ಸಿಎಸ್ ಕೆ ತಂಡದ ಆಟಗಾರರು 
ಕ್ರಿಕೆಟ್

ಐಪಿಎಲ್ ಹಿನ್ನೆಲೆ: ತರಬೇತಿ ಶಿಬಿರಕ್ಕಾಗಿ ಚೆನ್ನೈಗೆ ಆಗಮಿಸಿದ ಧೋನಿ, ಮತ್ತಿತರ ಸಿಎಸ್ ಕೆ ಆಟಗಾರರು

 ಯುಎಇನಲ್ಲಿ  ಸೆಪ್ಟೆಂಬರ್ 19ರಿಂದ ನಡೆಯಲಿರುವ ಐಪಿಎಲ್ ಹಿನ್ನೆಲೆಯಲ್ಲಿ ಮಾಜಿ ಟೀಂ ಇಂಡಿಯಾ ನಾಯಕ ಎಂ.ಎಸ್. ಧೋನಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೆಲ ಆಟಗಾರರು ಅಲ್ಪಾವಧಿಯ ತರಬೇತಿ ಶಿಬಿರಕ್ಕಾಗಿ ಶುಕ್ರವಾರ ಚೆನ್ನೈಗೆ ಆಗಮಿಸಿದ್ದಾರೆ.

ಚೆನ್ನೈ: ಯುಎಇನಲ್ಲಿ  ಸೆಪ್ಟೆಂಬರ್ 19ರಿಂದ ನಡೆಯಲಿರುವ ಐಪಿಎಲ್ ಹಿನ್ನೆಲೆಯಲ್ಲಿ ಮಾಜಿ ಟೀಂ ಇಂಡಿಯಾ ನಾಯಕ ಎಂ.ಎಸ್. ಧೋನಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೆಲ ಆಟಗಾರರು ಅಲ್ಪಾವಧಿಯ ತರಬೇತಿ ಶಿಬಿರಕ್ಕಾಗಿ ಶುಕ್ರವಾರ ಚೆನ್ನೈಗೆ ಆಗಮಿಸಿದ್ದಾರೆ.

ಶನಿವಾರದಿಂದ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆರಂಭವಾಗಿರುವ ಒಂದು ವಾರದ ತರಬೇತಿಗಾಗಿ ಧೋನಿ ಹೊರತಾಗಿ  ಸುರೇಶ್ ರೈನಾ, ದೀಪಕ್ ಚಹರ್, ಪಿಯೂಷ್ ಚಾವ್ಲಾ ಮತ್ತು ಕೇದರ್ ಜಾದವ್ ಚೆನ್ನೈ ಗೆ ಬಂದಿಳಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಸೇರಿದಂತೆ 13 ಅಥವಾ 14 ಮಂದಿ ಆಟಗಾರರು ಈ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.ನಾಳೆಯಿಂದ ತರಬೇತಿ ಆರಂಭವಾಗಲಿದೆ ಎಂದು ಸಿಎಸ್ ಕೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಧೋನಿ ಮತ್ತಿತರ ಆಟಗಾರರು ಚೆನ್ನೈಗೆ ಆಗಮಿಸಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಕಳೆದ ವರ್ಷ ಜುಲೈನಲ್ಲಿ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಪಂದ್ಯದಿಂದ ಭಾರತ ನಿರ್ಗಮಿಸಿದ ಬಳಿಕ ಧೋನಿ ಯಾವುದೇ ಪಂದ್ಯ ಆಡಿಲ್ಲ, ಸೆಪ್ಟೆಂಬರ್ 19ರಿಂದ ಆರಂಭವಾಗಲಿರುವ ಐಪಿಎಲ್ ನಲ್ಲಿ ಮತ್ತೆ ಕಮ್ ಬ್ಯಾಂಕ್ ಆಗಿದ್ದು, ಹೆಚ್ಚಿನ ಕುತೂಹಲ ಕೆರಳಿಸಿದೆ.

ಆಲ್ ರೌಂಡರ್ ರವೀಂದ್ರ ಜಡೇಜಾ ಹೊರತುಪಡಿಸಿದಂತೆ ಎಲ್ಲಾ ಆಟಗಾರರು ಶಿಬಿರದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ವೈಯಕ್ತಿಕ ಕಾರಣದಿಂದ ಜಡೇಜಾ ಪಾಲ್ಗೊಳ್ಳುತ್ತಿಲ್ಲ. ಯುಎಇಗೆ ತೆರಳುವ ಮುನ್ನ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಸಿಎಸ್ ಕೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಪ್ರತಿಭಟನೆ ನಮ್ಮ ಸಾಂವಿಧಾನಿಕ ಹಕ್ಕು’: Jantar Mantar ಧರಣಿಗೆ ದಿನಾಂಕ ನಿಗದಿಪಡಿಸಿ; ದೆಹಲಿ ಪೊಲೀಸರಿಗೆ 24 ಗಂಟೆಗಳ ಗಡುವು ಕೊಟ್ಟ Cockroach Janta Party..!

‘Vote chori’ ಹೈಡ್ರಾಮಾ: "ಭೇಟಿ ಸಾಧ್ಯವಿಲ್ಲ, ಏನಿದ್ದರೂ ಕೋರ್ಟ್ ಮೂಲಕವೇ ಬನ್ನಿ; ರಾಹುಲ್ ಗಾಂಧಿ-ಖರ್ಗೆ ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯ ಕಾಂತ್..!

ಹೆಬ್ಬಾಳ ಕಿರು ಸುರಂಗ ಯೋಜನೆ "ಅವೈಜ್ಞಾನಿಕ": 1,350 ಕೋಟಿ ರೂ. ಸಾರ್ವಜನಿಕ ಹಣ ಪೋಲು: ಸಂಸದ ತೇಜಸ್ವಿ ಸೂರ್ಯ ಆಕ್ಷೇಪ

ನಾನೀಗ DCM, ಡಿಕೆ.ಶಿವಕುಮಾರ್ CM, ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ಡಾ. ಜಿ. ಪರಮೇಶ್ವರ್

ಶಕ್ತಿ, ಜ್ಞಾನ, ಸಂಸ್ಕೃತಿ, ಸಮಾನತೆಯ ಸಂಗಮ ಮೈಸೂರು ದಸರಾ: ಸಿಎಂ ಡಿಕೆ ಶಿವಕುಮಾರ್