ಕ್ರಿಕೆಟ್

ದಾಖಲೆಯ ಶತಕಕ್ಕಾಗಿ ಪಾಕಿಸ್ತಾನದ ಶಾಹಿದ್ ಅಫ್ರಿದಿ ಬಳಸಿದ್ದು ಸಚಿನ್ ಬ್ಯಾಟ್ ಅನ್ನು!

Srinivasamurthy VN

ಇಸ್ಲಾಮಾಬಾದ್: ಕೇವಲ 37 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದ ಪಾಕಿಸ್ತಾನದ ಸ್ಫೋಟಕ ಬ್ಯಾಟ್ಸ್ ಮನ್ ಶಾಹಿದ್ ಅಫ್ರಿದಿ ಅಂದಿನ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಬ್ಯಾಟ್ ಬಳಕೆ ಮಾಡಿದ್ದ ವಿಚಾರ ಇದೀಗ ಬಯಲಾಗಿದೆ.

1996ರಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಅಫ್ರಿದಿ ಕೇವಲ 37 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದರು. ಇದು ಕ್ರಿಕೆಟ್ ಜಗತ್ತಿನ ವೇಗದ ಶತಕವಾಗಿತ್ತು. ಅಲ್ಲದೆ ಕ್ರಿಕೆಟ್ ಜಗತ್ತಿನಲ್ಲಿ ಹಲವು ದಾಖಲೆಗಳನ್ನು ನಿರ್ಮಾಣ ಮಾಡಿತ್ತು. ಅಂದು ಅಫ್ರಿದಿ ಆ ಶತಕ ಬಾರಿಸಲು ಭಾರತದ ಕ್ರಿಕೆಟ್ ದಂತಕತೆ  ಸಚಿನ್ ತೆಂಡೂಲ್ಕರ್ ಅವರ ಬ್ಯಾಟ್ ಬಳಸಿದ್ದರಂತೆ. 

ಈ ಬಗ್ಗೆ ಪಾಕಿಸ್ತಾನ ಮಾಜಿ ಆಟಗಾರ ಅಜರ್ ಮಹಮೂದ್ ಮಾಹಿತಿ ನೀಡಿದ್ದು, ವಿಸ್ಡೆನ್‌ ಗ್ರೇಟೆಸ್ಟ್ ರೈವಲರಿ ಪಾಡ್‌ಕ್ಯಾಸ್ಟ್ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಪಾಕ್ ತಂಡದ ಮುಷ್ತಾಕ್ ಅಹ್ಮದ್ ಗಾಯಗೊಂಡಿದ್ದರಿಂದ ನಾಲ್ಕು ತಂಡಗಳ (ಶ್ರೀಲಂಕಾ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಮತ್ತು ಕೀನ್ಯಾ) ನಡುವಿನ  ಸರಣಿಗಾಗಿ ಅಫ್ರಿದಿ ಆಯ್ಕೆಯಾಗಿದ್ದರು. ನಾನು ಮತ್ತು ಅಫ್ರಿದಿ ಇಬ್ಬರೂ 1996ರಲ್ಲಿ ನೈರೋಬಿಯಲ್ಲಿ ನಡೆದ ಸಹರಾ ಕಪ್ ಟೂರ್ನಿಯಲ್ಲಿ ಪದಾರ್ಪಣೆ ಮಾಡಿದ್ದರು. ಅದು ಟೂರ್ನಿಯ ಆರನೇ ಪಂದ್ಯವಾಗಿತ್ತು. ತಮ್ಮ ಎರಡನೇ ಪಂದ್ಯದಲ್ಲೇ ಅಫ್ರಿದಿ ಕೇವಲ 40 ಎಸೆತಗಲ್ಲಿ 102 ರನ್ ಸಿಡಿಸಿದ್ದರು. ಈ ಪೈಕಿ ಅಫ್ರಿದಿ  ಕೇವಲ 37 ಎಸೆತಗಳಲ್ಲಿ ಶತಕ ಸಿಡಿಸಿದ್ದರು. 

