ಕ್ರಿಕೆಟ್

ಫೆಬ್ರವರಿ 2021 ರಲ್ಲಿ ಇಂಗ್ಲೆಂಡ್‌ಗೆ ಆತಿಥ್ಯ ವಹಿಸಲು ಬದ್ಧ: ಗಂಗೂಲಿ

Srinivasamurthy VN

ನವದೆಹಲಿ: ಮುಂದಿನ ಪ್ರವಾಸ ಕಾರ್ಯಕ್ರಮವನ್ನು ಪೂರ್ಣಗೊಳಿಸಲು ಮಂಡಳಿ ಬದ್ಧ ಮತ್ತು ಮುಂದಿನ ವರ್ಷ ಫೆಬ್ರವರಿಯಲ್ಲಿ ಇಂಗ್ಲೆಂಡ್‌ಗೆ ಆತಿಥ್ಯ ವಹಿಸಲಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣಾ ಮಂಡಳಿ (ಬಿಸಿಸಿಐ) ಸೌರಭ್ ಗಂಗೂಲಿ ರಾಜ್ಯ ಸಂಘಗಳಿಗೆ ಪತ್ರ ಬರೆದಿದ್ದಾರೆ.

ಈ ವರ್ಷದ ಕೊನೆಯಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಸೇರಿದಂತೆ, ಮುಂದಿನ ಪ್ರವಾಸ ವೇಳಾಪಟ್ಟಿಗೆ ಮಂಡಳಿ ಬದ್ಧವಾಗಿದೆ ಎಂದು ಗಂಗೂಲಿ ಹೇಳಿದ್ದಾರೆ.

"ಹಿರಿಯ ಪುರುಷರ ತಂಡ ಈ ವರ್ಷದ ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ತೆರಳಲಿದೆ ಮತ್ತು ಅಲ್ಲಿಂದ ಹಿಂತಿರುಗಿ ಮುಂದಿನ ವರ್ಷ ಫೆಬ್ರವರಿಯಲ್ಲಿ ಇಂಗ್ಲೆಂಡ್ ವಿರುದ್ಧದ ತವರು ಸರಣಿಯನ್ನು ಆಡಲಿದೆ. ಮಹಿಳಾ ತಂಡದ ಪ್ರವಾಸಕ್ಕಾಗಿ ಚರ್ಚೆಗಳು ನಡೆಯುತ್ತಿವೆ ಮತ್ತು ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳಲಾಗುವುದು” ಎಂದಿದ್ದಾರೆ.

ಭಾರತವು ಮುಂದಿನ ವರ್ಷ ಟಿ -20 ವಿಶ್ವಕಪ್ ಮತ್ತು 2023 ರಲ್ಲಿ ಏಕದಿನ ವಿಶ್ವಕಪ್ ಅನ್ನು ಆಯೋಜಿಸಬೇಕಾಗಿದೆ, ಇದು ಈಗಾಗಲೇ ದೃಢಪಟ್ಟಿದೆ. ಭವಿಷ್ಯದ ಪ್ರವಾಸದ ವೇಳಾಪಟ್ಟಿಯ ಪ್ರಕಾರ, ಭಾರತವು ಈ ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾಕ್ಕೆ ಭೇಟಿ ನೀಡಲಿದ್ದು, ಫೆಬ್ರವರಿ 2021 ರಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಡಿಯಲ್ಲಿ ಇಂಗ್ಲೆಂಡ್‌ಗೆ ಆತಿಥ್ಯ ವಹಿಸಲಿದೆ.

ಪ್ರವಾಸವನ್ನು ವೇಳಾಪಟ್ಟಿಯಂತೆ ಮಾಡಲಾಗುವುದು ಎಂದು ಗಂಗೂಲಿ ಹೇಳಿದರು. ಆದರೆ, ಮಾರ್ಚ್‌ನಲ್ಲಿ ಅಫ್ಘಾನಿಸ್ತಾನದೊಂದಿಗಿನ ಮೂರು ಏಕದಿನ ಸರಣಿಯ ಬಗ್ಗೆ ಇನ್ನು ನಿರ್ಧಾರವಾಗಿಲ್ಲ. ಈ ಸರಣಿಯು ಭವಿಷ್ಯದ ಪ್ರವಾಸ ಕಾರ್ಯಕ್ರಮದ ಭಾಗವಾಗಿದೆ” ಎಂದು ಗಂಗೂಲಿ ತಿಳಿಸಿದ್ದಾರೆ. 

SCROLL FOR NEXT