರ್ ಅವರ ಡ್ಯಾನ್ಸ್ ನ್ನು ಅಂದು ಮೊದಲ ಬಾರಿಗೆ ನೋಡಿದೆ, ಅಲ್ಲಿ ಸೇರಿದ ಜನರನ್ನು ಲೆಕ್ಕಿಸದೆ ಪ್ರತಿಯೊಬ್ಬರ ಜೊತೆ ಹೆಜ್ಜೆ ಹಾಕಿದ್ದನ್ನು ಯಾವಾಗಲೂ ನೆನಪು ಮಾಡಿಕೊಳ್ಳುವುದಾಗಿ ಹರ್ಭಜನ್ ಸಿಂಗ್ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. 

ವಿಶ್ವಕಪ್ ಗೆದ್ದ ಬಳಿಕ ಮೊದಲ ಬಾರಿಗೆ ಎಲ್ಲರ ಎದುರು ಕಣ್ಣೀರು ಹಾಕಿದ್ದಾಗಿ ಹೇಳಿದ ಹರ್ಭಜನ್ ಸಿಂಗ್, ವಿಶ್ವಕಪ್ ಎತ್ತಿ ಹಿಡಿದದ್ದು ನಿಜವಾಗಿಯೂ ವಿಶೇಷವಾಗಿತ್ತು. ಆ ಕ್ಷಣದ ಭಾವನೆಗಳು ಹೇಳಿಕೊಳ್ಳಲಾರದಷ್ಟು ವಿಪರೀತು ವಾಗಿತ್ತು ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.

SCROLL FOR NEXT