ಕ್ರಿಕೆಟ್

'ಜೂನಿಯರ್ ಸ್ಟೇಯ್ನ್' ಖ್ಯಾತಿಯ ಯುವ ಕ್ರಿಕೆಟಿಗ ಕರಣ್ ತಿವಾರಿ ನೇಣಿಗೆ ಶರಣು

Raghavendra Adiga

ಮುಂಬೈ: ದಕ್ಷಿಣ ಆಫ್ರಿಕಾದ ವೇಗದ ಬೌಲರ್‌ ಡೇಲ್‌ ಸ್ಟೇಯ್ನ್‌ ಅವರ ಶೈಲಿಯಲ್ಲೇ ಬೌಲಿಂಗ್‌ ಮಾಡುವ ಮೂಲಕ ಮುಂಬೈನ ಕ್ಲಬ್‌ ಮಟ್ಟದ ಟೂರ್ನಿಗಳಲ್ಲಿ 'ಜೂನಿಯರ್‌ ಸ್ಟೇಯ್ನ್‌' ಎಂದೇ ಖ್ಯಾತಿ ಪಡೆದಿದ್ದ ಯುವ ಪ್ರತಿಭೆ ಕರಣ್‌ ತಿವಾರಿ, ಐಪಿಎಲ್‌ನಲ್ಲಿ ಅವಕಾಶ ಸಿಗದೇ ಇರುವ ಕಾರಣ ನೇಣಿಗೆ ಶರಣಾಗಿದ್ದಾರೆ.

ಅವರ ನಿವಾಸದಲ್ಲಿ ಕುತ್ತಿಗೆಗೆ ನೇಣು ಬಿಗಿದಿದ್ದ ಸ್ಥಿತಿಯಲ್ಲಿ ಸೋಮವಾರ ರಾತ್ರಿ ಶವ ಪತ್ತೆಯಾಗಿದೆ. ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ 13ನೇ ಆವೃತ್ತಿಯಲ್ಲಿ ಆಡುವ ಅವಕಾಶ ಸಿಗದೇ ಇರುವ ಕಾರಣಕ್ಕೆ ಕರಣ್‌ ಬಹಳ ಖಿನ್ನತೆಗೆ ಒಳಗಾಗಿದ್ದರು ಎಂದು ಮೃತನ ಆಪ್ತ ಸ್ನೇಹಿತ ಪೊಲೀಸರಿಗೆ ತಿಳಿಸಿದ್ದಾನೆ.

27 ವರ್ಷದ ಕ್ರಿಕೆಟಿಗ ಕೋಣೆಯಲ್ಲಿ ಬಹುಕಾಲ ಲಕ್ ಆಗಿದ್ದರಿಂದ ಕುಟುಂಬಸ್ಥರಿಗೆ ಅನುಮಾನ ಬಂದಿದೆ. ಅದಾಗ್ಯೂ ಆಗವರು ಆತನ  ಕೋಣೆ ತೆರೆಯಲು ಕೇಳಿದ್ದಾರೆ.

ಘಟನಾ ನಂತರ  ಮುಂಬೈ ಪೊಲೀಸರು ಆಕಸ್ಮಿಕ ಸಾವಿನ ಪ್ರಕರಣ ಎಡಿಆರ್) ದಾಖಲಿಸಿದ್ದಾರೆ. ಕುರಾರ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಬಾಬಾಸಾಹೇಬ್ ಸಾಲುಂಖೆ  "ನಾವು ಎಡಿಆರ್ ನೋಂದಾಯಿಸಿದ್ದೇವೆ ಮತ್ತು ತನಿಖೆ ನಡೆಯುತ್ತಿದೆ" ಎಂದು ಮಾಹಿತಿ ನೀಡಿದ್ದಾರೆ.

