ಆಸ್ಟ್ರೇಲಿಯಾದ ಜೋಶ್ ಹ್ಯಾಜೆಲ್ ವುಡ್ ವಿಕೆಟ್ ಪಡೆದ ನಂತರ ಸಂಭ್ರಮಿಸುತ್ತಿರುವ ಆರ್ ಅಶ್ವಿನ್ ಚಿತ್ರ 
ಕ್ರಿಕೆಟ್

ಬಾಕ್ಸಿಂಗ್ ಡೇ ಟೆಸ್ಟ್: 200ಕ್ಕೆ ಆಸೀಸ್ ಕಟ್ಟಿಹಾಕಿದ ಭಾರತ, ಗೆಲುವಿಗೆ 70 ರನ್ ಗಳ ಅಗತ್ಯ

 ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ನ ದ್ವಿತೀಯ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ ತಂಡವನ್ನು 200 ರನ್ ಗಳಿಗೆ ಕಟ್ಟಿಹಾಕುವಲ್ಲಿ ಭಾರತ ಮಂಗಳವಾರ  ಯಶಸ್ವಿಯಾಗಿದ್ದು,  ಪಂದ್ಯ ಗೆಲ್ಲಲು 70 ರನ್ ಗಳ ಅಗತ್ಯವಿದೆ.

ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ನ ದ್ವಿತೀಯ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ ತಂಡವನ್ನು 200 ರನ್ ಗಳಿಗೆ ಕಟ್ಟಿಹಾಕುವಲ್ಲಿ ಭಾರತ ಮಂಗಳವಾರ  ಯಶಸ್ವಿಯಾಗಿದ್ದು,  ಪಂದ್ಯ ಗೆಲ್ಲಲು 70 ರನ್ ಗಳ ಅಗತ್ಯವಿದೆ.

ಆಸ್ಟ್ರೇಲಿಯಾದ ಕೊನೆಯ ವಿಕೆಟ್ ಬೀಳುವುದರೊಂದಿಗೆ ಭೋಜನ ವಿರಾಮ ತೆಗೆದುಕೊಳ್ಳಲಾಯಿತು. ವಿರಾಮದ ಬಳಿಕ ಭಾರತ ಆಸ್ಟ್ರೇಲಿಯಾ ನೀಡಿರುವ ಕಡಿಮೆ ರನ್ ಗಳ ಗುರಿಯನ್ನು ಬೆನ್ನತ್ತಲಿದೆ.

ಅಜಿಂಕ್ಯ ರಹಾನೆ (112) ಮತ್ತು ರವೀಂದ್ರ ಜಡೇಜಾ (57) ರನ್ ಗಳ ನೆರವಿನಿಂದ ಮೂರನೇ ದಿನಾದಟವಾದ ನಿನ್ನೆ ಭಾರತ 326 ರನ್ ಗಳಿಸುವ ಮೂಲಕ 131 ರನ್ ಗಳ ಮುನ್ನಡೆ ಕಾಯ್ದುಕೊಂಡಿತ್ತು. 

ಆರನೇ ಕ್ರಮಾಂಕದಲ್ಲಿ ಆಡಿದ ಕ್ಯಾಮರೂನ್ ಗ್ರೀನ್ 45 ರನ್ ಗಳಿಸಿ ಆಸ್ಟ್ರೇಲಿಯಾ ಪರ ಹೆಚ್ಚಿನ ರನ್ ಪಡೆದರೆ, ಮ್ಯಾಥ್ಯೂ ವಾಡೆ 40ರನ್ ಗಳಿಸಿದರು. ಗ್ರೀನ್ ಮತ್ತು ಪ್ಯಾಟ್ ಪ್ಯಾಟ್ ಕಮ್ಮಿನ್ಸ್ ಏಳನೇ ವಿಕೆಟ್ ಜೊತೆಯಾಟದಲ್ಲಿ 57 ರನ್ ಗಳಿಸಿದರು. ಹೊಸ ಬಾಲ್ ತೆಗೆದುಕೊಂಡ ನಂತರ ಈ ಜೋಡಿ ಬೇರ್ಪಟ್ಟಿತು. 

ಭಾರತ ಪರ ವೇಗಿ ಮೊಹಮ್ಮದ್ ಸಿರಾಜ್ 37 ರನ್ ಗಳಿಗೆ ಮೂರು ವಿಕೆಟ್ ಪಡೆದರೆ, ಜಸ್ಪ್ರೀತ್ ಬೂಮ್ರಾ 54ಕ್ಕೆ ಎರಡು, ರವೀಂದ್ರ ಜಡೇಜಾ 28ಕ್ಕೆ ಎರಡು ಮತ್ತು ಆರ್ ಅಶ್ವಿನ್ 71ಕ್ಕೆ 2 ವಿಕೆಟ್ ಕಬಳಿಸಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿ ತೋರಿಸಿದ್ದ ರಿಗ್ಗಿಂಗ್ ವಾತಾವರಣ ನಿಜವಾಗಿಯೂ ನೋಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ

ಹೃದಯವಿದ್ರಾವಕ: 'ಚಿಕಿತ್ಸೆಗೆ ಹಣವಿಲ್ಲ'.. 6 ವರ್ಷದ ಮಗಳನ್ನೇ ಕೆರೆಗೆ ಎಸೆದ ತಾಯಿ; ಆಟೋ ಚಾಲಕನಿಂದ ರಕ್ಷಣೆ

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