ಕ್ರಿಕೆಟ್

ವಿಸ್ಡನ್ ಸಾರ್ವಕಾಲಿಕ ಏಕದಿನ ತಂಡಕ್ಕೆ ಕಪೀಲ್ ನಾಯಕ, ಸಚಿನ್ ಗಿಲ್ಲ ಸ್ಥಾನ

Vishwanath S

ನವದೆಹಲಿ: ಕ್ರಿಕೆಟ್ ಬೈಬಲ್ ಎಂದು ಕರೆಯಲ್ಪಡುವ ವಿಸ್ಡನ್, ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಸಾರ್ವಕಾಲಿಕ ಅತ್ಯುತ್ತಮ ಶ್ರೇಯಾಂಕವನ್ನು ಆಧರಿಸಿ ಅತ್ಯುತ್ತಮ ಏಕದಿನ ತಂಡವನ್ನು ಆಯ್ಕೆ ಮಾಡಿಕೊಂಡಿದ್ದು, ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಈ ತಂಡದ ನಾಯಕರಾಗಿ ಆಯ್ಕೆಯಾದ ಏಕೈಕ ಭಾರತೀಯ ಆಟಗಾರ.

ಐಸಿಸಿಯ ಸಾರ್ವಕಾಲಿಕ ಶ್ರೇಯಾಂಕಗಳನ್ನು ಆಧರಿಸಿ ವಿಸ್ಡನ್ ಅತ್ಯುತ್ತಮ ಏಕದಿನ ಇಲೆವೆನ್ ಆಯ್ಕೆ ಮಾಡಿದೆ. ಈ ಇಲೆವೆನ್‌ನಲ್ಲಿ ಆಟಗಾರರು ಸಾರ್ವಕಾಲಿಕ ಅತ್ಯುತ್ತಮ ಶ್ರೇಯಾಂಕದ ಆಧಾರದ ಮೇಲೆ ಸ್ಥಾನ ಪಡೆದಿದ್ದಾರೆ. ಈ ಶ್ರೇಯಾಂಕದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಹೆಚ್ಚು ಪಂದ್ಯಗಳನ್ನು ಆಡಿದ, ಹೆಚ್ಚು ರನ್ ಗಳಿಸಿದ ಮತ್ತು ಹೆಚ್ಚು ಶತಕಗಳನ್ನು ಗಳಿಸಿದ ದಂತಕಥೆ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಅವರನ್ನು ಸೇರಿಸಲಾಗಿಲ್ಲ.

ಆದರೆ ಆಡುವ ಇಲೆವೆನ್‌ನಲ್ಲಿರುವ ಏಕೈಕ ಭಾರತೀಯ ಭಾರತದ ಮೊದಲ ವಿಶ್ವಕಪ್ ವಿಜೇತ ನಾಯಕ ಕಪಿಲ್ ಅವರನ್ನು ಈ ತಂಡದ ನಾಯಕರನ್ನಾಗಿ ಮಾಡಲಾಗಿದೆ.

ಕಪಿಲ್ ದೇವ್ 1985ರ ಮಾರ್ಚ್ 22 ರಂದು ಆಲ್ ರೌಂಡರ್ ಶ್ರೇಯಾಂಕದಲ್ಲಿ 631 ರೇಟಿಂಗ್ ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದರು. ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಎರಡು ಬಾರಿ ವಿಶ್ವ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ ಭಾರತ 1983ರಲ್ಲಿ ಕಪಿಲ್ ನಾಯಕತ್ವದಲ್ಲಿ ಮೊದಲ ಬಾರಿಗೆ ವಿಶ್ವಕಪ್ ಗೆದ್ದಿತು.

ವಿಸ್ಡೆನ್‌ರ ಸಾರ್ವಕಾಲಿಕ ಏಕದಿನ ಇಲೆವೆನ್ ತಂಡ
ಕಪಿಲ್ ದೇವ್(ನಾಯಕ), ವಿವಿಯನ್ ರಿಚರ್ಡ್ಸ್, ಡೀನ್ ಜೋನ್ಸ್, ಜಹೀರ್ ಅಬ್ಬಾಸ್, ಗ್ರ್ಯಾಗ್ ಚಾಪೆಲ್, ಡೇವಿಡ್ ಗೇವರ್, ಎಬಿ ಡಿವಿಲಿಯರ್ಸ್, ಸೀನ್ ಪೊಲಾಕ್, ರಿಚರ್ಡ್ ಹ್ಯಾಡ್ಲಿ, ಜೋಯಲ್ ಗಾರ್ನರ್, ಮುತ್ತಯ್ಯ ಮುರಳೀಧರನ್.

SCROLL FOR NEXT