ಕ್ರಿಕೆಟ್

ಐಸಿಸಿ ಆಯೋಜಿಸುವ ಟೂರ್ನಿಗಳಲ್ಲಿ ಮಾತ್ರ ಕಾಮೆಂಟೇಟರ್‌ ಆಗುವ ಆಸೆಯಿದೆ: ಯುವರಾಜ್‌ ಸಿಂಗ್‌

Vishwanath S

ನವದೆಹಲಿ: ಕಳೆದ ವರ್ಷ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಟೀಂ ಇಂಡಿಯಾದ ಮಾಜಿ ಆಲ್‌ರೌಂಡರ್‌ ಯುವರಾಜ್‌ ಸಿಂಗ್‌, ಇದೀಗ ಕ್ರಿಕೆಟ್‌ ಕಾಮೆಂಟರಿ ಮಾಡುವುದರಲ್ಲಿ ತಮಗೆ ಆಸಕ್ತಿ ಇಲ್ಲದೇ ಇದ್ದರೂ ಐಸಿಸಿ ಟೂರ್ನಿಗಳಲ್ಲಿ ವೀಕ್ಷಕ ವಿವರಣೆ ಒದಗಿಸುವ ಆಸೆಯಿದೆ ಎಂದು ಹೇಳಿಕೊಂಡಿದ್ದಾರೆ.

ಟೀಂ ಇಂಡಿಯಾದ ಮಾಜಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಮೊಹಮ್ಮದ್‌ ಕೈಫ್‌ ಅವರೊಟ್ಟಿಗೆ ಇನ್‌ಸ್ಟಾಗ್ರಾಮ್‌ ಲೈವ್‌ ವಿಡಿಯೋದಲ್ಲಿ ಮಾತನಾಡಿದ ಯುವಿ ಕ್ರಿಕೆಟ್‌ ಕಾಮೆಂಟರಿ ನೀಡುವುದರಲ್ಲಿ ತಮಗೆ ಅಷ್ಟು ಆಸಕ್ತಿ ಇಲ್ಲವೆಂದೇ ಹೇಳಿದ್ದಾರೆ. ನಿವೃತ್ತಿ ನಂತರ ಕ್ರಿಕೆಟ್‌ ಕಾಮೆಂಟೇಟರ್ ವೃತ್ತಿ ಆಯ್ಕೆ ಮಾಡಿಕೊಂಡಿರುವ ಮೊಹಮ್ಮದ್‌ ಕೈಫ್‌, ತಮ್ಮೊಟ್ಟೊಗೆ ಯುವಿ ಸೇರಿಕೊಳ್ಳುವುದು ಯಾವಾಗ? ಎಂದು ಕೇಳಿದ ಪ್ರಶ್ನೆಗೆ ಸ್ಫೋಟಕ ಎಡಗೈ ಬ್ಯಾಟ್ಸ್‌ಮನ್‌ ಈ ರೀತಿ ಉತ್ತರಿಸಿದ್ದಾರೆ.

2007ರ ವಿಶ್ವ ಟಿ20 ಮತ್ತು 2011ರ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಸ್ಫೋಟಕ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಅವರು ಸದ್ಯ ನಿವೃತ್ತಿ ಘೋಷಿಸಿದ್ದಾರೆ.

SCROLL FOR NEXT