ಕ್ರಿಕೆಟ್

ವಿರಾಟ್ ಕೊಹ್ಲಿಗೆ ಮೊದಲ ಬಾರಿಗೆ ಸೆಂಚುರಿ ಮಿಸ್! ವೃತ್ತಿಜೀವನದ ಕಹಿ ನೆನಪು

Lingaraj Badiger

ಅಡಿಲೇಡ್: ರನ್ ಮಷಿನ್ ಎಂದೇ ಖ್ಯಾತಿ ಪಡೆದಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಶತಕವಿಲ್ಲದೆ ಒಂದು ವರ್ಷವನ್ನು ಕೊನೆಗೊಳಿಸಿದರು.

2019ರ ನವೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಡೇ/ನೈಟ್ ಟೆಸ್ಟ್‌ನಲ್ಲಿ ಶತಕ ಬಾರಿಸಿದ ವಿರಾಟ್ ಕೊಹ್ಲಿ, ಅಂದಿನಿಂದ ಇಂದಿನವರೆಗೆ ಏಕದಿನ, ಟಿ 20, ಟೆಸ್ಟ್ ಮತ್ತು ಐಪಿಎಲ್‌ನಲ್ಲಿ ಒಂದೇ ಒಂದು ಬಾರಿ ಶತಕ ಗಳಿಸಿಲ್ಲ. ವಿರಾಟ್ ಕೊಹ್ಲಿ ಹೆಸರಿನಲ್ಲಿ ಶತಕವೇ ದಾಖಲಾಗದ ವರ್ಷವಿದ್ದರೆ ಅದು 2020 ಮಾತ್ರ.

2008ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪ್ರವೇಶಿಸಿದ ವಿರಾಟ್ ಕೊಹ್ಲಿ ಇದುವರೆಗೆ 70 ಶತಕಗಳನ್ನು ಗಳಿಸಿದ್ದಾರೆ. ಐಪಿಎಲ್‌ನಲ್ಲಿ ಕೊಹ್ಲಿ ಐದು ಶತಕಗಳನ್ನು ಗಳಿಸಿದ್ದಾರೆ. ಒಂದು ವರ್ಷದಲ್ಲಿ ಇದೇ ಮೊದಲ ಬಾರಿಗೆ ಅವರು ಯಾವುದೇ ಸ್ವರೂಪದಲ್ಲಿ ಶತಕ ಗಳಿಸಿಲ್ಲ.

ಶನಿವಾರ ಅಡಿಲೇಡ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಅರ್ಧ ಶತಕ ಸಿಡಿಸಿದ್ದ ವಿರಾಟ್ ಕೊಹ್ಲಿ ಶತಕ ವಂಚಿತರಾದರು. ಅಜಿಂಕ್ಯ ರಹಾನೆ ಅವರೊಂದಿಗೆ ಸಮನ್ವಯದ ಕೊರತೆಯಿಂದಾಗಿ ಕೊಹ್ಲಿ ರನ್ ಔಟ್ ಆಗಿದ್ದರು. ಒಟ್ಟಾರೆಯಾಗಿ ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ 36 ರನ್‌ಗಳಿಗೆ ಸೀಮಿತವಾಯಿತು. 90 ರನ್‌ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 21 ಓವರ್ ಗೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡು 93 ರನ್ ಬಾರಿಸಿತು.

SCROLL FOR NEXT