“ಕರಣ್ ಉದಯಪುರದಲ್ಲಿರುವ ತನ್ನಆಪ್ತ ಸ್ನೇಹಿತನಿಗೆ ಕರೆಮಾಡಿ ಆತ್ಮಹತ್ಯೆ ಮಾಡಿಕೊಳ್ಳುವ ವಿಚಾರ ಹೇಳಿದ್ದನು, ಐಪಿಎಲ್‌ನಲ್ಲಿ ಆಡಲು ಅವಕಾಶ ಸಿಗದ ಕಾರಣ ಖಿನ್ನತೆಗೆ ಒಳಗಾಗಿದ್ದ ಕರಣ್ ಈ ಕೃತ್ಯ ಎಸಗಿದ್ದಾರೆ. ಕ್ರಿಕೆಟಿಗನ ಸ್ನೇಹಿತ ಆ ವಿಚಾರವನ್ನು ಅವರ ಸೋದರಿಗೆ ಹೇಳಿದ್ದಾರೆ. ಆಗ ಆಕೆ ಅವರ ತಾಯಿಗೆ ವಿಷಯ ತಿಳಿಸಿದ್ದರು. ಆದರೆ ಅಷ್ಟರಲ್ಲೇ ಎಲ್ಲ ಮುಗಿದಿತ್ತು, ಆಸ್ಪತ್ರೆಗೆ ತಲುಪುವ ಮೊದಲು ಕರಣ್ ಸಾವನ್ನಪ್ಪಿದ್ದರು"

ಬಿಸಿಸಿಐ ನಿಯಮಗಳ ಪ್ರಕಾರ, ಒಬ್ಬ ಆಟಗಾರನು ರಾಜ್ಯ ತಂಡವನ್ನು ಪ್ರತಿನಿಧಿಸಿದ್ದರೆ ಮಾತ್ರ ಅವನು ಐಪಿಎಲ್ ಹರಾಜಿಗೆ ಸ್ಪರ್ಧಿಸಲು ಅರ್ಹನಾಗಿರುತ್ತಾನೆ. ಮುಂಬೈ ಇಂಡಿಯನ್ಸ್ ’(ಎಂಐ) ತವರು ಮೈದಾನವಾದ ವಾಂಖೆಡೆ ಸ್ಟೇಡಿಯಂನಲ್ಲಿ ಕರಣ್ ಐಪಿಎಲ್ ತಂಡಗಳಿಗೆ ಬೌಲಿಂಗ್ ಮಾಡುವ ನ್ಯಾಯಯುತ ಅನುಭವವನ್ನು ಹೊಂದಿದ್ದನೆಂದು ವರದಿಯಾಗಿದೆ,  “ಅವರು ರಾಜ್ಯ ತಂಡಕ್ಕೆ ಆಯ್ಕೆಯಾಗಬೇಕೆಂದು ಆಶಿಸುತ್ತಿದ್ದರು. ಅವರಲ್ಲಿ ಕೆಲವರೊಂದಿಗೆ ಮಾತುಕತೆ ನಡೆಸುತ್ತಿದ್ದರು. ಅವರು ಬಹಳ ಭರವಸೆಯ ಕ್ರಿಕೆಟಿಗರಾಗಿದ್ದರು ಮತ್ತು ಅವರ ಕೊನೆಯ ವಾಟ್ಸಾಪ್ ಸ್ಟೇಟಸ್ ನಲ್ಲಿ ಅವರ ಬೌಲಿಂಗ್ ಮತ್ತು ಬ್ಯಾಟಿಂಗ್ ವೀಡಿಯೊಗಳನ್ನು ಅಪ್‌ಲೋಡ್ ಮಾಡಿದ್ದರು. ಅವರು ಇಂತಹ ಕಠಿಣ ನಿರ್ಧಾರ  ಮಾಡಿರುವುದು ಆಘಾತಕಾರಿ. ಕರಣ್ ಅವರಿಗೆ ಕೆಲಸವಿಲ್ಲದ ಕಾರಣ ಉದ್ವಿಗ್ನರಾಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ."

SCROLL FOR NEXT