ಕ್ರಿಕೆಟ್

'ನನ್ನನ್ನು ಬದಿಗಿರಿಸಿ ಸಿಎಸ್ ಕೆ ತಂಡಕ್ಕೆ ಧೋನಿ ಆಯ್ಕೆ ಹೃದಯಕ್ಕೆ ಇರಿದಂತಾಯಿತು'

Srinivas Rao BV

ಐಪಿಎಲ್ ನ ಪ್ರಥಮ ಆವೃತ್ತಿಯ ಹರಾಜು ಪ್ರಕ್ರಿಯೆ ಬಗ್ಗೆ ಭಾರತದ ವಿಕೆಟ್ ಕೀಪರ್- ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ಮಾತನಾಡಿದ್ದು, ಅಂದು ತಮಗಾಗಿದ್ದ ನೋವಿನ ಬಗ್ಗೆ ಹೇಳಿದ್ದಾರೆ. 

ಕ್ರಿಕ್ ಬಝ್ ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ದಿನೇಶ್ ಕಾರ್ತಿಕ್, ನಾನು ತಮಿಳುನಾಡಿನವನಾಗಿದ್ದರಿಂದ  ಐಪಿಎಲ್ ನ ಪ್ರಥಮ ಆವೃತ್ತಿಯ ಹರಾಜು ಪ್ರಕ್ರಿಯೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನನ್ನನ್ನು ಆಯ್ಕೆ ಮಾಡಲಿದೆ ಎಂದು ಭಾವಿಸಿದ್ದೆ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ನನ್ನನ್ನು ಆಯ್ಕೆ ಮಾಡುವ ಬದಲು ಎಂಎಸ್ ಧೋನಿಯನ್ನು ಧಾಖಲೆಯ ಬೆಲೆಗೆ ಖರೀದಿ ಮಾಡಿತು. ಆ ಕ್ಷಣದಲ್ಲಿ ಹೃದಯಕ್ಕೆ ಇರಿದಂತಾಗಿತ್ತು ಎಂದು ಹೇಳಿದ್ದಾರೆ. 

2008, ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ನಾನು ಭಾಗಿಯಾಗಿದ್ದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ನನ್ನನ್ನು ಆಯ್ಕೆ ಮಾಡುವುದರ ಬಗ್ಗೆ ಅಪಾರ ವಿಶ್ವಾಸ ಹೊಂದಿದ್ದೆ. ನನ್ನನ್ನು ನಾಯಕನನ್ನಾಗಿ ಮಾಡುತ್ತಾರೋ ಇಲ್ಲವೋ ಅದು ಪ್ರಶ್ನೆಯಾಗಿರಲಿಲ್ಲ. ಆದರೆ ಮೊದಲ ಆಟಗಾರನನ್ನಾಗಿ ಎಂಎಸ್ ಧೋನಿಯನ್ನು ಚೆನ್ನೈ ತಂಡ 1.5 ಮಿಲಿಯನ್ ಗೆ ಖರೀದಿಸಿತ್ತು. ಧೋನಿ ನನ್ನ ಜೊತೆಯಲ್ಲೇ ಕುಳಿತಿದ್ದರು. ಆದರೆ ಅವರು ತಮ್ಮನ್ನು ಚೆನ್ನೈ ತಂಡಕ್ಕೆ ಆಯ್ಕೆ ಮಾಡುವ ವಿಷಯವನ್ನು ಹಂಚಿಕೊಂಡಿರಲಿಲ್ಲ. ಬಹುಶಃ ಅವರಿಗೂ ಗೊತ್ತಿರಲಿಲ್ಲ ಎಂದೆನಿಸುತ್ತದೆ. ಆದರೆ ಆ ಘಟನೆ ಮಾತ್ರ ನನಗೆ ಹೃದಯಕ್ಕೆ ಇರಿದಂತೆಯೇ ಆಯಿತು ಎಂದು ಕಾರ್ತಿಕ್ ಹೇಳಿದ್ದಾರೆ. 

ಆ ದಿನದಿಂದ ಈ ವರೆಗೂ 13 ವರ್ಷಗಳ ನಂತರವೂ ನಾನು ಸಿಎಸ್ ಕೆ ಸೇರಲು ಎದುರುನೋಡುತ್ತಿದ್ದೇನೆ ಎನ್ನುತ್ತಾರೆ ಕಾರ್ತಿಕ್. ಐಪಿಎಲ್ ನಲ್ಲಿ ದಿನೇಶ್ ಕಾರ್ತಿಕ್, ದೆಹಲಿ ಕ್ಯಾಪಿಟಲ್ಸ್, ಕಿಂಗ್ಸ್ XI ಪಂಜಾಬ್, ಮುಂಬೈ ಇಂಡಿಯನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿದ್ದು, ಕಳೆದ ಬಾರಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಪ್ಲೇ ಆಫ್ ಗೆ ತಲುಪುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. 
 

SCROLL FOR NEXT