ಆದರೆ ಅಂದು ಅಫ್ರಿದಿ ಭಾರತದ ಸಚಿನ್ ತೆಂಡೂಲ್ಕರ್ ಅವರ ಬ್ಯಾಟ್ ಬಳಕೆ ಮಾಡಿದ್ದರು. ಕ್ರೀಡಾ ಉಪಕರಣಗಳನ್ನು ತಯಾರಿಸುವ ಪಾಕಿಸ್ತಾನದ ಖ್ಯಾತ ಸಂಸ್ಥೆ ಸಿಯಾಲ್‌ಕೋಟ್‌ಗೆ ಬ್ಯಾಟ್ ತೆಗೆದುಕೊಂಡು ಹೋಗುವಂತೆ ತೆಂಡೂಲ್ಕರ್ ತನ್ನ ನೆಚ್ಚಿನ ಬ್ಯಾಟನ್ನು ವಾಕರ್ ಯೂನಿಸ್‌ಗೆ ನೀಡಿದ್ದರು. ಬ್ಯಾಟನ್ನು  ಸಿಯಾಲ್‌ಕೊಟ್‌ಗೆ ತೆಗೆದುಕೊಂಡು ಹೋಗುವ ಮುನ್ನ ವಾಕರ್ ಆ ಬ್ಯಾಟ್ ಅನ್ನು ನನಗೆ ನೀಡಿದ್ದರು. ಅದೇ ಬ್ಯಾಟ್ ನಿಂದ ಕಣಕ್ಕಿಳಿದಿದ್ದ ಅಫ್ರಿದಿ ಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದರು ಎಂದು ಮಹಮೂದ್ ಹೇಳಿದ್ದಾರೆ. ಇನ್ನು ಇದೇ ವಿಚಾರವನ್ನು ಅಫ್ರಿದಿ ಕೂಡ ತಮ್ಮ ಜೀವನ ಚರಿತ್ರೆ ಗೇಮ್ ಚೆಂಜರ್ ನಲ್ಲಿಯೂ  ಹೇಳಿಕೊಂಡಿದ್ದಾರೆ. 

ಕೀನ್ಯಾದ ನೈರೋಬಿಯ ಜಿಮ್ಕಾನ ಕ್ಲಬ್ ಗ್ರೌಂಡ್‌ನಲ್ಲಿ 1996ರಲ್ಲಿ ನಡೆದಿದ್ದ ಕೀನ್ಯಾ, ದಕ್ಷಿಣ ಆಫ್ರಿಕಾ, ಪಾಕಿಸ್ತಾನ ಮತ್ತು ಶ್ರೀಲಂಕಾ ನಾಲ್ಕು ತಂಡಗಳ ಟೂರ್ನಿಯ ಪಾಕ್-ಲಂಕಾ ಮುಖಾಮುಖಿಯಲ್ಲಿ ಅಫ್ರಿದಿ 37 ಎಸೆತಗಳಿಗೆ ಶತಕ ಬಾರಿಸಿದ್ದರು. ಈ ಪಂದ್ಯದಲ್ಲಿ ಪಾಕಿಸ್ತಾನ ತಂಡ 82 ರನ್‌ಗಳ ಭರ್ಜರಿ  ಗೆಲುವನ್ನಾಚರಿಸಿತ್ತು.  ಈ ದಾಖಲೆಯನ್ನು 2014ರಲ್ಲಿ ಕೋರಿ ಆ್ಯಂಡರ್ಸೆನ್ 36 ಎಸೆತಗಳಲ್ಲಿ ಶತಕ ಸಿಡಿಸಿ ಮುರಿದ್ದರು. ಬಳಿಕ 2015ರಲ್ಲಿ ಆಫ್ರಿಕಾದ ಎಬಿಡಿ ವಿಲಿಯರ್ಸ್ ಕೇವಲ 31 ಎಸೆತಗಳಲ್ಲಿ ಶತಕ ಸಿಡಿಸಿ ಧಾಖಲೆಯನ್ನು ಹಿಂದಿಕ್ಕಿದರು. 

SCROLL FOR NEXT