ಕ್ರಿಕೆಟ್

ಮಹಿಳಾ ಐಪಿಎಲ್ ನಲ್ಲಿ ಆಡುವುದನ್ನು ಎದುರು ನೋಡುತ್ತಿದ್ದೇನೆ: ಸ್ಮೃತಿ ಮಂಧನ

Nagaraja AB

ನವದೆಹಲಿ: ಮಹಿಳಾ ಐಪಿಎಲ್ ಟೂರ್ನಿ ಆಯೋಜನೆಯನ್ನು ಮಹಿಳಾ ಟೀಂ ಇಂಡಿಯಾ ಆಟಗಾರ್ತಿ ಸ್ಮೃತಿ ಮಂದಣ್ಣ ಸ್ವಾಗತಿಸಿದ್ದು, ಮಹಿಳಾ ಟಿ-20 ಟೂರ್ನಮೆಂಟ್ ನಲ್ಲಿ ಆಡಲು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ.

ಯುಎಇನಲ್ಲಿ ಮಹಿಳಾ ಐಪಿಎಲ್ ಟೂರ್ನಿ ನಡೆಸಲಾಗುವುದು ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸ್ಪಷ್ಟಪಡಿಸಿದ ಬೆನ್ನಲ್ಲೇ  ಸ್ಮೃತಿ ಮಂದಣ್ಣ ಈ ರೀತಿಯ ಹೇಳಿಕೆ ನೀಡಿದ್ದಾರೆ. ಸ್ವಾಗತಾರ್ಹವಾದ ಬೆಳವಣಿಗೆ, ಮಹಿಳಾ ಐಪಿಎಲ್ ನಲ್ಲಿ ಆಡುವುದಕ್ಕೆ ಎದುರು ನೋಡುತ್ತಿರುವುದಾಗಿ ಅವರು ಟ್ವೀಟ್ ಮಾಡಿದ್ದಾರೆ.

ಯುಎಇನಲ್ಲಿ ಐಪಿಎಲ್ ಫ್ಲೇ ಆಫ್ ಸಂದರ್ಭದಲ್ಲಿ ಮೂರು ತಂಡಗಳನ್ನೊಳಗೊಂಡ ಮಹಿಳಾ ಟಿ-20 ಟೂರ್ನಮೆಂಟ್ ನಡೆಸಲಾಗುವುದು ಎಂದು ಬಿಸಿಸಿಐ ಭಾನುವಾರ ಸ್ಪಷ್ಟಪಡಿಸಿತ್ತು. ಈ ನಿರ್ಧಾರವನ್ನು ಮಿಥಾಲಿ ರಾಜ್, ಜೂಲನ್ ಗೋಸ್ವಾಮಿ, ಪೂನಾಮ್ ಯಾದವ್, ವೇದಕೃಷ್ಣಮೂರ್ತಿ ಸೇರಿದಂತೆ ಹಲವು ಟೀ ಇಂಡಿಯಾ ಸ್ಟಾರ್ ಗಳು ಸ್ವಾಗತಿಸಿದ್ದಾರೆ.

ಆದಾಗ್ಯೂ, ಮಹಿಳಾ ಐಪಿಎಲ್ ಬಗ್ಗೆ ಆಸ್ಟ್ರೇಲಿಯಾದ ಆಟಗಾರ್ತಿಯರಾದ ಅಲಿಸಾ ಹೀಲಿ ಮತ್ತು  ರಾಚೆಲ್ ಹೇನ್ಸ್  ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ 17ರಿಂದ ನವೆಂಬರ್ 29ರವರೆಗೂ ನಡೆಯಲಿರುವ ಮಹಿಳಾ ಬಿಗ್ ಬಾಸ್ ಲೀಗ್ ಜೊತೆಗಿನ ವೇಳಾಪಟ್ಟಿ ಸಂಘರ್ಘ ಇದಕ್ಕೆ ಕಾರಣವಾಗಿದೆ.

SCROLL FOR NEXT