ಕ್ರಿಕೆಟ್

ಸಿಎಸ್ ಕೆ ತಂಡದ ಪರ ಆಡುವ 11ರ ಬಳಗದಿಂದ ನನ್ನನ್ನು ತೆಗೆದಿದ್ದು ಕೆನ್ನೆಗೆ ಬಾರಿಸಿದಂತಿತ್ತು: ಆರ್ ಅಶ್ವಿನ್

Vishwanath S

ನವದೆಹಲಿ: ಐಪಿಎಲ್‌ನಲ್ಲಿನ ಎರಡು ಕೆಟ್ಟ ಆಟಗಳು ಟೀಂ ಇಂಡಿಯಾದ ಹಿರಿಯ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಟಿ20 ಗಳಲ್ಲಿ ಬೌಲಿಂಗ್ ಮಾಡುವುದು ಅಂದುಕೊಂಡಷ್ಟು ಸುಲಭವಲ್ಲ ಎಂದು ಅರಿತುಕೊಳ್ಳಲು ಕಾರಣವಾಯಿತು. ವಾಸ್ತವದಲ್ಲಿ ಅದು ನನ್ನು ಕಪಾಳಕ್ಕೆ ಬಾರಿಸಿದಂತಿತ್ತು ಎಂದು ಹೇಳಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್‌ನೊಂದಿಗಿನ 2010ರ ಐಪಿಎಲ್ ತನ್ನ ಮೇಲೆ ಹೇಗೆ ಪ್ರಭಾವ ಬೀರಿತು ಎಂದು ಅಶ್ವಿನ್ ಹೇಳಿದ್ದಾರೆ. ನಂರ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನ ಪ್ರತಿಕೂಲ ಪರಿಸ್ಥಿತಿಗಳಲ್ಲಿ ಬೌಲಿಂಗ್ ಮಾಡುವುದು ಸವಾಲಾಗಿತ್ತು. ಇನ್ನು ಟೀಂ ಇಂಡಿಯಾದ ಸ್ಪಿನ್ನರ್ ರವೀಂದ್ರ ಜಡೇಜಾ ಅವರು ನೈಸರ್ಗಿಕ ಕ್ರೀಡಾಪಟು ಎಂದು ಹೇಳಿದ್ದಾರೆ. 

2010ರ ಐಪಿಎಲ್ ವೇಳೆ ಎರಡು ಪಂದ್ಯಗಳಲ್ಲಿ ಕೆಟ್ಟ ಪ್ರದರ್ಶನ ನೀಡಿದ್ದರಿಂದ ನನ್ನನ್ನು ಸಿಎಸ್ ಕೆ ಆಡುವ ಹನ್ನೊಂದರ ಬಳಗದಿಂದ ತೆಗೆದುಹಾಕಲಾಗಿತ್ತು. ಇದು ನನ್ನ ಕಪಾಳಕ್ಕೆ ಬಾರಿಸಿದಂತಿತ್ತು. ಏಕೆಂದರೆ ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರೊಂದಿಗೆ ಮಾತನಾಡಲಿಲ್ಲ ಮತ್ತು ಅವರು ಸಾಕಷ್ಟು ಬೆಂಬಲ ಹೊಂದಿಲ್ಲ ಎಂದು ಭಾವಿಸಿದ್ದೆ ಎಂದರು. 

ಅದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧದ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ನಾನು 14, 16, 18 ಮತ್ತು 20ನೇ ಓವರ್ ಬೌಲಿಂಗ್ ಮಾಡಿದ್ದೆ. ಅಂದು ರಾಬಿನ್ ಉತ್ತಪ್ಪ ಮತ್ತು ಮಾರ್ಕ್ ಬೌಷರ್ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಪರಿಣಾಮ ನಾನು ವಿಕೆಟ್ ಪಡೆಯುವಲ್ಲಿ ವಿಫಲನಾಗಿದ್ದೆ. ಅಲ್ಲದೆ 40 ಅಥವಾ 45 ರನ್ ಗಳನ್ನು ನೀಡಿದ್ದೆ. 

ಇದು ನಾವು ಪಂದ್ಯವನ್ನು ಸೋಲುವಂತಾಯಿತು. ನಂತರ ನನ್ನನ್ನು ಆಡುವ ಹನ್ನೊಂದರ ಬಳಗದಿಂದ ಕಿತ್ತು ಹಾಕಿದ್ದರು ಎಂದು ಅಶ್ವಿನ್ ಹಳೆಯ ಕಹಿ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. 

SCROLL FOR NEXT