ಕ್ರಿಕೆಟ್

ನಾಳೆ ಟೀಂ ಇಂಡಿಯಾ-ಆಸ್ಟ್ರೇಲಿಯಾ ನಡುವೆ ಮೊದಲನೇ ಟಿ20 ಪಂದ್ಯ, ಸಂಭಾವ್ಯ ಆಟಗಾರರ ಪಟ್ಟಿ!

Vishwanath S

ಕ್ಯಾನ್ಬೆರಾ: ಆಸ್ಟ್ರೇಲಿಯಾ ಪ್ರವಾಸದ ಓಡಿಐ ಸರಣಿಯಲ್ಲಿ ಸೋಲು ಅನುಭವಿಸಿರುವ ವಿರಾಟ್‌ ಕೊಹ್ಲಿ ನಾಯಕತ್ವ ಭಾರತ ತಂಡ ಶುಕ್ರವಾರ ಮೂರು ಪಂದ್ಯಗಳ ಟಿ20 ಸರಣಿಯ ಮೊದಲನೇ ಹಣಾಹಣಿಯಲ್ಲಿ ಆರೋನ್ ಫಿಂಚ್‌ ಬಳಗವನ್ನು ಎದುರಿಸಲು ಸಜ್ಜಾಗುತ್ತಿದೆ. 

2021ರ ಟಿ20 ವಿಶ್ವಕಪ್‌ ಟೂರ್ನಿ ಸಮೀಪವಾಗುತ್ತಿರುವ ಹಿನ್ನೆಲೆಯಲ್ಲಿ ತಂಡದ ಸಂಯೋಜನೆಯನ್ನು ಇನ್ನಷ್ಟು ಉತ್ತಮ ಪಡಿಸಿಕೊಳ್ಳುವ ಉದ್ದೇಶವನ್ನು ಟೀಮ್‌ ಇಂಡಿಯಾ ಹೊಂದಿದೆ.

ಬುಧವಾರ ಮುಕ್ತಾಯವಾಗಿದ್ದ ಓಡಿಐ ಸರಣಿಯಲ್ಲಿ ಭಾರತ, ಐದು ಬೌಲರ್‌ಗಳಿಂದ ಸಂಯೋಜನೆಯಲ್ಲಿ ಸಮಸ್ಯೆಯನ್ನು ಎದುರಿಸಿತ್ತು. ಆರಂಭಿಕ ಎರಡು ಪಂದ್ಯಗಳಲ್ಲಿ ಬೌಲಿಂಗ್‌ ವೈಫಲ್ಯದಿಂದ ಸೋತಿದ್ದ ಕೊಹ್ಲಿ ಪಡೆ, ಅಂತಿಮ ಪಂದ್ಯದಲ್ಲಿ ತಂಡ ಲಯಕ್ಕೆ ಮರಳಿತು ಹಾಗೂ 13 ರನ್‌ಗಳಿಂದ ಮೊದಲ ಗೆಲುವು ದಾಖಲಿಸಿತು. 

ಮನುಕಾ ಓವಲ್‌ ಅಷ್ಟೊಂದು ದೊಡ್ಡ ಅಂಗಳವಾಗಿರುವುದರಿಂದ ಟಿ20 ಪಂದ್ಯದಲ್ಲಿ ಹೆಚ್ಚು ರನ್‌ಗಳನ್ನು ಗಳಿಸಲು ಸಾಧ್ಯವಾಗುವುದಿಲ್ಲ ಎಂಬುದು ಹಿಂದಿನ ಪಂದ್ಯಗಳಿಂದ ಅರಿವಾಗುತ್ತದೆ. ಪಾಕಿಸ್ತಾನದ ವಿರುದ್ಧ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ 150 ರನ್‌ಗಳ ಗುರಿಯನ್ನು ಮುಟ್ಟಿತ್ತು. ಈ ಪಂದ್ಯದಲ್ಲಿ ಸ್ಟೀವನ್‌ ಸ್ಮಿತ್‌ ಗರಿಷ್ಠ ಮೊತ್ತ ದಾಖಲಿಸಿದ್ದರು. 

ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್‌ ಇಲೆವೆನ್‌:
ಆಸ್ಟ್ರೇಲಿಯಾ: ಆರೋನ್‌ ಫಿಂಚ್‌(ನಾಯಕ), ಡಿ'ಆರ್ಸಿ ಶಾರ್ಟ್, ಸ್ಟೀವ್‌ ಸ್ಮಿತ್‌, ಮಾರ್ನಸ್‌ ಲಾಬುಶೇನ್‌/ ಕ್ಯಾಮೆರಾನ್‌ ಗ್ರೀನ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಅಲೆಕ್ಸ್ ಕೇರಿ(ವಿ.ಕೀ), ಆಷ್ಟನ್‌ ಅಗರ್‌, ಶಾನ್‌ ಅಬಾಟ್‌, ಮಿಚೆಲ್‌ ಸ್ಟಾರ್ಕ್‌. ಡೇನಿಯಲ್ ಸ್ಯಾಮ್ಸ್, ಜಾಶ್‌ ಹೇಜಲ್‌ವುಡ್‌, ಆಡಂ ಝಾಂಪ

ಭಾರತ: 
ಶಿಖರ್‌ ಧವನ್‌, ಕೆ.ಎಲ್‌ ರಾಹುಲ್‌(ವಿ.ಕೀ), ವಿರಾಟ್‌ ಕೊಹ್ಲಿ(ನಾಯಕ), ಮನೀಶ್‌ ಪಾಂಡೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ವಾಷಿಂಗ್ಟನ್‌ ಸುಂದರ್‌, ದೀಪಕ್‌ ಚಹರ್‌/ಟಿ ನಟರಾಜನ್‌, ಮೊಹಮ್ಮದ್‌ ಶಮಿ, ಯುಜ್ವೇಂದ್ರ ಚಹಲ್‌, ಜಸ್‌ಪ್ರಿತ್‌ ಬುಮ್ರಾ

ಪಂದ್ಯದ ವಿವರ
ಭಾರತ vs ಆಸ್ಟ್ರೇಲಿಯಾ
ದಿನಾಂಕ: ಡಿ.4 2020 (ಶುಕ್ರವಾರ)
ಸಮಯ: ಮಧ್ಯಾಹ್ನ 01:40 (ಭಾರತೀಯ ಕಾಲಮಾನ)
ಸ್ಥಳ: ಮನುಕಾ ಓವಲ್‌, ಕ್ಯಾನ್ಬೆರಾ

SCROLL FOR NEXT