ಕ್ರಿಕೆಟ್

ಕೋವಿಡ್-19: 2016 ರ ಮರೆಯಲಾಗದ ಕ್ರಿಕೆಟ್ ಕಿಟ್ ಹರಾಜಿಗೆ ಇಟ್ಟ ಎಬಿಡಿ ವಿಲ್ಲರ್ಸ್, ವಿರಾಟ್ ಕೊಹ್ಲಿ! 

Srinivas Rao BV

ಕೋವಿಡ್-19 ವಿರುದ್ಧ ಹೋರಾಟಕ್ಕೆ ಸೆಲಬ್ರಿಟಿಗಳು ನೆರವಾಗುತ್ತಿದ್ದಾರೆ. ಈ ಸಾಲಿಗೆ ವಿರಾಟ್ ಕೊಹ್ಲಿ, ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಎಬಿಡಿ ವಿಲ್ಲರ್ಸ್ ಸಹ ಸೇರ್ಪಡೆಯಾಗಿದ್ದಾರೆ. 

ಇದರಲ್ಲಿ ವಿಶೇಷವೇನೆಂದರೆ ಇಬ್ಬರೂ ಆಟಗಾರರು ತಮ್ಮ ಅಚ್ಚಳಿಯದ ನೆನಪುಗಳನ್ನು ಹೊಂದಿರುವ ಮರೆಯಲಾಗದ ಕ್ರಿಕೆಟ್ ಕಿಟ್  ಗಳನ್ನು ಕೋವಿಡ್-19 ಹಿನ್ನೆಲೆಯಲ್ಲಿ ನೆರವು ನೀಡಲು ಹರಾಜಿಗೆ ಇಟ್ಟಿದ್ದಾರೆ. 2016 ರ ಐಪಿಎಲ್ ಆವೃತ್ತಿಯಲ್ಲಿ ಗುಜರಾತ್ ಲಯನ್ಸ್ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿಯ ವಿರಾಟ್ ಕೊಹ್ಲಿ ಹಾಗೂ ಎಬಿಡಿ ವಿಲ್ಲರ್ಸ್ ಈಗ ಹರಾಜಿಗೆ ಇಟ್ಟಿರುವ ಕ್ರಿಕೆಟ್ ಕಿಟ್ ಗಳನ್ನು ಬಳಸಿದ್ದರು. 

ಮರೆಯಲಾಗದ, ಹಲವು ನೆನಪುಗಳನ್ನು ಹೊಂದಿರುವ ತಮ್ಮ ಕ್ರಿಕೆಟ್ ಕಿಟ್ ಗಳನ್ನು ಹರಾಜಿಗಿಡುವ ನಿರ್ಧಾರವನ್ನು ಎಬಿಡಿ ವಿಲ್ಲರ್ಸ್ ಇನ್ಸ್ಟಾಗ್ರಾಮ್ ನಲ್ಲಿ ಪ್ರಕಟಿಸಿದ್ದಾರೆ. ಇದರಿಂದ ಬರುವ ಆದಾಯವನ್ನು ದಕ್ಷಿಣ ಆಫ್ರಿಕಾ ಹಾಗೂ ಭಾರತಕ್ಕೆ ಆರ್ಥಿಕ ನೆರವು ನೀಡುವುದಕ್ಕೆ ಬಳಕೆ ಮಾಡಲಾಗುತ್ತದೆ. 

ವಿರಾಟ್ ಕೊಹ್ಲಿಯ ಬ್ಯಾಟ್ ಹಾಗೂ ಗ್ಲೋವ್ಸ್, ನನ್ನ ಶರ್ಟ್ ಹಾಗೂ ಬ್ಯಾಟ್ ಗಳನ್ನು ಹರಾಜಿಗೆ ಇಡಲಾಗುತ್ತಿದೆ. ಆನ್ ಲೈನ್ ವೇದಿಕೆಯಲ್ಲಿ(ವಿವರಗಳು ಇನ್ಸ್ಟಾಗ್ರಾಮ್ ನಲ್ಲಿ ಲಭ್ಯ) ಹರಾಜು ಪ್ರಕ್ರಿಯೆ ನಡೆಯಲಿದೆ ಇದರಿಂದ ಬರುವ ಆದಾಯವನ್ನು ಕೋವಿಡ್-19 ವಿರುದ್ಧದ ಹೋರಾಟಕ್ಕೆ ಭಾರತ-ದಕ್ಷಿಣ ಆಫ್ರಿಕಾ ದೇಶಗಳು ಸಮಾನವಾಗಿ ಪಡೆಯಲಿವೆ ಎಂದು ವಿಲ್ಲರ್ಸ್ ತಿಳಿಸಿದ್ದಾರೆ. ಹರಾಜು ಪ್ರಕ್ರಿಯೆ ಮುಕ್ತಾಯಗೊಂಡ ಬಳಿಕ ಮೇ.10, 2020 ರಂದು ವಿಜೇತರನ್ನು ನಾನು ಸ್ವತಃ ಸಂಪರ್ಕಿಸಿ, ಪ್ಯಾಕೇಜ್ ನ್ನು ಮನೆಗೆ ತಲುಪಿಸುವ ವ್ಯವಸ್ಥೆ ಮಾಡುವೆ ಎಂದು ವಿಲ್ಲರ್ಸ್ ಹೇಳಿದ್ದಾರೆ. 

SCROLL FOR NEXT