ಕ್ರಿಕೆಟ್

ಧೋನಿ ಈಗ ಸೇನೆಯೊಂದಿಗೆ ಹೆಚ್ಚಿನ ಸಮಯ ಕಳೆಯಲಿದ್ದಾರೆ- ಆಪ್ತ ಮಿತ್ರ 

Nagaraja AB

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿರುವ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಈಗ ಸೇನೆಯೊಂದಿಗೆ ಹೆಚ್ಚಿನ ಕಾಲ ಕಳೆಯಲಿದ್ದಾರೆ ಎಂದು ಅವರ ಸ್ನೇಹಿತ ಮತ್ತು ವ್ಯವಹಾರ ಪಾಲುದಾರ ಅರುಣ್ ಪಾಂಡೆ ತಿಳಿಸಿದ್ದು, ನಿವೃತ್ತಿ ನಿರ್ಧಾರದಿಂದ ಬ್ರಾಂಡ್ ಮೌಲ್ಯ ಕಡಿಮೆಯಾಗಲಿದೆ ಎಂಬ ಹೇಳಿಕೆಯನ್ನು ತಳ್ಳಿ ಹಾಕಿದ್ದಾರೆ.

ಸದ್ಯದಲ್ಲಿಯೇ ಧೋನಿ ರಾಜೀನಾಮೆ ನೀಡಲಿದ್ದಾರೆ ಎಂಬುದು ಗೊತಿತ್ತು. ಆದರೆ, ನಿಖರ ದಿನಾಂಕ ಗೊತ್ತಿರಲಿಲ್ಲ. ಅದು ಅವರಿಗೆ ಬಿಟ್ಟ ನಿರ್ಧಾರವಾಗಿದ್ದು, ಐಪಿಎಲ್ ಸಿದ್ಧತೆ ಆರಂಭಿಸಿದ್ದಾರೆ.ಆದರೆ,ಅದು ಮುಂದೆ ಹೋಗಿದ್ದು, ನಂತರ  ಟಿ-20 ವಿಶ್ವಕಪ್ ಕೂಡಾ
ಮುಂದೆ ಹೋಗಿದ್ದು,  ಮುಂದಿನ ಬಗ್ಗೆ ಚಿಂತಿಸಲು ಅವರು ಮಾನಸಿಕವಾಗಿ ಸ್ವತಂತ್ರರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಆಗಸ್ಟ್ 15 ಸೇನೆಗೆ ವಿಶೇಷ ದಿನವಾಗಿದೆ. ಈ ನಿಟ್ಟಿನಲ್ಲಿಯೇ ಅವರು ಯೋಜಿಸಲಿದ್ದಾರೆ. ಟಿ-20 ವಿಶ್ವಕಪ್ ಮುಂಡೂಡಲ್ಪಟ್ಟಿರುವುದು ಇದಕ್ಕೆ ಯೋಜಿಸಲು ಸೂಕ್ತ ಅಂಶವಾಗಿದೆ ಎಂದು ಅವರು ಹೇಳಿದ್ದಾರೆ.

ಸೇನೆಯಲ್ಲಿ  ಲೆಫ್ಟಿನೆಂಟ್ ಕಾಲೊನೆಲ್ ಶ್ರೇಣಿಯ ಗೌರವ ಹೊಂದಿರುವ ಧೋನಿ,2019ರ ವಿಶ್ವಕಪ್ ಸೆಮಿಫೈನಲ್ ನಲ್ಲಿ ಸೋತ ಬಳಿಕ ತಿಂಗಳುಗಳ ಕಾಲ ಪ್ಯಾರಾಚೂಟ್ ರಿಜಿಮೆಂಟ್ ನಲ್ಲಿ ತರಬೇತಿ ಪಡೆದಿದ್ದರು.

ಧೋನಿ ಸೇನೆಯೊಂದಿಗೆ ಹೆಚ್ಚಿನ ಸಮಯ ಕಳೆಯುವುದು ಬಹುತೇಕ ಖಚಿತವಾಗಿದೆ.ಕಮರ್ಷಿಯಲ್ ವ್ಯವಹಾರ ಮತ್ತಿತರ ಬದ್ಧತೆಗಳಿಗೆ ಸಮಯ ನೀಡಲಿದ್ದಾರೆ. ಸದ್ಯದಲ್ಲಿಯೇ ಕುಳಿತು ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಿದ್ದೇವೆ
ಎಂದು ಅವರು ಮಾಹಿತಿ ನೀಡಿದರು.

ನಿವೃತ್ತಿ ನಂತರ ಬ್ರಾಂಡ್ ಮೌಲ್ಯ ಕಡಿಮೆಯಾಗುವುದಿಲ್ಲ ಎಂದಿರುವ ಅರುಣ್ ಪಾಂಡೆ,ಕಳೆದ ವರ್ಷ ವಿಶ್ವಕಪ್ ಸಂದರ್ಭದಿಂದಲೂ 10 ಹೊಸ ಬ್ರಾಂಡ್ ಗಳೊಂದಿಗೆ ಸಹಿ ಮಾಡಲಾಗಿದ್ದು, ಅವುಗಳು ಧೀರ್ಘಕಾಲದವುಗಳಾಗಿವೆ.ಧೋನಿ ಕೇವಲ ಕ್ರಿಕೆಟರ್ ಮಾತ್ರವಲ್ಲ, ಯುವಕರ ಐಕಾನ್ ಆಗಿ ಬ್ರಾಂಡ್ ಮೌಲ್ಯ ಮುಂದುವರೆಯಲಿದೆ ಎಂದು ಹೇಳಿದ್ದಾರೆ.ಮುಂದಿನ ಎರಡು ಅಥವಾ ಮೂರು ಐಪಿಎಲ್ ಆವೃತ್ತಿಗಳಲ್ಲಿ ಧೋನಿ ಆಡಲಿದ್ದಾರೆ ಎಂದು ಪಾಂಡೆ ತಿಳಿಸಿದ್ದಾರೆ.

SCROLL FOR NEXT