ಕ್ರಿಕೆಟ್

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಎಂಎಸ್ ಧೋನಿ!

Vishwanath S

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ವಿದಾಯ ಘೋಷಿಸಿದ್ದಾರೆ. 

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುತ್ತಿರುವುದಾಗಿ  ತಮ್ಮ ಇನ್ ಸ್ಟಾಗ್ರಾಮ್  ಖಾತೆಯಲ್ಲಿ  ಪ್ರಕಟಿಸಿದ್ದಾರೆ.  ಇಷ್ಟು ವರ್ಷಗಳ ಕಾಲ  ತಮಗೆ ಬೆಂಬಲ ನೀಡಿದ ಅಭಿಮಾನಿಗಳು, ಕುಟುಂಬ ಸದಸ್ಯರು  ಮತ್ತು ಸ್ನೇಹಿತರಿಗೆ ಧನ್ಯವಾದ ಸಲ್ಲಿಸಿದ್ದಾರೆ. 

ಈ ಹಿಂದೆಯೇ  ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದ ಧೋನಿ ಟಿ -೨೦,  ಏಕದಿನ  ತಂಡಗಳಲ್ಲಿ  ಆಡುತ್ತಿದ್ದರು. ಧೋನಿ ಅವರ ಅನಿರೀಕ್ಷಿತ ನಿರ್ಧಾರ ಇಡೀ ಕ್ರೀಡಾ ಜಗತ್ತನ್ನು ಅಚ್ಚರಿಗೊಳಿಸಿದೆ.

2004ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಎಂಎಸ್ ಧೋನಿ ಪಾದಾರ್ಪಣೆ ಮಾಡಿದ್ದರು. ಧೋನಿ ನೇತೃತ್ವದಲ್ಲಿ ಭಾರತ 2007ರ ಟಿ20 ವಿಶ್ವಕಪ್ ಮತ್ತು 2011ರಲ್ಲಿ ಏಕದಿನ ವಿಶ್ವಕಪ್ ಕಪ್ ಗೆದ್ದು ಬೀಗಿತ್ತು. 

ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿರುವ ಎಂಎಸ್ ಧೋನಿ ಅವರು ಐಪಿಎಲ್ ನಲ್ಲಿ ಮಾತ್ರ ಆಡಲಿದ್ದಾರೆ.

ಎಂಎಸ್ ಧೋನಿ ಅವರು 350 ಏಕದಿನ ಪಂದ್ಯಗಳನ್ನಾಡಿದ್ದು ಪಂದ್ಯವೊಂದರಲ್ಲಿ 183 ರನ್ ಬಾರಿದ್ದಾರೆ. ಇನ್ನು ಮಹತ್ವದ ಐಸಿಸಿ ಟೂರ್ನಿಗಳಾದ ಏಕದಿನ ವಿಶ್ವಕಪ್, ಟಿ20 ವಿಶ್ವಕಪ್ ಮತ್ತು ಚಾಂಪಿಯನ್ ಟ್ರೋಫಿ ಗೆಲ್ಲಿಸಿಕೊಟ್ಟ ಕೀರ್ತಿ ಧೋನಿಯವರದ್ದು.

2017ರಲ್ಲಿ ಧೋನಿ ತಮ್ಮ ನಾಯಕ ಸ್ಥಾನಕ್ಕೆ ವಿದಾಯ ಘೋಷಿಸಿದ್ದರು. ಬಳಿಕ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ ಟೀಂ ಇಂಡಿಯಾ ತಂಡದ ನಾಯಕತ್ವ ವಹಿಸಿಕೊಂಡಿದ್ದರು. 

SCROLL FOR NEXT